ತಾಳಿಕೋಟಿ

ಜಪೂತ ಬಾಂಧವರಿಂದ ವಿಠ್ಠಲಸಿಂಗಗೆ ಸನ್ಮಾನ

ಜಪೂತ ಬಾಂಧವರಿಂದ ವಿಠ್ಠಲಸಿಂಗಗೆ ಸನ್ಮಾನ

ತಾಳಿಕೋಟೆ: ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರ ಸಂಘಗಳ ಪಾತ್ರ ಅಮೂಲ್ಯವಾದದ್ದು ಇಂತಹ ಸಹಕಾರಿ ತತ್ವದ ಮೂಲಕ ಸಂಘ-ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ನಿರತವಾಗಿವೆ ಎಂದು ದಿ ತಾಳಿಕೋಟಿ ಸಹಕಾರಿ ಬ್ಯಾಂಕ್ ನಿಯಮಿತ ಅಧ್ಯಕ್ಷ ವಿಠ್ಠಲಸಿಂಗ್ ಅ ಹಜೇರಿ ತಿಳಿಸಿದರು. 

ಭಾನುವಾರ ಪಟ್ಟಣದ ರಜಪೂತ ಓಣಿಯ ಭವಾನಿ ಮಂದಿರದಲ್ಲಿ ರಜಪೂತ ಸಮಾಜದ ಬಾಂಧವರು ಏರ್ಪಡಿಸಿದ ಕರ್ನಾಟಕ  ರಾಜ್ಯ ಸಹಕಾರ ಮಹಾಮಂಡಳಿ  ಬೆಂಗಳೂರು ನೀಡುವ ಸಹಕಾರ ರತ್ನ ಪ್ರಶಸ್ತಿ ಪಡೆದ ಕಾರಣ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಸಮಯದಲ್ಲಿ ಹರಿಸಿಂಗ ಮೂಲಿಮನಿ ಸಮಾಜ ಅಧ್ಯಕ್ಷರು, ರತನಸಿಂಗ ಕೋಕಟನೂರ, ಗೋವಿಂದ ಸಿಂಗ ಗೌಡಗೇರಿ, ಬಾಬು ಹಜೇರಿ, ಜೈಯಸಿಂಗ ಮೂಲಿಮನಿ, ಸುರೇಶ ಹಜೇರಿ, ಭರತಸಿಂಗ ವಿಜಾಪುರ, ತಾರಾಸಿಂಗ ಹಜೇರಿ, ಗೋಪಾಲಸಿಂಗ ರಜಪೂತ, ವಿಠ್ಠಲಸಿಂಗ ಹಜೇರಿ, ರಮೇಶ ಗೌಡಗೇರಿ, ವಸಂತಸಿಂಗ ಹಜೇರಿ, ಕಿರಣ ಗೌಡಗೇರಿ,  ರಾಜು ಹಜೇರಿ, ರಾಜು ಮೂಲಿಮನಿ, ರಾಜು ಗೌಡಗೇರಿ, ಬಾಲಾಜಿ ವಿಜಾಪುರ ಹಾಗೂ ಸಮಾಜದ ಮಹಿಳೆಯರು ಹಲವರು  ಪಾಲ್ಗೊಂಡಿದ್ದರು 

ಸುದ್ದಿ ಓದಿ