ಮುಂದಗೋಡ

ಕೆನರಾ ಬ್ಯಾಂಕ್ ಒಳಗೆ ವಿಷಕಾರಿ ಸರ​‍್ ಪತ್ತೆ! ಗ್ರಾಹಕರಲ್ಲಿ ಕ್ಷಣಕಾಲ ಗಾಬರಿ

ಕೆನರಾ ಬ್ಯಾಂಕ್ ಒಳಗೆ ವಿಷಕಾರಿ ಸರ​‍್ ಪತ್ತೆ! ಗ್ರಾಹಕರಲ್ಲಿ ಕ್ಷಣಕಾಲ ಗಾಬರಿ


ಮುಂಡಗೋಡ 07: ತಾಲೂಕಿನ ಸಾಲಗಾಂವ್ (ಕಾವಲಕೊಪ್ಪ) ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯೊಳಗೆ ಬುಧವಾರ ವಿಷಕಾರಿ ನಾಗರಹಾವು ಕಾಣಿಸಿಕೊಂಡ ಘಟನೆ ನಡೆದಿದೆ.  ಬ್ಯಾಂಕ್ ಆವರಣದಲ್ಲಿ ಅಚಾನಕ್ ಹಾವು ಕಾಣಿಸಿಕೊಂಡ ತಕ್ಷಣ ಸಿಬ್ಬಂದಿ ಹಾಗೂ ಗ್ರಾಹಕರಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಮುತ್ತುರಾಜ ಹಳ್ಳಿ ಗಸ್ತು ಅರಣ್ಯ ಪಾಲಕರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ಯಾವುದೇ ಅಪಾಯ ಸಂಭವಿಸದಂತೆ ಅರಣ್ಯ ಪ್ರದೇಶಕ್ಕೆ ಬಿಡುವ ಮೂಲಕ ಯಶಸ್ವಿಯಾಗಿ ರಕ್ಷಣೆ ಕಾರ್ಯ ನಡೆಸಿದರು.  ಈ ಕಾರ್ಯಾಚರಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ನವೀನ್ ಕುಮಾರ, ಸಿಬ್ಬಂದಿಗಳಾದ ಆಶಾ ತರಲಗಟ್ಟಿ ಸೇರಿದಂತೆ ಇತರರು ಸಹಕರಿಸಿದರು. 


ಸುದ್ದಿ ಓದಿ