ಗದಗ

ಗಾಂಧೀಜಿ-150 ಅಭಿಯಾನದ ಸ್ತಬ್ಧಚಿತ್ರಕ್ಕೆ ಸಂಭ್ರಮದ ಸ್ವಾಗತ

ಗಾಂಧೀಜಿ-150 ಅಭಿಯಾನದ ಸ್ತಬ್ಧಚಿತ್ರಕ್ಕೆ ಸಂಭ್ರಮದ ಸ್ವಾಗತ

ಗದಗ 16: ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವಷರ್ಾಚರಣೆ ಅಂಗವಾಗಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗಾಂಧಿ-150 ಅಭಿಯಾನದ ಶಾಂತಿ ಮಾರ್ಗ ಸ್ತಬ್ಧಚಿತ್ರ ಗದುಗಿಗೆ ರವಿವಾರ ಆಗಮಿಸಿತ್ತು. ಸೋಮವಾರ ದಿ.15 ರಂದು ಸ್ತಬ್ದ ಚಿತ್ರವು ಮುಂಜಾನೆ 9ಗಂಟೆಗೆ ಬೆಟಗೇರಿ ಮೂಲಕ ನರೇಗಲ್ಲಗೆ ಆಗಮಿಸಿದಾಗ ಎಪಿಎಂಸಿ ಉಪಾಧ್ಯಕ್ಷ ಎನ್.ವಿ.ಲಕ್ಕನಗೌಡ್ರ, ಪ.ಪಂ ಸದಸ್ಯ ಯಲ್ಲಪ್ಪ ಮನ್ನೊಡ್ಡರ, ಮುಖ್ಯಾಧಿಕಾರಿ ಎಸ್.ಹುಲ್ಲಮ್ಮನವರ ಅವರು ಸ್ವಾಗತಿಸಿ ಬೀಳ್ಕೊಟ್ಟರು. ಗಜೇಂದ್ರಗಡಗೆ ಆಗಮಿಸಿದ ಸ್ತಬ್ದ ಚಿತ್ರಕ್ಕೆ  ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಹನುಮಂತಮ್ಮ ನಾಯಕ ಅವರು ಸ್ವಾಗತಿಸಿ ಬೀಳ್ಕೊಟ್ಟರು. ರೋಣ ಪಟ್ಟಣಕ್ಕೆ ಮಧ್ಯಾಹ್ನ 12ಗಂಟೆಗೆ ತಲುಪಿದ ಸ್ತಬ್ಧ ಚಿತ್ರಕ್ಕೆ ತಹಶೀಲ್ದಾರ ಅಜಿತ ಎಂ., ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಚಳಗೇರಿ ಅವರು ಸ್ವಾಗತಿಸಿ ಬೀಳ್ಕೊಟ್ಟರು. ತದನಂತರ ಹಿರೇಹಾಳ ಗ್ರಾಮಕ್ಕೆ ಆಗಮಿಸಿದ ಸ್ತಬ್ದ ಚಿತ್ರಕ್ಕೆ ಪಿ.ಡಿ.ಓ ಬಿ.ಎಸ್.ದಳವಾಯಿ ಹಾಗೂ ಹಿರೇಹಾಳ ಗ್ರಾಮದ ಗುರುಹಿರಿಯರು ಗಾಂಧೀಜಿ ಪ್ರತಿಮೆಗೆ  ಮಾಲಾರ್ಪಣೆ ಮಾಡಿ ಗಾಂಧೀಜಿ-150 ಅಭಿಯಾನದ ಸ್ತಬ್ದ ಚಿತ್ರವನ್ನು ಸ್ವಾಗತಿಸಿ ಗದಗ ಜಿಲ್ಲೆಯಿಂದ ಬೀಳ್ಕೊಟ್ಟರು.

ಸುದ್ದಿ ಓದಿ