ತಾಳಿಕೋಟಿ

ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ

ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ

ತಾಳಿಕೋಟಿ: ತಾಲೂಕಿನ ಹಿರೂರ ಗ್ರಾಮ ಪಂಚಾಯತಿಯಲ್ಲಿ ಬುಧವಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಲಭ್ಯವಿರುವ ಕಾಮಗಾರಿಗಳನ್ನು ಜನಸಾಮನ್ಯರ ಸ್ವ-ಸಹಾಯ ಸಂಘದ ಮಹಿಳೆಯರು ಲಿಂಗತ್ವ ಅಲ್ಪಸಂಖ್ಯಾತರು ದುರ್ಬಲ ವರ್ಗದವರಿಗೆ ತಲುಪಿಸುವ ಹಾಗೂ ಮಹಿಳಾ ಪಾಲ್ಗೋಳ್ಳುವಕೆ ಪ್ರಮಾಣವನ್ನು ಶೇ.65ರಷ್ಟು  ಹೇಚ್ಚಿಸುವ ಉದ್ದೇಶದಿಂದ ಬುದವಾರದಂದು ಜರುಗಿದ ಉದ್ದೋಗ ಖಾತ್ರಿ ನಡಿಗೆ ಸುಸ್ಥಿರತೆಯಡಿಗೆ, ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ, ವಿಶೇಷ ಮಹಿಳಾ ಗ್ರಾಮ ಸಭೆಯು  ಗ್ರಾಮ ಪಂಚಾಯತ ಅಧ್ಯಕ್ಷರಾದ ವಿಜಯಲಕ್ಷ್ಮೀ ಎಸ  ಅಂಗಡಗೇರಿ ಕಾರ್ಯಕ್ರಮವನ್ನು ಹೂ ಕೂಂಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. 

ಈ ಕಾರ್ಯಕ್ರಮದಲ್ಲಿ ಮಲಕಪ್ಪ ಬಿ ಎಮ  ತಾಲೂಕಾ ಮಾಹಿತಿ ಶಿಕ್ಷಣ ಮತ್ತು ಸಂಹವನ ಸಂಯೋಜಕ  ಮಾತನಾಡಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡವುದು ಮತ್ತು ವ್ಯಯಕ್ತಿಕ ಕಾಮಗಾರಿ ಮಾಡಿಕೊಳ್ಳುವದರ ಮೂಲಕ ಲಾಭ ಪಡೆಯಬಹುದಾಗಿದೆ. ಕಾಯಕ ಸಂಘಗಳನ್ನು  ರಚಿಸಿಕೊಂಡು ಕೆಲಸಕ್ಕೆ ಬೇಡಿಕೆ ಸಲ್ಲಿಸಿ, ಕೆಲಸ ಪಡೆಯರಿ ಎಂದು ತಿಳಿಸಿದರು.

 ಪುರುಷ ಮತ್ತು ಮಹಿಳೆಯರಿಗೆ ದಿನಕ್ಕೆ 309 ರೂಗಳ ಸಮಾನ ವೇತನವಿದ್ದು, ವರ್ಷಕ್ಕೆ ಒಂದು ಕುಟುಂಬಕ್ಕೆ 100 ದಿನ ಉದ್ಯೋಗ ಒದಗಿಸಲಾಗುತ್ತದೆ ಇದರ ಸದುಪಯೋಗ ಪಡೆಯಬೇಕು ಮತ್ತು ಹೆಚ್ಚು ಜನರು ಮಹಿಳೆರು ನರೇಗಾದಲ್ಲಿ ಆಸಕ್ತಿಯಿಂದ ಕೆಲಸಕ್ಕೆ ಬರಬೇಕು ಎಂದು ಕರೆ ನೀಡಿದರು.

 ನಂತರ ಮನರೇಗಾ ಎಲ್ಲಾ ಕೂಲಿ ಕಾಮರ್ಿಕರು ಇ-ಶ್ರಮ ಕಾರ್ಡ ಮಾಡಿಕೋಳ್ಳಲು ಸಲಹೆ ನೀಡಿ, ಅದರ ಉಪಯೋಗದ ಕುರಿತು ತಿಳಿಸಿದರು. ಈ ಸಮಯದಲ್ಲಿ  ಗ್ರಾ ಪಂ ಕಾರ್ಯದರ್ಶಿ   ಎಚ್.ಎ.ಬಿರಾದರ, ಗ್ರಾಮ ಪಂಚಾಯತ ಸಿಬ್ಬಂದಿ ವರ್ಗದವರು,  ಗ್ರಾಮದ ಮಹಿಳಾ ಸಂಘದ ಒಕ್ಕುಟದ ಅಧ್ಯಕ್ಷರು ಹಾಗೂ ಪ್ರತಿನಿಧಿಗಳು, ಸದಸ್ಯರುಗಳು ಮತ್ತು ಗ್ರಾಮದ ಮಹಿಳೆಯರು ಭಾಗವಹಿಸಿದರು 

ಸುದ್ದಿ ಓದಿ