ಕಥೆ ಮತ್ತು ವಿಶೇಷ ಲೇಖನಗಳು

ಕವಿತೆಯ ಮಾತು

ಕವಿತೆಯ ಮಾತು

-ಡಾ. ವೈ.ಎಂ.ಯಾಕೊಳ್ಳಿ, ಬೆಳಗಾವಿ

ಕವಿಗೆ ಭಾಷೆಯನ್ನುವದು ಆತನ ಭಾವನೆಗಳನ್ನು ಹೊರಹಾಕಲು ಮಾಧ್ಯಮ. ಭಾಷೆಯ ಸಹಾಯವಿಲ್ಲದೇ ಕವಿ ಏನನ್ನೂ ಮಾಡಲಾರ. ಆತ ತನ್ನ ಮನಸ್ಸಿನಲ್ಲಿ ಸಾವಿರ ಚಿಂತಿಸಬಹುದು, ತಕರ್ಿಸಬಹುದು, ಆದರೆ ಅದನ್ನೊಂದು ಆಕಾರದ ಮೂಲಕ ಲೋಕಕ್ಕೆ ನೀಡಲು ಭಾಷೆಯನ್ನುವದು ಅಗತ್ಯ. ಕವಿಗೆ ಆಧಾರವಾಗಿ ಬರುವ ಈ ಭಾಷೆಗೆ ಮಾತು ಎಂದೂ, ನುಡಿ ಎಂದೂ ಕರೆದರು. ಕವಿ ಕುಲಗುರು ಕಾಳಿದಾಸ ಕವಿಯ ಮನದಲ್ಲಿ ಹೊಳೆಯುವ ಅರ್ಥ ಮತ್ತು ಕವಿಯ ಮನದ ಭಾವಗಳಿಗೆ ವಾಹಕವಾಗುವ ಶಬ್ದ ಇವೆರಡನ್ನೂ ಲೋಕದ ತಂದೆ ತಾಯಿಯರಾದ ಪಾರ್ವತಿ-ಪರಮೇಶ್ವರರಿಗೆ  ಹೋಲಿಸಿದ್ದಾನೆ. ಕವಿತೆಯಲ್ಲಿ ಶಬ್ದ ಅರ್ಥಗಳು ಒಂದಾದಂತೆ ಅವರು ಒಂದಾಗುತ್ತಾರೆ ಎಂದಿದ್ದಾನೆ. ಪದಗಳಿಲ್ಲದಿದ್ದರೆ ಕವಿತೆ ಅಷ್ಟೇ ಏಕೆ?, ಇಡೀ ಲೋಕವೇ ಕತ್ತಲೆಯಿಂದ ತುಂಬಿರುತ್ತಿತ್ತು ಎಂದು ದಾರ್ಶನಿಕ ಮೀಮಾಂಸಕ ದಂಡಿ ಹೇಳಿರುವದನ್ನು ನೆನಪಿಸಬಹುದು. ಶಬ್ದವೆಂಬ ಜ್ಯೋತಿ ಬೆಳಗದಿದ್ದರೆ ಇಡೀ ಲೋಕವೇ ಕತ್ತಲೆಯಿಂದ ತುಂಬಿರುತ್ತಿತ್ತು ಎಂಬುದು ಅವನ ಮಾತು. ಈ ದಿಶೆಯಲ್ಲಿ ಶರಣರು ಹೇಳಿದ  ನುಡಿಯಂಬುದು ಜ್ಯೋತಿಲರ್ಿಂಗ ಎಂಬುದೂ ಅಷ್ಟೇ ಗಮನಾರ್ಹವಾದದ್ದು.

          ಶಬ್ದಗಳಿಲ್ಲದೇ ಕವಿ ಮೂಕನಾಗುತ್ತಾನೆ.ಆತನಿಗೆ ತಾನು ಸುಭಗವಾಗಿ ಹೇಳಬೇಕೆಂದು ಅಂದುಕೊಂಡದ್ದನ್ನು ಹೇಳಲು ಪದಗಳು ಬೇಕು. ಅದಕ್ಕೇ ಒಬ್ಬ ಆಧುನಿಕ ಚುಟುಕ ಕವಿ-

ಕವಿತೆ, ನೀ

ಪದಗಳಲ್ಲಿ ಏಕೆ ಅವಿತೆ?

