ಕೆಜಿಬಿ ಪತ್ತಿನ ಸಹಕಾರ ಸಂಘದ ಮಹಾಸಭೆ ಯಶಸ್ವಿ
ಬಳ್ಳಾರಿ, 26: ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಸಮುದಾಯ ಭವನದ ಸಭಾಂಗಣದಲ್ಲಿ ನಡೆಯಿತು. ಮೊದಲಿಗೆ ಮುಖ್ಯ ಕಾರ್ಯನಿರ್ವಾಹಕ ಶಶಿಧರ ಪತ್ತಾರ ರವರ ಸ್ವಾಗತದೊಂದಿಗೆ ಪ್ರಾರಂಭವಾಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪರಶುರಾಮ ತೇರದಾಳ ಇವರು ವಹಿಸಿದ್ದರು.
ಆರಂಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಶಶಿಧರ ಪತ್ತಾರ ರವರು ಸಂಘದ ಹಿಂದಿನ ಮಹಾಸಭೆಯ ಗೊತ್ತುವಳಿಗಳನ್ನು ಹಾಗೂ 2022-23ನೇ ಸಾಲಿನ ವಾರ್ಷಿಕ ವರದಿಯನ್ನು ಹಾಗೂ 2022-23ನೇ ಸಾಲಿನ ಲೆಕ್ಕ ಪತ್ರಗಳ ವರದಿಯನ್ನು ಮಹಾಸಭೆಯ ಅಂಗೀಕಾರಕ್ಕಾಗಿ ಮಂಡಿಸಿದ ನಂತರ ಮಹಾಭೆಯ ಅಂಗೀಕಾರಕ್ಕಾಗಿ ಮಂಡಿಸಿದ ನಂತರ ಮಹಾಸಭೆಯ ಸರ್ವಾನುಮತದಿಂದ ಅಂಗೀಕರಿಸಿತು.
ನಂತರ ಮಹಾಸಭೆಯು 2023-24ನೇ ಸಾಲಿನ ಮುಂಗಡ ಆಯವ್ಯಯ ಪತ್ರಕ್ಕೆ 2022-23ನೇ ಸಾಲಿನ ಲಾಭ ವಿಂಗಡಣೆಯ ಮಹಾಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ಸಂಘದ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಗೋಪಾಲ ಚಿಗಟೇರಿ ಹಾಗೂ ಬಿ.ಪುರುಷೋತ್ತಮ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಂಘದ 33 ವರ್ಷಗಳ ಬೆಳವಣಿಗೆಗೆ, ಯಶಸ್ಸಿಗೆ ಮತ್ತು ಸಮುದಾಯ ಭವನದ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ನಿರ್ದೇಶಕ ಮಂಡಳಿಗಳಿಗೆ, ಸದಸ್ಯ ಬಾಂಧವರಿಗೆ ಅಧ್ಯಕ್ಷರು ಧನ್ಯವಾಧಗಳನ್ನು ಸಲ್ಲಿಸುತ್ತಾ ಮುಂದಿನ ದಿನಗಳಲ್ಲಿಯೂ ಇದೇ ರೀತಿ ಸಹಕಾರವನ್ನು ಕೋರಿದರು. ನಿರ್ದೇಶಕ ಶ್ರೀನಿವಾಸ ರವರ ವಂದನಾರ್ಪಣೆಯೊಂದಿಗೆ ಮಹಾಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು