ಕುಷ್ಟಗಿ

ಕ್ಷಯರೋಗ ಅಂತರಿಕ ಮೌಲ್ಯಮಾಪನ ರಾಜ್ಯ ತಂಡ ಪರಿಶೀಲನೆ

ಕ್ಷಯರೋಗ ಅಂತರಿಕ ಮೌಲ್ಯಮಾಪನ ರಾಜ್ಯ ತಂಡ  ಪರಿಶೀಲನೆ

ಲೋಕದರ್ಶನ ವರದಿ

ಕುಷ್ಟಗಿ 19: ಟಿ.ಬಿ ಮುಕ್ತ ಭಾರತ ಅಭಿಯಾನ ಪ್ರಯುಕ್ತ ಬೆಂಗಳೂರಿನ ಕ್ಷಯರೋಗ ವಿಭಾಗದ ಉಪ ನಿರ್ದೇಶಕ ಡಾ.ಭರತರಾಜ ಹಾಗೂ ಕ್ಷಯರೋಗ ವಿಭಾಗದ ಅಧಿಕಾರಿ ವರ್ಗದ ತಂಡ ಗುರುವಾರ ತಾಲೂಕಿನ ತಾವರಗೇರಿ, ಮುದೇನೂರ, ಕುಷ್ಟಗಿ ಸರಕಾರಿ ಆಸ್ಪತ್ರೆಗಳಿಗೆ ಬೇಟಿ ನೀಡಿ ಕ್ಷಯರೋಗ ಆಂತರಿಕ ಮೌಲ್ಯಮಾಪನ ನಡೆಸಿದರು. 

ಮೇ. 17 ರಿಂದ 19 ರವರೆಗೆ ಮೂರು ದಿನಗಳ ಕಾಲ ಕೊಪ್ಪಳ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರ, ಕುಷ್ಟಗಿ ತಾಲೂಕು ಆಸ್ಪತ್ರೆ, ಹಿರೇಮನ್ನಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರ, ತಾವರಗೇರಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಔಷಧ ಕೇಂದ್ರಗಳಿಗೆ ಬೇಟಿ ನೀಡಿ ಕ್ಷಯರೋಗ ಔಷಧಿ ಹಾಗೂ ರೋಗಿಗಳ ತಪಾಸಣೆ ಮಾಡಲಿದ್ದಾರೆ.

 ರಾಮನಗರ ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ಕುಮಾರ, ಕೊಪ್ಪಳ ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ಶಶಿಧರ, ತಾಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರ, ತಾಲೂಕು ಕ್ಷಯರೋಗ ಮೇಲ್ವಿಚಾರಕ ವೆಂಕಟೇಶ ಗುಡ್ಡಗುಡಿ, ರಾಘವೇಂದ್ರ ರಾವ್, ವೀರಭದ್ರಪ್ಪ, ಸೋಮಶೇಖರ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು 

ಸುದ್ದಿ ಓದಿ