ಎಂದು ಕೇಳುವ ಮೂಲಕ ಪದಗಳ ಮಹತ್ವವನ್ನು ಸಾರಿದ್ದಾನೆ. ಕವಿಗೆ ಪದಗಳು ಬೇಕೆಂದ ಮಾತ್ರಕ್ಕೆ ಅವು ದೊರಕಿದಂತೆ ಈ ಪದಗಳನ್ನು ಬಳಸಲಾರ,ತನ್ನ ಪ್ರತಿಭಾ ಕುಲುಮೆಯಲ್ಲಿ ಆ ಪದಗಳನ್ನು ಸಾನೆ ಹಿಡಿಯುತ್ತಾನೆ, ಪರಿಷ್ಕರಿಸುತ್ತಾನೆ. ತನಗೆ ಬೇಕಾದಂತೆ ಕತ್ತರಿಸಿ, ಬೇಕಾದ ಆಕಾರಕ್ಕೆ ಒಗ್ಗಿಸಿ ತನ್ನ ಇಚ್ಛೆಗನುಗುಣವಾಗಿ ಹದಗೊಳಿಸಿ ಬಳಸುತ್ತಾನೆ. ಹೀಗೆ ಮಾಡುವಲ್ಲಿ ಅವನ ಪ್ರತಿಭಾ ಕೌಶಲ ಕೆಲಸ ಮಾಡುತ್ತದೆ. ಕವಿಯ ಕೈಗೆ ಸಿಕ್ಕಾಗ ಕಚ್ಛಾ ಪದಾರ್ಥವಾದ ಭಾಷೆ ಅವನ ಪ್ರತಿಭಾ ಕುಲುಮೆಯಲ್ಲಿ ಕಾವ್ಯಭಾಷೆಯಾಗಿ ಸಂಸ್ಕಾರಗೊಳ್ಳುತ್ತದೆ .ಕವಿ ಮಾಯಕೊವಸ್ಕಿಚಿು ಬಗ್ಗೆ ಬರೆಯುವಾಗ ಡಾ ಬುದ್ಧಣ್ಣ ಹಿಂಗಮಿರೆಯವರು ಕವಿಯ ಈ ಕಾವ್ಯ ಕೌಶಲದಲ್ಲಿ ಪದಗಳು ಪಡೆದುಕೊಳ್ಳುವ ಪರಿವರ್ತನೆಯನ್ನು  ವಿವರಿಸಿದ್ದಾರೆ. 

ಮೊಂಡಭಾಷೆಯನು ಸಾಣೆಗಿಕ್ಕಿ

ವ್ಯಂಗ್ಯ ವಿಡಂಬನೆಯ ಹೊಳಪ ಲೇಪಿಸಿ

ಶಬ್ದಗಳೊಡಲಲ್ಲಿ ಮಿಂಚು ತುಂಬಿದವನು

ಮಾತುಗಳ ಖಡ್ಗವಾಗಿಸಿ

ಶಬ್ದಗಳ ನಳಿಗೆಯಲ್ಲಿ ಅರ್ಥದ ಗುಂಡುತುಂಬಿ

ಬಂದೂಕು ಬಯೋನೆಟ್ಟುಗಳ ಕುದುರೆ  ಜಗ್ಗಿದವನು

ಕಂಡದ್ದನ್ನಾಡಿ ಕೆಂಡವಾದವನು

ಕವಿ ಮಾಯಕೋವಸ್ಕಿಯ ಮಂತ್ರಶಕ್ತಿಯನ್ನು ಹೇಳುವ ಕವಿತೆ ಕಾವ್ಯದಲ್ಲಿ ಭಾಷೆಯ ಶಕ್ತಿ ಎಂಥದು ಎಂಬುದನ್ನು ಪ್ರಸ್ತಾಪಿಸುತ್ತದೆ. ಕವಿಯ ಕೈಯಲ್ಲಿ ಭಾಷೆ ಹದಗೊಳ್ಳುವ,ಸಿಡಿಗುಂಡಾಗಿ ಪರಿವತರ್ಿತವಾಗುವ ಸಂಪೂರ್ಣ ಚಿತ್ರವಿದೆ.ಇದು ಕವಿ ಪದಗಳಿಗೆ ಕೊಡುವ ಸಂಸ್ಕಾರ. ಬರೀ ಪದಕ್ಕೆ ಪದ ಸೇರಿದರೆ ಕವಿತೆಯಾಗದು.ಅದಕ್ಕೆ ಕವಿಯ ಧ್ಯಾನದ ಸಂಸ್ಕಾರ ಅಗತ್ಯ. ಇಲ್ಲದಿದ್ದರೆ ಕಾವ್ಯ ಕಬ್ಬವಾಗದೇ ಜಡವಾದ ಕಗ್ಗವಾಗುತ್ತದೆ.ಹಗ್ಗವಾಗುತ್ತದೆ. ಅದಕ್ಕೆ ಕವಿ ಬೇಂದ್ರೆ ಬರೀ ಕಗ್ಗದಂತಹ ಕಾವ್ಯವನ್ನು ರಚಿಸುವ ಕವಿಗಳಿಗೆ

