ಆರ್.ಡಿ.ಪಾಟೀಲ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ಲೋಕದರ್ಶನ ವರದಿ
ಸಿಂದಗಿ 09: ಮಣ್ಣಿನ ಮುದ್ದೆಯಂತಿರುವ ಮಕ್ಕಳನ್ನು ಹದಮಾಡಿ ಹಸನುಗೊಳಿಸಿ ಸರಿಯಾದ ರೂಪ ನೀಡಿ ಸತ್ಪಜೆಗಳನ್ನಾಗಿ ಮಾಡುವವನು ಶಿಕ್ಷಕ ಮಾತ್ರ ಎಂದು ಪ್ರಾಚಾರ್ಯ ವಿಮಲಕಾಂತ ಪಾಟೀಲ ಹೇಳಿದರು.
ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿ ಗುರುವಿಗೆ ಹೆಚ್ಚಿನ ಮಹತ್ವವಿದೆ. ಸಮಾಜದಲ್ಲಿ ಅವರಿಗೂ ವಿಶೇಷ ಸ್ಥಾನವಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣದಲ್ಲಿ ಅಪಾರ ನಂಬಿಕೆ ಇಟ್ಟವರು. ಅವರು ಮಹಾನ್ ತತ್ವಜ್ಞಾನಿ ಮತ್ತು ಶಿಕ್ಷಕರಾಗಿದ್ದರು. ಅವರಿಗೆ ಬೋಧನೆಯಲ್ಲಿ ಆಳವಾದ ಪ್ರೀತಿ ಇತ್ತು. ಆದರ್ಶ ಶಿಕ್ಷಕನ ಎಲ್ಲಾ ಗುಣಗಳನ್ನು ಹೊಂದಿದ್ದರು. ಈ ದಿನದಂದು, ದೇಶಾದ್ಯಂತ ಸಕರ್ಾರದಿಂದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದರು.
ಹಿರಿಯ ಉಪನ್ಯಾಸಕ ಶಿವಶರಣ ಬೂದಿಹಾಳ ಮಾತನಾಡಿ, ಗುರು ಮತ್ತು ಶಿಕ್ಷಕ ಪರಂಪರೆ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ, ಆದರೆ ಶಿಕ್ಷಕರು ಮಾತ್ರ ನಮಗೆ ನಿಜವಾದ ಜೀವನ ವಿಧಾನವನ್ನು ಕಲಿಸುತ್ತಾರೆ. ಸರಿಯಾದ ಮಾರ್ಗವನ್ನು ಅನುಸರಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಗುರು-ಶಿಷ್ಯ ಸಂಪ್ರದಾಯವು ಭಾರತೀಯ ಸಂಸ್ಕೃತಿಯ ಪ್ರಮುಖ ಮತ್ತು ಪವಿತ್ರ ಭಾಗವಾಗಿದೆ ಎಂದರು.
ಉಪಪ್ರಾಚಾರ್ಯ ಬಿ.ಎಂ.ಸಿಂಗನಳ್ಳಿ, ಪಿ.ವ್ಹಿ.ಮಹಲಿನಮಠ, ಎನ್.ಬಿ.ಪೂಜಾರಿ, ಸಂಗಮೇಶ ಚಾವರ, ಐ.ಎಸ್.ಶಿವಸಿಂಪಿಗೇರ್, ರೋಹಿತ ಸುಲ್ಪಿ, ಪ್ರಸನ್ ಜೋಗೂರ, ಡಾ. ವಿಶ್ವನಾಥ ನಂದಿಕೋಲ, ಎಸ್.ಎಸ್.ತಾಳಿಕೋಟಿ, ಎನ್.ಎಂ.ಶೆಳ್ಳಗಿ, ಸುನೀಲ ಪಾಟೀಲ, ಗವಿಸಿದ್ದಪ್ಪ ಆನೆಗುಂದಿ, ಶರಣು ಹೂಗಾರ, ರಾಹುಲ ನಾರಾಯಣಕರ್, ಸುಭಾಸ ಹೊಸಮನಿ, ಜೆಟ್ಟಿಂಗರಾಯ ಗಾಣಗೇರ್ ಸೇರಿದಂತೆ ಇನ್ನಿತರರು ಇದ್ದರು