ಧಾರವಾಡ - ಹುಬ್ಬಳ್ಳಿ

ಮಹಿಳೆ ವಿವಸ್ತ್ರ ಪ್ರಕರಣ; ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಮಹಿಳೆ ವಿವಸ್ತ್ರ  ಪ್ರಕರಣ; ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ


ಹುಬ್ಬಳ್ಳಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದ ಪೊಲೀಸರು ವಿವಸ್ತ್ರಗೊಳಿಸಿ ಥಳಿಸಿದ್ದಾರೆಂಬ ವಿಡಿಯೋ ವೈರಲ್ ಆಗಿದ್ದು, ವಶಕ್ಕೆ ಪಡೆದ ವೇಳೆ ಮಹಿಳೆಯೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ, ತನ್ನ ಮೈಮೇಲಿನ ಬಟ್ಟೆ ಬಿಚ್ಚಿಕೊಂಡಿದ್ದಾಳೆ ಎಂದು ಮಹಾನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಬುಧವಾರ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಜೆಪಿ‌ ಕಾರ್ಯಕರ್ತೆ ಸುಜಾತ ಹಂಡಿಯನ್ನು ಪ್ರಕರಣವೊಂದರಲ್ಲಿ ಜ.5ರಂದು ವಶಕ್ಕೆ ಪಡೆಯಲು ಹೋದಾಗ ಪೊಲೀಸರು ವ್ಯಾನ್ ನಲ್ಲಿ ವಿವಸ್ತ್ರಗೊಳಿಸಿ ಥಳಿಸಲಾಗಿದೆ ಎಂಬ ವಿಡಿಯೋ ವೈರಲ್ ಆಗಿದೆ.

ಘಟನೆ ಬಗ್ಗೆ ಬುಧವಾರ ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಸುಜಾತಾ ಹಂಡಿ ಮೇಲೆ ಕೊಲೆ ಆರೋಪದನ್ವಯ ಪೊಲೀಸರು ವಶಕ್ಕೆ ಪಡೆಯಲು ಹೋಗಿದ್ದಾರೆ. ಆಗ ನಮ್ಮ‌ ಮಹಿಳಾ ಸಿಬ್ಬಂದಿಯ ಹೊಟ್ಟೆಗೆ ಕಚ್ಚಿ ಗಾಯಗೊಳಿಸಿದ್ದಾಳೆ. ಸಿಬ್ಬಂದಿಯನ್ನು ತಳ್ಳಿದ್ದಾಳೆ. ವಾಹನದಲ್ಲಿ ಕುಳ್ಳರಿಸಿದಾಗ ತಾನೆ ಬಟ್ಟೆ ಬಿಚ್ಚಿಕೊಂಡು ರಂಪಾಟ ಮಾಡಿದ್ದಾಳೆ‌ ಎಂದರು.

ಸುಜಾತ ವಿರುದ್ಧ ಈ ಮೊದಲು ಹಲವು ಪ್ರಕರಣ ದಾಖಲಾಗಿವೆ. ಐವರು ಪೊಲೀಸ ಸಿಬ್ಬಂದಿ ಮೇಲೆ ಹಲ್ಲೆಯಾಗಿದೆ ಎಂದರು. ಕಾರ್ಯಕರ್ತೆಯನ್ನು ಪೊಲೀಸರು‌ ವಿವಸ್ತ್ರಗೊಳಿಸಿ ಥಳಿಸಿದ್ದನ್ನು‌ ಖಂಡಿಸಿ ಬಿಜೆಪಿಯವರು ಕೇಶ್ವಾಪುರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಸುದ್ದಿ ಓದಿ