ತಾಳಿಕೋಟಿ

ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ


ತಾಳಿಕೋಟಿ 24:  ಪಟ್ಟಣದ ಎಸ್‌.ಎಸ್‌.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ವಿಜಯಪುರದ  ಎಚ್‌.ಎಸ್‌.ಪಾಟೀಲ ಮಹಿಳಾ ಪದವಿ ವಿದ್ಯಾಲಯದಲ್ಲಿ ಬುಧವಾರ, 2026-2027ನೇ ಸಾಲಿಗೆ ಹೊಸದಾಗಿ ಬಿಎ,ಬಿಕಾಂ ಹಾಗೂ ಬಿಎಸ್ಸಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಸಚಿನ್ ಎಚ್‌.ಪಾಟೀಲ ಅವರು ಮಾತನಾಡಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಂಸ್ಥೆಯಿಂದ ಸಿಗುವ ಸವಲತ್ತುಗಳ ಸದುಪಯೋಗ ಮಾಡಿಕೊಂಡು ಕಠಿಣ ಪರಿಶ್ರಮದಿಂದ ಚೆನ್ನಾಗಿ ಅಧ್ಯಯನ ಮಾಡಿ ಸಂಸ್ಥೆ ಹಾಗೂ ಹೆತ್ತವರ ಕೀರ್ತಿಯನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಪ್ರೌಢಶಾಲೆ ಶಿಕ್ಷಕರಾದ ಬಿ.ಆಯ್‌.ಹಿರೇಹೊಳಿ, ದೈಹಿಕ ಶಿಕ್ಷಣ ಶಿಕ್ಷಕ ಎಮ್‌.ಎಸ್‌.ರಾಯಗೊಂಡ, ಹಿರಿಯ ಉಪನ್ಯಾಸಕ ಆರ್‌.ಆರ್‌.ಬಡಗಣ, ಪಿ.ಎಮ್‌.ಚಲವಾದಿ, ಗಾಯತ್ರಿ. ಕೆ.ಪತ್ತಾರ, ಉಪಸ್ಥಿತರಿದ್ದರು.ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಉಪನ್ಯಾಸಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿನಿ ರಮ್ಯ. ಕರಣಿ ನಿರೂಪಿಸಿದರು. ಕಾವೇರಿ. ಮಸಕನಾಳ ವಂದಿಸಿದರು. 


ಸುದ್ದಿ ಓದಿ