ಮಾತು-22 ಸಂವಾದ ಕಾರ್ಯಕ್ರಮ
ಬಳ್ಳಾರಿ 02: ಜಾನಪದ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವತಿಯಿಂದ ದಿ. 31ರಂದು ನಡೆದ ಮಧ್ಯಾಹ್ನದ ಮಾತು-22 ಸಂವಾದ ಕಾರ್ಯಕ್ರಮದಲ್ಲಿ ವೇಶ್ಯೆಯರ ಜಗತ್ತು - ಪ್ರಸ್ತುತತೆ ಎಂಬ ವಿಷಯದ ಕುರಿತು ಸಂಶೋಧಕರಾದ ಪಂಪಾಪತಿ ವಿ. ಇವರು ವಿಷಯ ಮಂಡನೆ ಮಾಡಿದರು.
ಆಧುನಿಕ ಜಗತ್ತಿನಲ್ಲಿ ವೇಶ್ಯಾವೃತ್ತಿ ಎಲ್ಲೆಡೆ ವಿಜೃಂಭಿಸುತ್ತಿದೆ. ಸಮಾಜವಿಜ್ಞಾನಿಗಳು ಇಂದು ವೃಶ್ಯೆಯರನ್ನು ಗೌರವಯುತವಾಗಿ ಲೈಂಗಿಕ ಕಾರ್ಯಕತರ್ೆಯರು ಎಂದು ಕರೆಯುತ್ತಾರೆ. ವಿಶ್ವದಲ್ಲಿ ಇಂದು ವೇಶ್ಯಾವೃತ್ತಿ ಇರದ ರಾಷ್ಟ್ರವಿಲ್ಲ. ವೇಶ್ಯರಿಲ್ಲದ ದೇಶವಿಲ್ಲ ಎನ್ನುವ ಪರಿಸ್ಥಿತಿ ಇಂದು ನಿಮರ್ಾಣವಾಗಿದೆ. ವೇಶ್ಯೆಯರನ್ನು ತಮ್ಮ ಅಧೀನದಲ್ಲಿಟ್ಟುಕೊಂಡು ಅವರ ಮೂಲಕ ಹಣ ಸಂಪಾದಿಸುವ ವೇಶ್ಯಾವಾಟಿಕೆ ಅಡ್ಡೆಗಳು, ಹೋಟೆಲುಗಳು, ವಸತಿ ಗೃಹಗಳು ಇಂದು ಬಹಳವಾಗಿವೆ. ನಗರಗಳ ನಿದರ್ಿಷ್ಟ ಮನೆ, ವಸತಿ ಗೃಹ, ಬೀದಿ ಬಡಾವಣೆಗಳು ವೇಶ್ಯಾವೃತ್ತಿಗೆ ಮನೆ ಮಾತಾಗಿವೆ. ಜಗತ್ತಿನ ಅತ್ಯಂತ ಹಳೆಯ ಉದ್ಯೋಗಗಳಲ್ಲಿ ವೇಶ್ಯಾವೃತ್ತಿಯೂ ಒಂದಾಗಿದ್ದು ಇದು ತುಂಬಾ ಪ್ರಾಚೀನವಾದ ಸಾಮಾಜಿಕ ಸಮಸ್ಯೆಯಾಗಿದೆ.
ವೇಶ್ಯೆಯರನ್ನು ಇಂದು ಹಲವಾರು ಪಯರ್ಾಯ ಹೆಸರುಗಳಿಂದ ಗುರುತಿಸುತ್ತಾರೆ. ಕಾಮೋದ್ರಿತ ಪುರುಷರನ್ನು ತೃಪ್ತಿಗೊಳಿಸುವ ಭಾಗವಾಗಿ ಧಾಮರ್ಿಕ ಫಲವಂತಿಕೆಯ ಹೆಸರಿನಲ್ಲಿ ಅಸ್ಥಿತ್ವಕ್ಕೆ ಬಂದ ಈ ಪದ್ದತಿ ಕ್ರಮೇಣ ಬೇರೆ ಬೇರೆ ಸ್ವರೂಪವನ್ನು ಪಡೆದುಕೊಂಡು ಇಂದು ಅಸ್ತಿತ್ವದಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಾಗೇಶ ಪೂಜಾರ್ ಮಾತನಾಡಿ ದೇಶದಲ್ಲಿ ವೇಶ್ಯಾವಾಟಿಕೆಯು ಎಗ್ಗಿಲ್ಲದಂತೆ ಸಾಗುತ್ತಿದೆ. ಇದನ್ನು ತಡೆಗಟ್ಟಲು ಸಕರ್ಾರ ಅನೇಕ ಕ್ರಮಗಳನ್ನು ಕೈಗೊಂಡರೂ ಇದು ಹಾಗೆಯೇ ಮುಂದುವರಿದಿದೆ, ಹೆಣ್ಣು ವೇಶ್ಯೆಯಾಗಿ ಪರಿವರ್ತನೆಯಾಗಲು ಕೌಟುಂಬಿಕ ಹಿನ್ನೆಲೆ ಆಥರ್ಿಕ ಹಿನ್ನೆಲೆ ತುಂಬ ಪ್ರಮುಖ ಪಾತ್ರವಹಿಸುತ್ತವೆ ಆ ಕಾರಣಕ್ಕಾಗಿಯೇ ಹೆಣ್ಣು ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಇಂತಹ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ ಎಂದು ತಿಳಿಸಿದರು. ನೀಲಪ್ಪ ಎಸ್, ಪ್ರಾರ್ಥನೆ ಮಾಡಿದರು, ಸ್ವಾಗತ ಕೆಂಗಯ್ಯ ಕೆ, ಮರಯ್ಯ ವಂದಿಸಿದರು. ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ ಬೇವಿನಕಟ್ಟಿ ಉಪಸ್ಥಿತರಿದ್ದರು