ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಕೇಂದ್ರ ಆರಂಭ
ರಾಣೆಬೆನ್ನೂರು18: ರೈತರ ಉತ್ಪನ್ನಗಳನ್ನು ಬೆಂಬಲ ಬೆಲೆಗೆ ಖರೀದಿಸುವ ಯೋಜನಾ ಕೇಂದ್ರವನ್ನು ಇಂದಿನಿಂದ ಆರಂಭವಾಗಿದ್ದು ರೈತ ಸಮುದಾಯ ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಮುಂದಾಗಬೇಕು ಎಂದು ಶಾಸಕ ಅರುಣಕುಮಾರ್ ಪೂಜಾರ್ ಹೇಳಿದರು.
ಅವರು ಶನಿವಾರ ಸಂಜೆ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳ ಆಯೋಜಿಸಿದ್ದ ರೈತರ ಉತ್ಪನ್ನಗಳ ಬೆಂಬಲ ಬೆಲೆ ಖರೀದಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರೈತರ ಉತ್ಪನ್ನಗಳಾದ ಭತ್ತ, ಬಿಳಿ ಜೋಳ ಮತ್ತಿತರ ಧಾನ್ಯಗಳು ಬೆಂಬಲ ಬೆಲೆಗೆ ಖರೀದಿಸಲಾಗುತ್ತದೆ ಇದರ ಉಪಯೋಗವನ್ನು ಪ್ರತಿಯೊಬ್ಬ ರೈತರು ಪಡೆಯಲು ಮುಂದಾಗಬೇಕು ಅವರು ಕರೆ ನೀಡಿದರು.
ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕರಿದ ಕೇಂದ್ರದ ಉಪಯೋಗವನ್ನು ರೈತರು ಪಡೆದುಕೊಂಡು ಆರ್ಥಿಕ ಸಭಲತೆಯನ್ನು ಹೊಂದಬೇಕು ಎಂದು ಅವರು ಕರೆ ನೀಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಿಗೊಂಡರ, ಬಿಜೆಪಿ ಯುವ ಮುಖಂಡ ಸಿದ್ದಣ್ಣ ಚಿಕ್ಕಬಿದರಿ, ರೈತ ಮುಖಂಡ ಹನುಮಂತಪ್ಪ ಕಬ್ಬಾರ್, ಸಹಕಾರ ಇಲಾಖೆಯ ಜಿಲ್ಲಾ ವ್ಯವಸ್ಥಾಪಕರಾದ ಭುವನಾ ಪಾಟೀಲ್, ವರ್ತಕರ ಸಂಘದ ಕಾರ್ಯದರ್ಶಿ ಗುರುಪ್ರಸಾದ್ ಜಂಬಿಗಿ, ಮಂಜುನಾಥ, ರಾಘವೇಂದ್ರ ಮಾಲತೇಶ ಕಜ್ಜರಿ, ಎಪಿಎಂಸಿ ಸಹಕಾರದರ್ಶಿ ಪರಮೇಶ್ವರ ನಾಯಕ್, ಎಂ ಎನ್ ಬೆಣ್ಣಿ ಸೇರಿದಂತೆ ಇಲಾಖೆ ಸಿಬ್ಬಂದಿ ಎಪಿಎಂಸಿ ಸದಸ್ಯರು ಮತ್ತಿತರ ಗಣ್ಯರು ರೈತರು ರೈತ ಮುಖಂಡರು ಪಾಲ್ಗೊಂಡಿದ್ದರು. ಇಂದಿನಿಂದ ಬತ್ತೆ, ಬಿಳಿ ಜೋಳ ಮತ್ತಿತರ ಅವಸ ಧಾನ್ಯಗಳ ಖರೀದಿ ಪ್ರಕ್ರಿಯೆ ಆರಂಭವಾಗಿದ್ದು ರೈತರು ಉತ್ಪನ್ನಗಳನ್ನು ಇಲ್ಲಿ ಬೆಂಬಲ ಬೆಲೆಗೆ ನೀಡಬಹುದಾಗಿದೆ