ಭಯ - ಆತಂಕವಿಲ್ಲದೇ ಲಸಿಕೆ ಹಾಕಿಸಿಕೊಳ್ಳಿ: ಪೂನಾವಾಲಾ ಮನವಿ
ನವದೆಹಲಿ , ಜ 3 : ಆಕ್ಸ್ ಫರ್ಡ್-ಆಸ್ಟ್ರಾಝೆನೆಕಾ ಕೊರೊನಾ ಸೋಂಕು ನಿವಾರಕ ಲಸಿಕೆ ಜನತೆಗೆ ಮುಂಬರುವ ಲಭ್ಯವಾಗಲಿದೆ. ಜನತೆ ಯಾವುದೇ ಭಯ- ಆತಂಕವಿಲ್ಲದೇ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಳ್ಳುವಂತೆ ಸೇರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನಾವಾಲಾ ಮನವಿ ಮಾಡಿವಿದ್ದಾರೆ. ಇಂದು ಡಿಸಿಜಿಐ ಭಾರತದಲ್ಲಿ ಕೊರೋನಾ ಸೋಂಕಿತರ ತುರ್ತು ಚಿಕಿತ್ಸೆಗಾಗಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಬಳಕೆಗೆ ಡಿಸಿಜಿಐ ಅನುಮತಿ ನಂತರ ಅವರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. 'ಹೊಸ ವರ್ಷದ ಶುಭಾಶಯ ಕೋರಿದ ಅವರು, ಎಲ್ಲರಿಗೂ! ಲಸಿಕೆಯನ್ನು ದಾಸ್ತಾನು ಮಾಡುವ ಮೂಲಕ ಕರೋನ ಮುಕ್ತ ಸಮಾಜ ಮಾಡಲು ಎಲ್ಲಾ ಅಪಾಯ ದಾಟಿ ಬಂದಿದ್ದೇವೆ ಎಂದರು. ಆದರೂ ನಮ್ಮ ಸತತ ಪ್ರಯತ್ನ ಅಂತಿಮವಾಗಿ ಫಲನೀಡಿದೆ. ಭಾರತದ ಮೊದಲ ಕೋವಿಡ್-19 ಲಸಿಕೆಯನ್ನು ಅನುಮೋದಿಸಲಾಗಿದೆ. ಇದು ಸುರಕ್ಷಿತ, ಹೆಚ್ಚು ಪರಿಣಾಮಕಾರಿ ಮತ್ತು ಮುಂಬರುವ ವಾರಗಳಲ್ಲಿ ಲಸಿಕೆ ಲಭ್ಯವಾಗಲಿದೆಎಂದೂ ಪೂನಾವಾಲ ತಿಳಿಸಿದರು.