ಮೂರು ರಾಜ್ಯ ಪ್ರಶಸ್ತಿ ಪಡೆದ "ದಂತಪುರಾಣ" ಚಿತ್ರ ಬಿಡುಗಡೆ
ಕಂಪ್ಲಿ 20: ಇದೇ ಫೆ.21ರಂದು ಕಂಪ್ಲಿ ನಗರದ ಚಂದ್ರಕಲಾ ಚಿತ್ರ ಮಂದಿರಲ್ಲಿ ಮೂರು ರಾಜ್ಯ ಪ್ರಶಸ್ತಿ ಪಡೆದ ದಂತಪುರಾಣ ಚಿತ್ರ ಬಿಡುಗಡೆಯಾಗಲಿದ್ದು, ಮಾನ್ಯ ಶಾಸಕ ಜೆ.ಎನ್.ಗಣೇಶ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಲಿದ್ದು, ಒಳ್ಳೆಯ ಕಥೆ ಆಧರಿತ ಚಿತ್ರವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಿಸುವದರೊಂದಿಗೆ ಯಶಸ್ವಿಗೊಳಿಸಬೇಕು ಎಂದು ಚಲನಚಿತ್ರದ ನಿರ್ದೇಶಕ ವಿಶಾಲ್ ರಾಜ್ ಹೇಳಿದರು. ಗುರುವಾರ ಅವರು ಪಟ್ಟಣದಲ್ಲಿ ಚಿತ್ರದ ಪೊಸ್ಡರ್ಗಳನ್ನು ಬಿಡುಗಡೆಗೊಳಿಸಿದ ನಂತರ ಮಾತನಾಡಿ, ಈ ಚಿತ್ರವು ಉತ್ತರ ಕರ್ನಾಟಕದ ಸಂಸ್ಕೃತಿ, ಪರಂಪರೆ ಹಾಗೂ ಇಂದಿನ ಜೀವನಶೈಲಿ ಒಳಗೊಂಡಿದೆ. ಮಕ್ಕಳ ಚಲನಚಿತ್ರ ದಂತಪುರಾಣ ಮೂರು ಪ್ರಶಸ್ತಿ ಪುರಸ್ಕೃತಗೊಂಡಿದೆ. ಮೂರು ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ವಿಭಿನ್ನ ಕಥಾನವಸ್ತುವಿನ ಕನ್ನಡ ಸಿನಿಮಾವಾಗಿದೆ. ಸಾಮಾಜಿಕ ಸಂದೇಶ, ನೈಜ ಪಾತ್ರಗಳು ಹಾಗೂ ಶಕ್ತಿಶಾಲಿ ನಿರೂಪಣೆಯೊಂದಿಗೆ ಪ್ರೇಕ್ಷಕರ ಮನಸೂರೆಗೊಂಡ ಈ ಚಿತ್ರವನ್ನು ತಪ್ಪದೇ ಕಂಪ್ಲಿ ಜನತೆ ನೋಡಬೇಕು. ಮತ್ತು ಮಕ್ಕಳೊಂದಿಗೆ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಆಗಮಿಸಿ, ಇದೇ ಶನಿವಾರದಂದು ಚಿತ್ರಕ್ಕೆ ಹಾರೈಯಿಸಬೇಕು ಎಂದರು. ಈ ಸಂದರ್ಭದಲ್ಲಿ ನಿರ್ಮಾಪಕ ನವೀನ್ ಶರ್ಮ, ಮುಖಂಡರಾದ ಗಣೇಶ ಯಾದವ್, ಶಿವುಕುಮಾರ, ನೆಣಕಿ ಗೀರೀಶ್, ಆರ್.ಪಿ.ಶಶಿಕುಮಾರ ಸೇರಿದಂತೆ ಇತರರು ಇದ್ದರು.