ತಾಳಿಕೋಟಿ

ರಾಜವಾಡೆದಿಂದ ಶಾಸಕ ನಡಹಳ್ಳಿಗೆ ಸನ್ಮಾನ

ರಾಜವಾಡೆದಿಂದ ಶಾಸಕ ನಡಹಳ್ಳಿಗೆ ಸನ್ಮಾನ

ತಾಳಿಕೋಟಿ ೨೫: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ) ಅವರನ್ನು ರಾಜವಾಡೆ ವತಿಯಿಂದ ಸನ್ಮಾನಿಸಿ ಗೌರವ ಸಮರ್ಪಣೆ ನೀಡಲಾಯಿತು.

ಪಟ್ಟಣದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಅಡಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ರಾಜವಾಡೆಗೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಈ ಸನ್ಮಾನ ನೀಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ನಡಹಳ್ಳಿ ಅವರು ತಾಳಿಕೋಟಿ ಪಟ್ಟಣವನ್ನು ಒಂದು ಸುಂದರ ಮಾದರಿ ನಗರವನ್ನಾಗಿ ಮಾಡುವುದು ನನ್ನ ಕನಸಾಗಿದೆ. ಈ ಮೊದಲು ನಗರದ ಸೌಂದರೀಕರಣವನ್ನು ಹೆಚ್ಚಿಸಲು ಸುಸಜ್ಜಿತವಾದ ರಸ್ತೆ ಹಾಗೂ ವಿಶೇಷ ವಿದ್ಯುತ್ದೀಪಗಳನ್ನು ಹಾಕಿಸಿದ್ದೇನೆ.

ಈಗ ಮತ್ತೇ ಸುಮಾರು 8.50 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಇದೆಲ್ಲವೂ ನಿಮ್ಮೆಲ್ಲರ ಸಹಕಾರದಿಂದಲೇ ಸಾಧ್ಯವಾಗಿದೆ. ಮುಂದೆಯೂ ನನಗೆ ನಿಮ್ಮ ಸಹಕಾರ ಹಾಗೂ ಆಶೀರ್ವಾದಗಳೆರಡೂ ಬೇಕು ಎಂದರು.

ಈ ಸಮಯದಲ್ಲಿ ಪುರಸಭೆ ಸದಸ್ಯರಾದ ಡಿ.ವಿ. ಪಾಟೀಲ, ಅಣ್ಣಪ್ಪ ಜಗತಾಪ, ಮೋಹನ ಬಡಿಗೇರ, ಮುತ್ತಪ್ಪ ಚಮಲಾಪೂರ, ವಾಸುದೇವ ಹೆಬಸೂರ, ಅಕ್ಕಮಹಾದೇವಿ ಕಟ್ಟಿಮನಿ, ಜಯಸಿಂಗ್ ಮೂಲಿಮನಿ, ನಿಂಗಪ್ಪ ಕುಂಟೋಜಿ, ಗಣ್ಯರಾದ ಶರಣಗೌಡ ಗೊಟಖಂಡ್ಕಿ, ಬಸ್ಸು ಕಶೆಟ್ಟಿ, ಮುರಿಗೆಪ್ಪ ಸರಶೆಟ್ಟಿ, ಗುತ್ತಿಗೆದಾರ ರಾಜು ಗುಂಡಕನಾಳ, ಎಂ.ಎಂ. ಪೊಲೀಸ್ಪಾಟೀಲ, ರಾಜುಗೌಡ ಕೋಳೂರ ಇದ್ದರು 

ಸುದ್ದಿ ಓದಿ