ಪ್ರಾಸವನ್ನು ಹೊಸೆದು ಹೊಸೆದು

ಏನು ಆತು?

     ಧ್ಯಾನಾ ಮಾಡು ಕೂತು  ದಿನಾರಾತ್ರಿ

ಎಂದು ಎಚ್ಚರಿಕೆಯನ್ನು ನೀಡಿ ನಿರರ್ಥಕವಾದ ಕವಿತಾರಚನೆಯ ಪ್ರಯತ್ನವನ್ನು ವಿರೋಧಿಸುತ್ತಾರೆ.

ಕವಿ ತನ್ನ ಮನದಾಳದ ಮಾತುಗಳಿಗೆ ಅಗತ್ಯವಾದ ಪದಗಳನ್ನು ಹುಡುಕಿ ಮನದಾಳದ ವಿಚಾರ ಗಳಿಗೆ ತಕ್ಕ ಮಾತಿನ ಆಕಾರ ಕೊಡುವ ಕ್ರಿಯೆ ಸಾಮಾನ್ಯದ್ದಲ್ಲ, ಅದು ಜೀವಸೃಷ್ಟ್ರಿಯ ಕ್ರಿಯೆಯಷ್ಟೇ ಗೂಢವಾದದ್ದು. ಕವಿ ಬೇಂದ್ರೆಯವರು 'ಒಡಲ ನೂಲ ನೇಯುವಂತೆ ಜೇಡ' ಎಂದು ಇದನ್ನು ವಿವರಿಸಿದರು.ಹೀಗೆ ಪದಕ್ಕೆ ಕವಿಯ ಮಾಂತ್ರಿಕ ಶಕ್ತಿ ಸ್ಪರ್ಶವಾದಾಗ ಬರಿ ಹಾಡಾಗದೇ ಬದುಕಿನ ಪಾಡಾಗಿ ಹೊರ ಹೊಮ್ಮುತ್ತದೆ.ಜನಪದ ಕವಿಯತ್ರಿ ಹೇಳುವಂತೆ 'ಹಾಡಲ್ಲ ನನ್ನ ಒಡಲುರಿಯೂ' ಆಗಬೇಕಾಗುತ್ತದೆ. ಹಾಗಾಗಿ ಕವಿತೆಗೆ ಒಡಲಾಗುವ ಪದ,ನುಡಿ,ಭಾಷೆ ಯಾವೂದಾದರೂ ಅನ್ನಿ, ಅದು 'ಬರೀ ಕೊಂಕು ಮಾತು, ಕಿಲಾಡಿ ನುಡಿ, ನಾಲಗೆಯ ಚಾಪಲ್ಯ, ತುರಿಕೆ ತೀರಿಸಲೆಚಿದೇ ಪುಟದುದ್ದ ಚತುರೋಕ್ತಿ ಆಗಬಾರದು. ನುಡಿದರೆ ಜ್ಯೋತಿಯಾಗುವ, ಬೆಳಕು ನೀಡುವ, ಲಿಂಗವೆಂಬ ದೈವವೂ ಅಹುದಹದು ಎನ್ನುವ ವಚನವಾಗುತ್ತದೆ. ಹೀಗಾಗಿ ಕವಿಯನ್ನು ಬಿಟ್ಟು ಪದವಿರಲಾರದು, ಪದವನ್ನು ಬಿಟ್ಟು ಕವಿಯಿರಲಾರ.ಅವನ ಕೈಗೆ ಸಿಕ್ಕ ಮಾತು ಮಂತ್ರವಾಗುತ್ತದೆ, ನಾದದ ನವನೀತವಾಗುತ್ತದೆ. ಆ ಮಂತ್ರದಂತಹ ಮಾತಿನಿಂದಲೇ ಆತನ ಕವಿತೆಗೊಂದು ಸ್ವರೂಪ ಬರುತ್ತದೆ. ಒಟ್ಟಾರೆ ಅವರಿಬ್ಬರಿಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಇಲ್ಲ ಎನ್ನುವ ಮಾತು ಸರಿಯಾಗುತ್ತದೆ.

