ಮುಂದಗೋಡ

ಪ್ರಪಂಚದ ದೊಡ್ಡ ಸಂವಿಧಾನ ಭಾರತದ ಸಂವಿಧಾನ:ಶಂಕರ ಗೌಡಿ

ಪ್ರಪಂಚದ ದೊಡ್ಡ ಸಂವಿಧಾನ ಭಾರತದ ಸಂವಿಧಾನ:ಶಂಕರ ಗೌಡಿ

ಲೋಕದರ್ಶನ ವರದಿ

ಮುಂಡಗೋಡ:ಪ್ರಪಂಚದ ದೊಡ್ಡ ಸಂವಿಧಾನ ಭಾರತದ ಸಂವಿಧಾನ ನಾವೆಲ್ಲ ಸಂವಿಧಾನದ ಅಡಿಯಲ್ಲಿ ಪ್ರಜಾಸತ್ತಾತ್ಮಕವಾಗಿ ಬದುಕುತ್ತಿದ್ದೇವೆ ಎಂದು ತಹಶೀಲ್ದಾರ ಶಂಕರ ಗೌಡಿ ಹೇಳಿದರು. 

ಪಟ್ಟಣದ ಎಲ್.ವಿ.ಕೆ. ಸಭಾಭವನದಲ್ಲಿ ಲೊಯೋಲ ವಿಕಾಸ ಕೇಂದ್ರ ಮತ್ತು ಯುವರತ್ನ ಯುವ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ನಮ್ಮ ಹಕ್ಕು ನಮ್ಮ ದಾರಿಯಲ್ಲಿ ಬದುಕಲು ಸಂವಿಧಾನ ನಮಗೆ ದಾರಿ ತೋರಿಸಿದೆ. ಸಂವಿಧಾನ ರಚನೆಗೆ ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನಗಳ ಸಮಯ ತೆಗೆದುಕೊಳ್ಳಲಾಯಿತು. ಮತದಾರರ ಪರಿಷ್ಕೃತ ಯಾದಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಪರಿಶೀಲಿಸಿ ಡಿ.8ರೊಳಗೆ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ ಎಂದರು. ವಕೀಲ ರಾಘವೇಂದ್ರ ಮಳಗಿಕರ ಉಪನ್ಯಾಸ ನೀಡಿ ಇತಿಹಾಸ ಓದದವರು ಇತಿಹಾಸ ಸೃಷ್ಟಿಸಲಾರರು. ಸಂವಿಧಾನದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. 

ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆ ಹೊಂದಿದೆ. ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ್ ಮೂಲಮಂತ್ರವಾಗಿತ್ತು. ಸಂವಿಧಾನದ ಪ್ರಕಾರ ಪ್ರಜೆಗಳೆ ಪ್ರಭುಗಳು. ಕಾನೂನುಗಳ ಬಗ್ಗೆ ತಿಳಿದಿರಬೇಕು ಎಂದರು. ಪಿಎಸ್ಐ ಬಸವರಾಜ ಮಬನೂರ ಮಾತನಾಡಿ ಶೈಕ್ಷಣಿಕವಾಗಿ, ಭೌಗೋಳಿಕವಾಗಿ, ರಾಜಕೀಯವಾಗಿ, ಕಾನೂನಿನ ಚೌಕಟ್ಟಿನಲ್ಲಿ ಸಮಾನತೆಗಾಗಿ ಬದುಕಲು ನಮಗೆ ಸಂವಿಧಾನದ ನೆರವು ಅಗತ್ಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಫಾ.ಮೆಲ್ವಿನ್ ಲೋಬೋ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಸುಭದ್ರತೆ, ನಾಡಿನ ಏಳ್ಗೆಗಾಗಿ, ಶಾಂತಿಯ ತೋಟ ನಿಮರ್ಾಣಕ್ಕಾಗಿ ಶ್ರಮಿಸಿದವರು ಎಂದರು. ಫಾ.ಅನಿಲ ಡಿಸೋಜಾ ಸಂವಿಧಾನದ ಪ್ರಸ್ತಾವನೆ ಓದಿದರು.  

ಇದಕ್ಕೂ ಮುನ್ನ ಪಟ್ಟಣದ ಪರಿವೀಕ್ಷಣಾ ಮಂದಿರದಿಂದ ಹೊರಟ ಜಾಥಾಕ್ಕೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ  ರಫೀಕ್ಸಾಬ್ ಮೀರಾನಾಯ್ಕ ಚಾಲನೆ ನೀಡಿ ಮಾತನಾಡಿ ಭಾರತದ ಸಂವಿಧಾನ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಸುದಿನ ಎಂದರು. ಅಂಬೇಡ್ಕರ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪ್ರಾಧ್ಯಾಪಕ ನಾಗರಾಜ ಎಚ್. ಮಾಲಾರ್ಪಣೆ ಮಾಡಿದರು. ಕವಿತಾ ಆಲೂರ ಸ್ವಾಗತಿಸಿದರು. ಹಜರತ್ ಮತ್ತು ಸಂಗಡಿಗರು ಜಾಗೃತಿ ಗೀತೆ ಹಾಡಿದರು. ಮಂಗಳಾ ಮೋರೆ ಕಾರ್ಯಕ್ರಮ ನಿರೂಪಿಸಿದರು. ಬರಮಣ್ಣ ಚಕ್ರಸಾಲಿ ವಂದಿಸಿದರು 

ಸುದ್ದಿ ಓದಿ