ಬಸವಜಯ ಮೃತ್ಯುಂಜಯ ಶ್ರೀಗಳಿಗೆ ಗೌರವ ಸಮರ್ಪಣೆ
ತಾಳಿಕೋಟಿ : ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳಿಗೆ ಬಳಗಾನೂರ ಸಮಸ್ತ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಸಮರ್ಪಣೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಗಣ್ಯರಾದ ನಿಂಗನಗೌಡ ಪಾಟೀಲ ಅವರು ಶ್ರೀಗಳು ಸಮಾಜದ ಏಳಿಗೆಗಾಗಿ ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ ಸಮಾಜ ಅವರ ಈ ಸೇವೆಯನ್ನು ಎಂದೂ ಮರೆಯುದಿಲ್ಲ ಇಡೀ ಸಮಾಜ ಅವರ ಜೊತೆ ನಿಂತಿದೆ ಎಂದರು.
ಗೌರವಸಮರ್ಪಣೆ ಸ್ವೀಕರಿಸಿ ಮಾತನಾಡಿದ ಶ್ರೀಗಳು ಬಳಗಾನೂರ ಗ್ರಾಮ ತಾಯಿ ನೀಲಗಂಗಾಂಬಿಕಾಳ ಪುಣ್ಯ ಸ್ಥಾನವಾಗಿದೆ. ನಿಮಗೆ ಉತ್ತಮ ಸಂಸ್ಕಾರಗಳು ಸಿಕ್ಕಿವೆ ನಮ್ಮ ಸಮಾಜದ ಪ್ರತಿಯೊಬ್ಬ ವ್ಯಕ್ತಿ ಸಮಾಜಕ್ಕಾಗಿ ಸಮರ್ಪಣೆ ಮಾಡುವಂಥವನಾಗಬೇಕು ವ್ಯಕ್ತಿ ದೊಡ್ಡವನಲ್ಲ ಸಮಾಜ ದೊಡ್ಡದು, ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ನಾವು ಕೆಲಸಮಾಡಬೇಕು ಎಂದರು.
ಈ ಸಮಯದಲ್ಲಿ ಗ್ರಾಮದ ಗಣ್ಯರಾದ ಪ್ರಭುಗೌಡ ಪಾಟೀಲ, ಪೃಥ್ವಿರಾಜ ಪಾಟೀಲ, ಚಂದ್ರಶೇಖರ ಅಲದಿ, ಶ್ರೀಕಾಂತ ಬಿರಾದಾರ, ಮುತ್ತು ಮನಹಳ್ಳಿ, ಶಿವನಗೌಡ ಪಾಟೀಲ, ವಿರೇಶ ಬಿರಾದಾರ, ಶ್ರೀಶೈಲ ಬಿರಾದಾರ ಶಂಕರಗೌಡ ಬಿರಾದಾರ, ರಾವೂತರಾಯ ವಾಲಿ, ಶ್ರೀಶೈಲ ಭಂಟನೂರ, ಮಲ್ಲನಗೌಡ ಬಿರಾದಾರ, ಚನ್ನು ಬಿರಾದಾರ, ಸಂತೋಷ ದೇಸಾಯಿ, ಅನೀಲಗೌಡ ಪಾಟೀಲ, ಎಂ.ಬಿ.ಅಲದಿ(ವಕೀಲರು) ಅಂಬರೀಶಗೌಡ ಪಾಟೀಲ, ವೀರನಗೌಡ ಬಿರಾದಾರ, ಅಪ್ಪುಗೌಡ ಬಿರಾದಾರ, ಸಂಗಮೇಶ ಕೊಂಡಗೂಳಿ, ಮಂಜು ಮಸಿಬನಾಳ, ಅಣ್ಣಪ್ಪಗೌಡ ಬಿರಾದಾರ ಇದ್ದರು