ಕವಿತೆಯ ಹುಟ್ಟು ನಿಗೂಢವಾದದ್ದು. ತಾಯಿಯ ಉದರದಲ್ಲಿ ಮಗುವೊಂದು ಮೂಡುವ ಅನುಭವದಂತೆ ಅವರ್ಣನೀಯ.  ಕವಿತೆಯ ಹುಟ್ಟನ್ನು ಕುರಿತಂತೆ ಹೀಗೇ ಎಂದು ವಿವರಿಸುವದು ಅಸಾಧ್ಯ ಎಂದು ಕವಿಗಳು ವಿಮರ್ಶಕರು ಭಾವಿಸಿದ್ದಾರೆ. ಅಂತೆಯೇ ಆ ಅನುಭವವನ್ನು  ವಿವರಿಸುವದು ಕಷ್ಟಕರ ಎನ್ನುವ ಕುವೆಂಪು ಅವರು

  ಹೇಳಿದರೆ ಹಾಳಾಗುವದೋ ಸವಿಯು 

  ಹೇಳದಿರೆ ತಾಳಲಾರನೋ ಕವಿಯು

ಎನ್ನುತ್ತಾರೆ. ಕವಿತೆಯ ಹುಟ್ಟನ್ನು ಕುರಿತಂತೆ ಅನೇಕರು ಅನೇಕ ರೀತಿಯಾಗಿರೀತಿಯಾಗಿ ವಣರ್ಿಸಿದ್ದಾರೆ. ಒಬ್ಬ ಇಂಗ್ಲೀಷ ಕವಿ ಉಠಠಜ  ಠಿಠಜಣಡಿಥಿ ಣಣಚಿಟಟಥಿ  ತಿಡಿಣಣಜಟಿ  ಜಿಡಿಠಟ  ಚಿ  ಛಚಿಛಿಞರಡಿಠಣಟಿಜ  ಠಜಿ  ಛಿಠಟಿಜಿಟಛಿಣ  ಎನ್ನುತ್ತಾನೆ. ಅವನ ಪ್ರಕಾರ ಒಳ್ಳೆಯ ಕವಿತೆ ಸಂಘರ್ಷವಿಲ್ಲದೇ  ಹುಟ್ಟಲಾರದು. ಸಂಘರ್ಷ ಎರಡು ರೀತಿಯದು ಇರಲು ಸಾಧ್ಯ. ಒಂದು ಬದುಕಿನ ಸಂಘರ್ಷ, ಇನ್ನೊಂದು ಕವಿಯ ಆಂತರಿಕ ಸಂಘರ್ಷ.

      ಕವಿ ತನ್ನ ಮನಸ್ಸಿನ ಆನಂದಕ್ಕಾಗಿ ಹಾಡುತ್ತಾನೆ. ಸೃಷ್ಟಿಕ್ರಿಯೆ ಅವನಿಗೆ ಅಪಾರ ಅನುಭೂತಿ ನೀಡುತ್ತದೆ. ಹಾಡುವದರಲ್ಲೇ ಅವನಿಗೆ ತೃಪ್ತಿ. ಕೋಗಿಲೆ ಹಾಡಿದಂತೆ, ಹೂವು ಅರಳಿದಂತೆ ಅದು ಸಹಜ ವಾದದ್ದು ಎನ್ನುವವರೂ ಇದ್ದಾರೆ. 'ಯಾರು ಕೇಳಲಿ, ಬಿಡಲಿ ಹಾಡುವದು ಅನಿವಾರ್ಯ ಕರ್ಮ ನನಗೆ' ಎನ್ನುವ ಕವಿಗಳೂ ಇದ್ದಾರೆ.

