ಅನಂತನಾಗ್ ಹುಟ್ಟುಹಬ್ಬಕ್ಕೆ ವಿಆರ್ ಎಲ್ ಫಿಲಂ ಗಿಫ್ಟ್ ಏನು ಗೊತ್ತಾ?
ಬೆಂಗಳೂರು, ಸೆ. 04: ಇಂದು ಸ್ಯಾಂಡಲ್ ವುಡ್ ಮೇರು ನಟ ಅನಂತನಾಗ್ ಜನ್ಮದಿನ. ಮೇರು ನಟನ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ವಿಆರ್ ಎಲ್ ಫಿಲಂ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ.
ಉಡುಗೊರೆ ಏನು ಗೊತ್ತಾ? ಟೀಸರ್ ಬಿಡುಗಡೆ. ಹೌದು. ಆನಂದ ಸಂಕೇಶ್ವರ್ ರವರು ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್ ಸಂಸ್ಥೆಯಡಿಯಲ್ಲಿ ನಿರ್ಮಿಸುತ್ತಿರುವ "ವಿಜಯಾನಂದ" ಚಲನಚಿತ್ರದಲ್ಲಿ ಅನಂತ ನಾಗ್ ರವರ ಪಾತ್ರ ಪರಿಚಯದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೊಳಿಸಿದೆ. "ವಿಜಯಾನಂದ" ಚಿತ್ರದಲ್ಲಿ ವಿಜಯ ಸಂಕೇಶ್ವರ್ ರವರ ತಂದೆ ಬಿ ಜಿ ಸಂಕೇಶ್ವರ್ ರವರ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕರಿ ಕೋಟು, ಪೇಟ ತೊಟ್ಟು, ಮಗ ವಿಜಯ್ ಗೆ ವಿಶ್ರಾಂತಿ ಪಡೆಯುವಂತೆ ಪ್ರೀತಿಯಿಂದ ಸಲಹೆ ನೀಡುವ ದೃಶ್ಯ ಟೀಸರ್ ನಲ್ಲಿ ಸೊಗಸಾಗಿ ಮೂಡಿಬಂದಿದೆ.
“ಟೀಸರ್ ಚೆನ್ನಾಗಿದೆ. ಬೆಳ್ಳಿ ಪರದೆಯಲ್ಲಿ ಈ ಚಿತ್ರವನ್ನು ವೀಕ್ಷಿಸುವ ಕುತೂಹಲ ಹೆಚ್ಚಿದೆ” ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಹಾಗೂ ಅನಂತನಾಗ್ ಅವರಿಗೆ ಜನ್ಮದಿನದ ಶುಭ ಕೋರಿದ್ದಾರೆ.