ಗುರು - ಶಿಷ್ಯರ, ಪ್ರೀತಿ ವಿಶ್ವಾಸ ಬಂಧನ ಜೀವಿತಾವಧಿಯಲ್ಲಿ ಮರೆಯುವುದಿಲ್ಲ : ಶಿಕ್ಷಕ ಐ.ಬಿ ಪತ್ತಾರ

ಗುರು - ಶಿಷ್ಯರ, ಪ್ರೀತಿ ವಿಶ್ವಾಸ ಬಂಧನ ಜೀವಿತಾವಧಿಯಲ್ಲಿ ಮರೆಯುವುದಿಲ್ಲ : ಶಿಕ್ಷಕ ಐ.ಬಿ ಪತ್ತಾರ
The bond of love and trust between a teacher and a disciple is never forgotten in a lifetime: Teach

ಕೊಲ್ಹಾರ 03 : ಗುರು ಶಿಷ್ಯರ, ಪ್ರೀತಿ , ವಿಶ್ವಾಸ, ಬಂಧನ ಅನಾಧಿಕಾಲದಿಂದಲೂ ನಡೆದುಕೊಂಡು ಬಂದಿರುವಂತದು ಎಂದು ಶಿಕ್ಷಕ ಐ.ಬಿ ಪತ್ತಾರ ಹೇಳಿದರು. ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ 2002-03 ನೇ ಸಾಲಿನ ವಿದ್ಯಾರ್ಥಿನಿಯರಿಂದ ಗುರುವಂದನಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು ಗುರು - ಶಿಷ್ಯರ, ಪ್ರೀತಿ ವಿಶ್ವಾಸ ಬಂಧನ ನನ್ನ ಜೀವಿತಾವಧಿಯಲ್ಲಿ ನಾನು ಎಂದಿಗೂ ಮರೆಯುವುದಿಲ್ಲ ಪ್ರತಿಯೊಬ್ಬರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಪಡೆಯಲೇಬೇಕಾಗಿದೆ ಕನ್ನಡ ಇಂಗ್ಲಿಷ್ ಹಿಂದಿ ಸೇರಿದಂತೆ ಇತರ ಹಲವಾರು ಭಾಷೆಗಳನ್ನು ನಾವು ಇಂದು ನೌಕರಿಗಾಗಿ ಅಲ್ಲದಿದ್ದರೂ ನಮ್ಮ ವ್ಯವಹಾರಿಕ ಜ್ಞಾನಕ್ಕಾಗಿಯಾದರು ಇಂದು ನಾವು ಕಲಿಯಲೇ ಬೇಕಾಗಿದೆ ನೀವು ಕೂಡಾ ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಎಂದರು ಬಳಿಕ ಶಿಕ್ಷಕ ಎನ್‌.ಎ ಬನಸೋಡೆ ಮಾತನಾಡಿ ದೇವರ ನೆನಪು ಭಕ್ತಿಯ ಮೂಲ , ಗುರುವಿನ ನೆನಪು ಜ್ಞಾನದ ಮೂಲ, ಈ ಜ್ಞಾನ ಏನಾದರೂ ನಿಮಗೆ ಸಿಕ್ಕಿದ್ರೆ ಅದು ಗುರುವಿನ ನೆನಪು ಆಗಿರುತ್ತದೆ ,

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವಂತಹ ಗಾದೆ ಮಾತಿನಂತೆ ನಾವು ಕೂಡಾ ಇವತ್ತು ಶಿಕ್ಷಕರಾಗಿ ನಿಮ್ಮ ಮುಂದೆ ಇಷ್ಟು ದೈರ್ಯದಿಂದ ನಿಂತು ನಿಮ್ಮೊಂದಿಗೆ ಮಾತನಾಡಬೇಕಾದರೆ ನನಗೆ ಪ್ರಾಥಮಿಕ ಶಾಲೆಯಲ್ಲಿ ಕಲಿಸಿದಂತಹ ಗುರುಗಳೆ ಮೂಲ ಕಾರಣ ಅಂತ ಗುರುಗಳನ್ನು ನಾವು ಇಂದಿಗೂ ನೆನೆಯುತ್ತೇವೆ ಎಂದರು ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಆಯ್ ಎಮ ಬಾಟಿ ಮಾತನಾಡಿ ಇಂದಿನ ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ದೊರೆಯಬೇಕಾದರೆ  ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಅಲ್ಲಿ ನಿಮ್ಮ ಮಕ್ಕಳ ಭವಿಷ್ಯ ನಿರ್ಧರಿಸುತ್ತವೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಪ್ರಾಥಮಿಕ ಶಾಲೆಗಳಲ್ಲಿ ಕಲಿಸಿದಂತಹ ಗುರುಗಳ ಪ್ರೀತಿ ವಿಶ್ವಾಸ ತಮ್ಮ ಜೀವನದಲ್ಲಿ ಎಂದಿಗೂ ತಾವು ಕೂಡಾ ಮರೆಯಬಾರದು ಎಂದರು ಕಾರ್ಯಕ್ರಮದಲ್ಲಿ ಆರ್ ಬಿ ಬಡಿಗೇರ ,ಎಂ ಎಚ್ ತಳವಾರ,ಕೆ ಆರ್ ದಾಸರ, ಎಸ್ ಎಂ ಕೋರಿ ಕಾನಿಪ ತಾಲೂಕು ಅಧ್ಯಕ್ಷ ಅರುಣಕುಮಾರ ಓರಸಂಗ ಸೇರಿದಂತೆ ಆಶಾ ಮುದಕವಿ, ರಾಜೇಶ್ವರಿ ಕೊರ್ತಿ, ದ್ರಾಕ್ಷಾಯಿನಿ ಹಿರೇಮಠ, ಆರತಿ ಶ್ಯಾವಿ , ಸೇರಿದಂತೆ ಇತರ ವಿದ್ಯಾರ್ಥಿನಿಯರು ಇದ್ದರು. 


ಸುದ್ದಿ ಓದಿ