ನೀವು ಏಕೆ ಬರೆಯುತ್ತೀರಿ? ಎಂದು ಪ್ರಸಿದ್ಧ ಚುಟುಕು ಕವಿ ಡುಂಡೀರಾಜರನ್ನು ಕೇಳಿದರೆ ಅವರು ಹೇಳುವದು 'ನೀವು ಕವಿಯಂದು ಮನ್ನಿಸಿದ್ದಕ್ಕೆ,' ಬರೆಯುತ್ತೇನೆ ಎನ್ನುತ್ತಾರೆ. ಸಿಪಿಕೆಯವರ ಒಂದು ಚುಟುಕೂ ಹೀಗೇಯೇ ಇದೆ.ಚನ್ನವೀರ ಕಣವಿಯವರು ಒಂದಿರುಳು ರಾತ್ರಿಯಲಿ ಪದಪದಗಳು ಸಾಂಗತ್ಯ ಹೂಡಿ ಕವಿತೆ ಯಾಯಿತು ಎನ್ನುತ್ತಾರೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಆನು ಒಲಿದಂತೆ ಹಾಡುತ್ತೇನೆ ಎಂದು ಘೋಷಿಸುತ್ತಾರಾದರೂ ಅವರ ಕವಿತೆ ಸಾಮಾಜಿಕ   ಜವಾಬ್ದಾರಿಯಿಂದ ತಪ್ಪಿಸಿಕೊಂಡಿಲ್ಲ. ಅವರು ಕವಿತೆಯನ್ನು ವ್ಯಾಖ್ಯಾನಿಸುವದು ಹೀಗೆ

 ಈ ಕವಿತೆ ಯಾವಳೋ ಹೆಣ್ಣ ಕಣ್ಣ

ಬೆಳಕಿನ ಕಿರಣ ತಾಕಿ ಪುಟಿದದ್ದಲ್ಲ

ಪ್ರಣಯಾಲಾಪಗಳ ಜಳ್ಳು ಬಳ್ಳಿಯನು ತಬ್ಬಿ

ಹಬ್ಬಿದಲ್ಲ 

ಎನ್ನುವಲ್ಲಿ ಕವಿತೆಗಿರುವ ಲೋಕ ಹಿತ ಕಾಣುವ ಗುಣವೇ ಮುಖ್ಯವಾಗಿದೆ. ಕವಿತೆ ಮುಂದುವರಿದು

 ಯಾವೊತ್ತಿನಿಂದಲೋ ಸುರಿದ ಜಡಿಮಳೆ ಇಳಿದು

ಒಳಗಿನ ಕುದಿಗೆ ಮಿದುವಾಗಿ ಹದವಾಗಿ 

ಮಲಗಿರುವಾಗ ಬಾವಿಯ ತೋಡಿ,

ಯಾತವ ಹೊಡೆದು ಅಂದದ್ದು ಈ ರಾಗ

ಹೀಗೆ ಹೇಳುವಲ್ಲಿ ಕವಿತೆ ಕೇವಲ ಪ್ರೀತಿಯಂತಹ ಮಧುರಭಾವಕ್ಕೆ ಮಾತ್ರ ಸೀಮಿತವಾಗಬೇಕಿಲ್ಲ, ತನ್ನ ಪ್ರೇಮ ತನ್ನ ವಿರಹ ಇವಷ್ಟಕ್ಕೇ ನಿಲ್ಲಬೇಕಾಗಿಲ್ಲ ಅದಕ್ಕಿಂತ ಮಿಗಿಲಾ ಸಾಮಾಜಿಕ ಜವಾಬ್ದಾರಿ ಕವಿತೆಗಿದೆ ಎನ್ನುವದನ್ನು   

 ಕವಿತೆ ಎಷ್ಟೇ ಕವಿಯ ಸ್ವಂತದ್ದಾದರೂ  ಕವಿತೆಗೊಂದು ಸಾಮಾಜಿಕ  ಹೊಣೆಗಾರಿಕೆ ಇದ್ದೇ ಇರುತ್ತದೆ. ಕವಿಯ ಕೆಲಸ ತಪ್ಪಬಹುದಾದ ಸಮಾಜವನ್ನು ತಿದ್ದುವದು.ಇದು ಸರಿ ಇದು ತಪ್ಪು, ಹೀಗೆ ನಡೆರೆ ಒಳಿತಾಗುತ್ತದೆ ಹೀಗೆ ನಡೆದರೆ ತಪ್ಪಾಗುತ್ತದೆ ಎಂದು ತಿಳಿ ಹೇಳುವದು. ಆದರಿಂದಲೇ ಕವಿತೆಯನ್ನು ಕಾಂತಾಸಂಹಿತ ಎಂದು ನಮ್ಮ ಹಿರಿಯರು ಕರೆದಿದ್ದು.


ಸುದ್ದಿ ಓದಿ