ಜಮಖಂಡಿ

ವಿದ್ಯಾರ್ಥಿಗಳಲ್ಲಿ ಸ್ಪಷ್ಟವಾದ ಗುರಿ ಹೊಂದಿರಬೇಕು: ಮಾಳಿ

ವಿದ್ಯಾರ್ಥಿಗಳಲ್ಲಿ ಸ್ಪಷ್ಟವಾದ ಗುರಿ ಹೊಂದಿರಬೇಕು: ಮಾಳಿ

ಲೋಕದರ್ಶನ ವರದಿ,

ಜಮಖಂಡಿ03: ವಿದ್ಯಾರ್ಥಿಗಳಲ್ಲಿ ಸ್ಪಷ್ಟವಾದ ಗುರಿ ಹೊಂದಿರಬೇಕು ಇನ್ನೊಬ್ಬರ ಕೈಯಲ್ಲಿ ಕೆಲಸ ಮಾಡುವುದಕ್ಕಿಂತ ನೂರಾರು ಜನರಿಗೆ ಉದ್ಯೋಗ ನೀಡುವ ವ್ಯಕ್ತಿಗಳಾಗಬೇಕು. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಮುಂದೆ ಏನಾಗಬೇಕೆಂಬ ಗುರಿ ಇಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಮಾಳಿ ಸಮಾಜದ ರಾಜ್ಯಾಧ್ಯಕ್ಷ ಕಾಡು ಮಾಳಿ ಹೇಳಿದರು.

ನಗರದ ಬಸವಭವನ ಸಭಾ ಭವನದಲ್ಲಿ ನಡೆದ ತಾಲೂಕ ಮಾಳಿ ಸಮಾಜ ನೌಕರರ ಸಂಘ, ತಾಲೂಕ ಮಾಳಿ ಸಮಾಜದ ಸಹಯೋಗದಲ್ಲಿ 2021-22 ರಿಂದ 2022-23ನೇ ಸಾಲಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಪ್ರತಿಭೆ ಗುರುತಿಸಿ ಆಸಕ್ತಿಗೆ ತಕ್ಕಂತೆ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಜಮಖಂಡಿ ಕ್ಷೇತ್ರ ಶೈಕ್ಷಣಿಕ ಕೇಂದ್ರ ಬಿಂದುವಾಗಿ ಗುರಿತಿಸಿರುವ ಹಿನ್ನಲೆಯಲ್ಲಿ ಅಧ್ಯಯನಕ್ಕೆ ಯಾವುದೆ ತೊಂದರೆಯಿಲ್ಲ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು ಎಂದರು. 

ಬಿಎಲ್ಡಿಇ ಸಂಸ್ಥೆ ನಿರ್ದೇಶಕ ಅರುಣಕುಮಾರ ಶಹಾ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅಗತ್ಯವಾಗಿದೆ. ತಾಲೂಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಗುರುದೇವ ರಾನಡೆ ಮಹಾನ ವಿದ್ವಾಂಸರು ಜಮಖಂಡಿಯಲ್ಲಿ ಕಲಿತಿದ್ದಾರೆ. ಬಿಎಲ್ಡಿಇ ಸಂಸ್ಥೆಯಿಂದ 100 ಹಾಸಿಗೆ ಆಸ್ಪ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜು ಶೀಘ್ರದಲ್ಲಿ ಆರಂಭವಾಗಲಿದೆ ಎಂದರು.

ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಧರ್ಮಲಿಂಗಯ್ಯ ಗುಡಗುಂಟಿಮಠ, ವಿಶ್ರಾಂತ ಪ್ರಾಚಾರ್ಯ ಡಾ.ವಿ.ಎಸ್ಮಾಳಿ, ಅರ್ಬನ್ ಬ್ಯಾಂಕ ಅಧ್ಯಕ್ಷ ಅಪ್ಪಾಸಾಬ ಮನಗೂಳಿ, ಉಪಾಧ್ಯಕ್ಷ ಮಾಮುನ ಪಾರ್ಥನಳ್ಳಿ, ತಾಪಂ ಇಓ ಗುರುಶಾಂತ ಬೆಳ್ಳುಂಡಗಿ, ರಾಜ್ಯ ಮಾಳಿ ಸಮಾಜದ ಅಧ್ಯಕ್ಷ ಡಾ.ಸಿ.ಟಿ.ಕುಲಗೋಡ, ಸಿದ್ದಪ್ಪ ಮೆಂಡಿಗೇರಿ, ಜಿ.ಟಿ.ಮಾಳಿ, ಬಸಲಿಂಗಪ್ಪ ಮಾಳಿ, ಮಲ್ಲಿಕಾಜರ್ುನ ಕವಟೇಕರ, ಜೀವಪ್ಪ ಮಾಳಿ, ಸಾಬು ಮಾಳಿ, ಪ್ರಶಾಂತ ನಾಗನೂರ, ಸುರೇಶ ಮಾಳಿ, ಗುರುಪಾದ ಮಂಡಿಗೇರಿ, ಶಿವಲಿಂಗಪ್ಪ ಬಂಗಿ, ಬಸಪ್ಪ ಮಾಳಿ, ಕಲ್ಲಪ್ಪ ಮಾಳಿ, ಬಸಪ್ಪ ಗೋಠೆ, ಪ್ರದೀಪ ಮಹಾಲಿಂಗ ಪೂರಮಠ, ಸವಿತಾ ಮಂಡಿಗೇರಿ, ಪೂರ್ಣಿಮಾ ಮಾಳಿ ಇದ್ದರು.


ಸುದ್ದಿ ಓದಿ