ಬಳ್ಳಾರಿ

ನೈಜತೆಯೇ ನಾಟಕದ ಜೀವಾಳ ಟಿ ಹೆಚ್ ಎಂ ಬಸವರಾಜ್ ಹೇಳಿಕೆ

ನೈಜತೆಯೇ ನಾಟಕದ ಜೀವಾಳ ಟಿ ಹೆಚ್ ಎಂ ಬಸವರಾಜ್ ಹೇಳಿಕೆ

ಬಳ್ಳಾರಿ 04:  ಸೆ 04ರಂದು ನಗರದ ಸಂಗಮ ವೃತ್ತ ಬಳಿ ಇರುವ ರಾಘವ ಕಲಾಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ನಂತರ ಈ ಕಾರ್ಯಕ್ರಮದಲ್ಲಿ ಕಥೆ ,ಕವಿತೆ ,ಕಾದಂಬರಿಗಳಲ್ಲಿ ಕವಿಗಳು ಚಿತ್ರಿಸಿದ ನೋವಿನ ಕಥೆಗಳಿಗೆ ಸಂಭಾಷಣೆ ರೂಪ ಕೊಟ್ಟು ಪಾತ್ರ ಹಾಡು ಸಂಗೀತ, ಬೆಳಕಿನಾಟಕಗಳ ಮೂಲಕ  ಕಥೆಗೆ ಜೀವ ತುಂಬಿ ಭೂತದ ಗಾಯಗಳಿಗೆ ವರ್ತಮಾನದ ವಿಷಯಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಪರಿ ರಂಗಭೂಮಿ ಯಿಂದ ಸಾದ್ಯತೆ ಇದೆ ಎಂದು ಕಾರ್ಯ ಕ್ರಮ ವನ್ನು ಉದ್ಘಾಟಿಸಿದ ಟಿ.ಹೆಚ್.ಎಂ ಬಸವರಾಜ ಜಿಲ್ಲಾಧ್ಯಕ್ಷರು ಕರ್ನಾಟಕ ಇತಿಹಾಸ ಅಕಾಡೆಮಿ ಅವರು ಮಾತನಾಡಿದರು.

ಈ ನಾಟಕ ನಿನ್ನೆ ಭಾನುವಾರ  ಸಂಜೆ 6 ಗಂಟೆಗೆ ರಾಘವ ಕಲಾ ಮಂದಿರದಲ್ಲಿ ಪ್ರದರ್ಶನಗೊಂಡಿತು.  ರಂಗ ಜಂಗಮ ಸಂಸ್ಥೆ ,ಡಿ ಕಗ್ಗಲ್ ಮತ್ತು ಆಲಾಪ್ ಸಂಗೀತ ಕಲಾ ಟ್ರಸ್ಟ್ ,ಬಳ್ಳಾರಿ ಜಂಟಿಯಾಗಿ ಆಯೋಜಿಸಿದ ರಂಗ ಶ್ರಾವಣ ಕಾರ್ಯಕ್ರಮದ ನಿಮಿತ್ತ ನಿರ್ದೇಗತ ತಂಡದವರು ಪ್ರಸ್ತುತ ಪಡಿಸಿದರು. ನಾಟಕ ಗಾಯನಗಳು ಹೊಸ ಅಲೆಯ ನಾಟಕವನ್ನು ಪರಿಚಯಿಸುವ ಮತ್ತು ಹೊಸ ತಲೆಮಾರಿಗೆ ಬಣ್ಣದ ಬಯಕೆಯನ್ನ ಶಿಕ್ಷಣದ ಮೂಲಕ ನೀಡಿದಾಗ ಪರಂ ಪರೆ ಮುಂದುವರೆಯುತ್ತದೆ ಎಂದು ತಿಳಿಸಿದರು. ಪ್ರಾರಂಭದಲ್ಲಿ ಯೋಚಿತ ರೆಡ್ಡಿ, ಪ್ರತೀಕ,ಅನಿಷ ಮೈತ್ರಿ, ಗೌತಮಿ ದೇವರಾಜ್, ಪಂಡಿತ್ ಗುರು ರಾಘವೇಂದ್ರ ಹಾಗೂ ಹರ್ಷ ಇವರಗಳಿಂದ ಸುಗಮ ಸಂಗೀತ ಪ್ರದರ್ಶನ ಮಾಡಿದರು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ ಚೆನ್ನಪ್ಪ ಗೌರವಾಧ್ಯಕ್ಷರು ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ಇವರು ಮಾತನಾಡಿ ಕಲಾವಿದರ ಮೂಲಕ ಬದುಕಿನ ಸಾಮಾನ್ಯ ಜನರ ಬದುಕಿನ ನೆಲೆಗಳನ್ನು ಅರಿಯುವ ಅರಿತು ನಡೆಯುವ ಹಾಗೆ ಮಾರ್ಗದರ್ಶನ ಮಾಡುತ್ತದೆ ಎಂಬುದಾಗಿ ಮಾತನಾಡಿದರು.ನಂತರ  ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿರುವ ಪ್ರೊಫೆಸರ್ ಎನ್. ಶಾಂತನಾಯ್ಕ್ ರವರಿಗೆ ಸಂಸ್ಥೆಯಿಂದ   ಸನ್ಮಾನಿಸಿ  ಗೌರವಿಸಲಾಯಿತು.ಈ ವೇದಿಕೆಯಲ್ಲಿ ಅಕ್ಷರ ದಾಸೋಹ ಸಾಕ್ಷರತ ಸಹಾಯಕ ನಿರ್ದೇಶಕರಾದ  ಕೆ ಜೆ ಆಂಜನೇಯ, ಬಿ ಎಂ ಬಸವರಾಜ್, ಮಾಲೀಕರು ಸೋಮೇಶ್ವರ ಟ್ರಾವೆಲ್ಸ್, ಕೋಟೇಶ್ವರ ರಾವ್ ಅಧ್ಯಕ್ಷರು ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ, ರಂಗ ಜಂಗಮ ಸಂಸ್ಥೆಯ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ, ಅಲಾಪ್ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ ಕಲಾವಿದರು ಹಾಗೂ  ಪ್ರೇಕ್ಷಕರು ಇತರರು ಉಪಸ್ಥಿತರಿದ್ದರು 

ಸುದ್ದಿ ಓದಿ