ಜನಪರ ಉತ್ಸವದಲ್ಲಿ ನಾಡಿನ ಜಾನಪದ ಸಿರಿ ಅನಾವರಣ
ಬಳ್ಳಾರಿ17: ಬಂತು ಬಂತು ಸುಗ್ಗಿ..ಬಂತು ಬಂತು ಸುಗ್ಗಿ... ರೈತರ ಮನಗಳು ಕುಣಿದು ಕುಣಿದಾಡಿತು ಹಿಗ್ಗಿ ಹಿಗ್ಗಿ.. ಬೆವರಿನ ಹನಿಗಳು ಬೆಳೆಯಾಗಿ ಬಂತಿಲ್ಲಿ...ಎಂಬ ಜಾನಪದ ಹಾಡಿಗೆ ಪುಟ್ಟ ಮಕ್ಕಳು ಸಖತ್ತಾಗಿ ನೃತ್ಯಪ್ರದಶರ್ಿಸುತ್ತಿದ್ದರೇ ನೆರೆದಿದ್ದವರ ಮನಗಳೆಲ್ಲ ಸುಗ್ಗಿಯ ಮೂಡಿನತ್ತ..ಮತ್ತೊಂದೆಡೆ ರಾಮಾಯಣದ ಪ್ರಸಂಗ..ಇನ್ನೊಂದೆಡೆ ಅಪರೂಪದ ಸಿಂಧೋಳ ನೃತ್ಯ..
ಇದೆಲ್ಲ ಕಂಡುಬಂದಿದ್ದು ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿರುವ ಬಯಲುರಂಗಮಂದಿರದಲ್ಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಮುಚ್ಛಯದ ನವೀಕರಣಗೊಂಡ ಉದ್ಯಾನವನದ ಉದ್ಘಾಟನೆ ಹಾಗೂ ವಿಶೇಷ ಘಟಕ ಯೋಜನೆ ಅಡಿ ಬುಧವಾರ ಏರ್ಪಡಿಸಿದ್ದ ಜನಪರ ಉತ್ಸವದಲ್ಲಿ ಇಡೀ ನಾಡಿನ ಜಾನಪದ ಸಿರಿಯೇ ಅನಾವರಣಗೊಂಡಿತು. ಇಡೀ ಕಾರ್ಯಕ್ರಮ ಜನಮನಸೂರೆಗೊಂಡಿತು.
ಕೊರೊನಾ ಎಫೆಕ್ಟ್ ನಿಂದಾಗಿ ಕಳೆದ ಒಂಬತ್ತು ತಿಂಗಳಿಂದ ಸಾಂಸ್ಕೃತಿಕ ಚಟುವಟಿಕೆಗಳಿಂದ ಸ್ಥಗಿತಗೊಂಡಿದ್ದ ಬಯಲುರಂಗಮಂದಿರದಲ್ಲಿ ಜನಪರ ಉತ್ಸವದ ಸುದ್ದಿ ಅರಿತು ಅಸಂಖ್ಯಾತ ಸಾಂಸ್ಕೃತಿಕ ಪ್ರೇಮಿಗಳು ಜನಪರ ಉತ್ಸವಕ್ಕೆ ಹರಿದುಬಂದರು;ಅಷ್ಟೇ ಉತ್ಸಾಹದಿಂದ ಎಲ್ಲ ಕಲಾತಂಡಗಳ ಪ್ರದರ್ಶನಗಳನ್ನು ವೀಕ್ಷಿಸಿದರು.
ಸೂರ್ಯಕಲಾ ಟ್ರಸ್ಟ್ನ ಕಲಾತಂಡದ ಜಾನಪದ ಹಾಡಿನ ನೃತ್ಯದಿಂದ ಆರಂಭವಾದ ಉತ್ಸವದಲ್ಲಿ ಒಂದಕ್ಕಿಂತ ಒಂದು ಕಲಾತಂಡಗಳು ಅದ್ಭುತ ಪ್ರದರ್ಶನ ನೀಡಿದವು. ಕಡ್ಡಿರಾಂಪುರದ ಕೆ.ರಾಮು ತಂಡದ ಹಗಲುವೇಷದ ರಾಮಾಯಣ ಪ್ರಸಂಗ ಅತ್ಯುದ್ಭವಾಗಿತ್ತು. ಅಳಿವಿನಂಚಿನಲ್ಲಿರುವ ಸಿಂಧೋಳ ಕುಣಿತವನ್ನು ರಾಹುಲ್ ಮತ್ತು ನಾಗಪ್ಪ ತಂಡದವರು ಪ್ರದಶರ್ಿಸಿದರು. ಸಾಗರದ ಕೆಂಪಮ್ಮ ಅವರ ಮಹಿಳಾ ಡೊಳ್ಳು ಕುಣಿತ,ಸಂಡೂರು ಪಾರುಬಾಯಿ ತಂಡದವರ ಲಂಬಾಣಿ ನೃತ್ಯ, ಕಾರಿಗನೂರಿನ ನಾರಾಯಣಪ್ಪ ತಂಡದ ತೊಗಲುಗೊಂಬೆ ಸೇರಿದಂತೆ ವಿವಿಧ ಕಲಾತಂಡಗಳು ಪ್ರದರ್ಶನಗಳು ನೆರೆದಿದ್ದವರ ಮನಸೂರೆಗೊಳ್ಳುವಂತೆ ಮಾಡಿದವು.
