ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿ:ಜಿಪಂ ಸಿಇಒ
ಬಳ್ಳಾರಿ 01: ಗ್ರಾಮಮಟ್ಟದಲ್ಲಿ ಬ್ಯಾಂಕಿಗ್ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ಮಿಶನ್ ಒನ್ ಜಿಪಿ ಒನ್ ಬಿಸಿ ಸಖಿ ಯೋಜನೆ ರೂಪಿಸಲಾಗಿದೆ. ನೀವು ಬ್ಯಾಂಕಿನ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಬಿ.ಸಿ. ಸಖಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಬೇಕು ಎಂದು ಬಳ್ಳಾರಿ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್. ಹೇಳಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಪಂಚಾಯತ ಸಹಯೋಗದೊಂದಿಗೆ ಮಿಶನ್ ಒನ್ ಜಿಪಿ ಒನ್ ಬಿಸಿ ಸಖಿ ತರಬೇತಿ ಉದ್ಘಾಟನಾ ಕಾರ್ಯಕ್ರವನ್ನು ಉದ್ದೇಶಿಸಿ ಅವರು ಮಾರ್ಗದರ್ಶನ ಮಾಡಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಬಳ್ಳಾರಿ ಸ್ವ-ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಶರಣ ಬಸವ ರೆಡ್ಡಿ ಡಿ, ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಕಾರ್ಯಕ್ಷೇತ್ರದಲ್ಲಿ ಪರಿಪೂರ್ಣತೆಯಿಂದ ನಿಮ್ಮನ್ನೂ ನೀವು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಎಂದು ತಿಳಿಸಿದರು.
ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ ಜಿಲ್ಲಾ, ಉಪನ್ಯಾಸಕ ಮಹಮ್ಮದ ನಿಸಾರ, ಸಿದ್ದಲಿಂಗಮ್ಮ, sಸಂತೋಷ ಕುಮಾರ, ಕಿರಣ ಕುಮಾರ ಉಪಸ್ಥಿತರಿದ್ದರು, ಬಳ್ಳಾರಿ ಜಿಲ್ಲೆಯ 29 ಜನ ಮಿಶನ್ ಒನ್ ಜಿಪಿ ಒನ್ ಬಿಸಿ ಸಖಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.