ಕೃಷ್ಣಾ ನದಿ ತೀರದಲ್ಲಿ ಮೊಸಳೆ ಪ್ರತ್ಯಕ್ಷ ಭಯಭೀತರಾದ ಗ್ರಾಮಸ್ಥರು
ಲೋಕದರ್ಶನ ವರದಿ,
ಜಮಖಂಡಿ 4: ತಾಲೂಕಿನ ಕೃಷ್ಣಾ ನದಿ ತೀರದಲ್ಲಿ ಒಂದೇ ದಿನಗಳಲ್ಲಿ ಎರಡು ಗ್ರಾಮಗಳಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಕಂಡಿದನ್ನು ನೋಡಿ ಗ್ರಾಮಸ್ಥರು ಭಯಭೀತರಾದ ಘಟನೆ ನಡೆದಿದೆ.
ಕೃಷ್ಣಾ ನದಿಯಲ್ಲಿ ನೀರು ಸಂಪೂರ್ಣವಾಗಿ ಬತ್ತಿರುವ ಹಿನ್ನಲೆಯ ನೀರಿಗಾಗಿ ಅರಸಿಕೊಂಡು ಜಲಚರ ಪ್ರಾಣಿಗಳು ನದಿಯಿಂದ ಹೊರಗೆ ಬರುತ್ತಿವೆ. ಟಕ್ಕಳಕಿ ಹಾಗೂ ಆಲಗೂರ ಗ್ರಾಮದಲ್ಲಿ ಕೃಷ್ಣಾ ನದಿ ಬತ್ತಿರುವ ಕಾರಣ ನೀರಿನ ದಾಹವನ್ನು ಇಂಗಿಸಿಕೊಳ್ಳಲು ನದಿಯ ತೀರದ ಪಕ್ಕದ ಹೊಲ, ಗದ್ದೆಗಳಲ್ಲಿ ಮೊಸಳೆಗಳು ಪ್ರತ್ಯಕ್ಷವಾಗುತ್ತಿವೆ.
ನೀರಿಗಾಗಿ ಅರಸಿಕೊಂಡು ಬಂದ ಮೊಸಳೆಗಳು ಅಲೆದಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ಭಯಭೀತರಾದರೆ. ಮತ್ತೊಂದೆಡೆ ಕೆಲವಂದಿಷ್ಟು ಗ್ರಾಮಸ್ಥರು ಸೇರಿಕೊಂಡು ಮೊಸಳೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.
ಟಕ್ಕಳಕಿ ಭಾಗದ ಅರಣ್ಯ ಇಲಾಖೆ ಅಧಿಕಾರಿಗಳಾದ ಆರ್,ಎ,ಬೆಳವಡಿ ಮತ್ತು ರಾಜಶೇಖರ ಜಾಧವ ಹಾಗೂ ಆಲಗೂರ ಗ್ರಾಮದ ಸಿದ್ದು ಕುಳಲಿ ಅವರು ಸ್ಥಳಕ್ಕೆ ಆಗಮಿಸಿ, ಮೊಸಳೆಯನ್ನು ಹಿಡಿದು. ಆಲಮಟ್ಟಿ ಜಲಾಯಶಯಕ್ಕೆ ಬಿಡಲು ಹೋಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿ ಪವಣ ಕುರನಿಂಗ ಮಾತನಾಡಿ, ನದಿಯ ತೀರದ ಗ್ರಾಮಸ್ಥರು ಮೊಸಳೆಯು ಇರುವದು ಕಂಡುಬಂದರೆ ಮಾಹಿತಿಯನ್ನು ನೀಡಬೇಕು. ಗ್ರಾಮಸ್ಥರು ಯಾರು ಮೊಸಳೆಯನ್ನು ಹಿಡಿಯು ಸಾಹಸಕ್ಕೆ ಮುಂದಾಗಬಾರದು. ಮೊಸಳೆಯನ್ನು ಹಿಡಿಯಲು ಹೋಗಿ ಅಪಾಯಕಾರಿ ಆಗುವ ಸಂಭವ ಇರುತ್ತದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿ, ಮೊಸಳೆಯನ್ನು ಹಿಡಿಯಲು ಎಲ್ಲ ಸಲಕರಣೆಗಳು ಇರುತ್ತವೆ. ಯಾರು ಮೊಸಳೆಯನ್ನು ಹಿಡಿಯಲು ಮುಂದಾಗಬಾರದೆಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.