ಛಲವಾದಿ ಸಮಾಜದಿಂದ ಶಾಸಕ ನಡಹಳ್ಳಿಗೆ ಬೆಂಬಲ
ತಾಳಿಕೋಟಿ: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಶಾಸಕ ಎ.ಎಸ್. ಪಾಟೀಲ(ನಡಹಳ್ಳಿ) ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಾಗೂ ಅವರು ಕ್ಷೇತ್ರದಲ್ಲಿರವ ಛಲವಾದಿ ಸಮಾಜದ ಕುರಿತು ಹೊಂದಿರುವ ಅಪಾರ ಕಾಳಜಿಯನ್ನು ಗುರುತಿಸಿ ಅವರನ್ನು ಈ ಚುನಾವಣೆಗೆ ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ಛಲವಾದಿ ಸಮಾಜ ಕ್ಷೇಮಾಭಿವೃದ್ಧಿ ಸಂಘ (ರಿ) ತಾಲೂಕಾ ಅಧ್ಯಕ್ಷ ಪರಶುರಾಮ ಕಟ್ಟಿಮನಿ ಹೇಳಿದರು.
ಮಂಗಳವಾರ ಪಟ್ಟಣದ ಲಕ್ಷ ಹೊಟೇಲ್ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಶಾಸಕ ನಡಹಳ್ಳಿ ಅವರು ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ನಮ್ಮ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಿರುವ ಅವರು ಗ್ರಾಮೀಣ ಭಾಗದಲ್ಲೂ ನಮ್ಮ ಸಮಾಜದವರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಮ್ಮದೇ ಸಮಾಜದ ಕೆಲವರು ಛಲವಾದಿ ಸಮಾಜ ಕಾಂಗ್ರೆಸ್ಗೆ ಬೆಂಬಲ ನೀಡುತ್ತದೆ ಎಂದು ಹೇಳುತ್ತಿದ್ದಾರೆ. ಇಂಥಹ ಯಾವುದೇ ಒಮ್ಮತದ ತೀರ್ಮಾ ನ ಸಮಾಜದ ವತಿಯಂದ ತಗೆದುಕೊಂಡಿಲ್ಲ. ಇದು ಜನರಿಗೆ ದಾರಿ ತಪ್ಪಿಸುವ ಕಾರ್ಯ ನಮ್ಮೆಲ್ಲ ಕೆಲಸ ಮಾಡಿದ ನಡಹಳ್ಳಿ ಅವರಿಗೆ ನಾವೆಂದೂ ದ್ರೋಹ ಬಗೆಯುವದಿಲ್ಲ ನಮ್ಮ ಸಂಪೂರ್ಣ ಬೆಂಬಲ ಅವರಿಗಿದೆ ಎಂದರು
ದಲಿತ ಮುಖಂಡ ಹರೀಶ ನಾಟೀಕಾರ (ಮುದ್ದೇಬಿಹಾಳ) ಮಾತನಾಡಿ 25 ವರ್ಷಗಳಿಂದ ನಮ್ಮ ಸಮಾಜದ ಮತಗಳನ್ನು ಪಡೆದುಕೂಂಡಿರುವ ಮಾಜಿ ಶಾಸಕರಿಗೆ ನಮ್ಮ ಪ್ರಮುಖ ಬೇಡಿಕೆಯಾದ ಡಾ. ಬಾಬಾಸಾಹೇಬರ ಮೂರ್ತಿ ಪ್ರತಿಷ್ಠಾಪಿಸಲು ಸಾಧ್ಯವಾಗಲಿಲ್ಲ. ಶಾಸಕ ನಡಹಳ್ಳಿ ಅವರು ಬಂದ ನಂತರ 4 ತಿಂಗಳಲ್ಲಿ ಮುದ್ದೇಬಿಹಾಳ ಹಾಗೂ ನಾಲತವಾಡದಲ್ಲಿ ಡಾ. ಬಾಬಾಸಾಹೇಬರ ಭವ್ಯ ಮೂರ್ತಿ ಪ್ರತಿಷ್ಠಪನೆಗೊಂಡಿದೆ ಅವರು ದಲಿತರು-ದೀನ-ಬಡವರ ಕುರಿತು ಅಪಾರ ಕಾಳಜಿ ಹೊಂದಿರುವ ನಾಯಕ ಇದನ್ನು ನಮ್ಮ ಸಮಾಜದ ಕೆಲವರು ತಿಳಿಯುವ ಅಗತ್ಯ ಇದೆ. ಈ ಬಾರಿ ಶಾಸಕರನ್ನು ಮತ್ತೇ ಗೆಲ್ಲಿಸಲು ನಾವು ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದರು.
ಈ ಸಮಯದಲ್ಲಿ ಪುರಸಭೆ ಮಾಜಿ ಸದಸ್ಯ ಮಲ್ಲಪ್ಪ ಕಟ್ಟಿಮನಿ, ದಲಿತ ಮುಖಂಡರಾದ ಬಸವರಾಜ ಕಟ್ಟಿಮನಿ, ಗುರಪ್ಪ ಛಲವಾದಿ, ರಾಜಕುಮಾರ ತಳವಾರ (ಮೂಕಿಹಾಳ), ಸೋಮಲಿಂಗಪ್ಪ ಹರಿಜನ (ನಾಗೂರ), ಬಾಬು ಮಿಣಜಗಿ, ಶರಣಪ್ಪ ಕೊಳ್ಳಿ, ಸುಭಾಸ ಚಮಲಾಪೂರ, ಬಸವರಾಜ ತಳವಾರ (ಬಳಗಾನೂರ), ಸಾಬಣ್ಣ ಕಟ್ಟಿಮನಿ, ಶೇಕಪ್ಪ ಕಟ್ಟಿಮನಿ, ದೇವಿಂದ್ರ ಕಟ್ಟಿಮನಿ, ಬಸವರಾಜ ತಾಳಿಕೋಟಿ, ಮಹಾದೇವಪ್ಪ ಇಂಗಳೇಶ್ವರ, ಶರಣಪ್ಪ ರಕ್ಕಸಗಿ, ಚಿದಾನಂದ ಕಟ್ಟಿಮನಿ, ನಿಜಲಿಂಗಪ್ಪ ಬಸರಿಕಟ್ಟಿ, ಸುಭಾಸ ಕಟ್ಟಿಮನಿ, ಮರಲಿಂಗಪ್ಪ ಕೊಣ್ಣೂರ, ಮಲ್ಲಪ್ಪ ಕಟ್ಟಿಮನಿ ಇದ್ದರು