ಕಹಳೆ ವಾದನ,ನಂದಿ ಧ್ವಜ, ಚಿಟ್ಟಿ ಮೇಳ, ಸುಗಮ ಸಂಗೀತ, ಯುಗಳ ನೃತ್ಯ,ತತ್ವಪದಗಳು,ಸಾಂಪ್ರಾದಾಯಿಕ ಹಾಡುಗಳು,ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ,ಬುರ್ರಕಥಾ,ಪಟಕುಣಿತ,ಕರಗ ಕುಣಿತ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಕಲಾವಿದರು ಜನಪರ ಉತ್ಸವದಲ್ಲಿ ಪ್ರದಶರ್ಿಸಿದರು.
ನವೀಕರಣಗೊಂಡ ಉದ್ಯಾನವನ ಹಾಗೂ ಜನಪರ ಉತ್ಸವಕ್ಕೆ ಚಾಲನೆ ನೀಡಿದ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಮಾತನಾಡಿ, ಪೂರ್ವ ಕಾಲದ ಪ್ರಾಚೀನ ಸಂಸ್ಕ್ರತಿ, ಕಲೆ, ಸಾಹಿತ್ಯ ಮುಂದಿನ ಯುವ ಪೀಳಿಗೆಗೆ ಉಳಿಸಿಕೊಂಡು ಹೋಗುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಗ್ರಂಥಾಲಯದ ಉದ್ಯಾನವನದಲ್ಲಿ ನಿಮರ್ಿಸಿರುವ ಹಲವಾರು ಶಿಲಾನ್ಯಾಸಗಳು , ಇತಿಹಾಸವನ್ನು ತಿಳಿಸುವ ಕೆಲಸ ಮಾಡುತ್ತವೆ. ಇಲ್ಲಿ ನಿಮರ್ಿಸಿರುವ ಉದ್ಯಾನವನ ಹಿರಿಯ ನಾಗರೀಕರ ಪ್ಯಾರಡೈಸ್ ಆಗಿದೆ ಎಂದರು.
ಕನರ್ಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಮಹೇಂದ್ರ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯು ಕಲೆ, ಸಂಸ್ಕೃತಿ, ಸಾಹಿತ್ಯ ವಿಷಯದಲ್ಲಿ ಅದು ಆಗಲೇ ತನ್ನ ಅಸ್ತಿತ್ವವನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿದರ್ೇಶಕರಾದ ಡಾ.ಸತೀಶ್ ಕುಮಾರ್ ಎಸ್. ಹೊಸಮನಿ ಅವರು ಮಾತನಾಡಿ, ಇಲ್ಲಿ ನಿಮರ್ಿಸಿರುವ ಉದ್ಯಾನವನ್ನು ನೋಡುತ್ತಿದ್ದರೆ ಬೆಂಗಳೂರಿನಲ್ಲಿ ಇದೀವಾ ಎಂದು ಭಾಸವಾಗುತ್ತದೆ ಅಷ್ಟು ಸುಂದರವಾಗಿ ನಿಮರ್ಾಣ ಮಾಡಲಾಗಿದೆ. ಎಂದರು.ಸಂಸ್ಕೃತಿಯನ್ನು ಉಳಿಸುವ ಕೆಲಸ ಇಲ್ಲಿಗೆ ನಿಲ್ಲದೆ, ಇಂತಹ ಚಟುವಟಿಕೆಗಳು ಸದಾ ಕಾಲ ಹೀಗೆ ನಡೆಯಲಿ ಎಂದು ಆಶಿಸಿದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿದರ್ೇಶಕ ಸಿದ್ಧಲಿಂಗೇಶ್ವರ ರಂಗಣ್ಣನವರ್ ಪ್ರಾಸ್ತಾವಿಕವಾಗಿ ಮಾತನಾಡಿ. ನಮ್ಮ ರಾಜ್ಯ ಹಲವು ಭಾಷೆಗಳನ್ನು ಒಳಗೊಂಡು, ವೈವಿದ್ಯತೆಯಿಂದ ಕೂಡಿರುವ ಅತ್ಯಂತ ಶ್ರೀಮಂತ ಸಂಸ್ಕೃತಿಯಾಗಿದೆೆ ಎಂದರು.
ಉದ್ಯಾನವನ ನವೀಕರಣಕ್ಕೆ ಸಹಕರಿಸಿದ ಮಿನೆರಾ ಸ್ಟೀಲ್ನ ಹನುಮರೆಡ್ಡಿ, ಉದ್ಯಾನವನ ನಿಮರ್ಾಣಕ್ಕೆ ಸಹಕರಿಸಿದ ಪರಿಸರ ಪ್ರೇಮಿ ಶಶಿಧರ್ ಅವರನ್ನು ಸನ್ಮಾನಿಸಲಾಯಿತು.
ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿದರ್ೇಶಕ ಬಿ.ಕೆ.ಲಕ್ಷ್ಮೀಕಿರಣ್, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕ ಬಿ.ಕೆ.ರಾಮಲಿಂಗಪ್ಪ, ರಾಬಕೋ ಹಾಲು ಒಕ್ಕೂಟದ ನಿದರ್ೇಶಕ ವೀರಶೇಖರ ರೆಡ್ಡಿ, ನಿಮರ್ಿತಿ ಕೇಂದ್ರದ ಅಧಿಕಾರಿ ಮೋಹನ್ ಕೃಷ್ಣ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿದರ್ೇಶಕ ಚೋರನೂರು ಕೊಟ್ರಪ್ಪ ಸೇರಿದಂತೆ ಇತರರು ಇದ್ದರು.