ವಿದ್ಯಾರ್ಥಿ ಗಳ ಪ್ರತಿಭಾ ಪುರಸ್ಕಾರ ಸನ್ಮಾನ ಕಾರ್ಯಕ್ರಮ
ಲೋಕದರ್ಶನ ವರದಿ,
ಜಮಖಂಡಿ : 26: ವೀರಶೈವ ಲಿಂಗಾಯತ ಧರ್ಮ ಒಂದು ಸನಾತನ ಧರ್ಮ, ಜೀವನಕ್ಕೆ ಮುಕ್ತಿ ಒದಗಿಸುವ ಧರ್ಮ. ಸ್ತ್ರೀಯರಿಗೆ ಪ್ರಧ್ಯಾನ್ಯ ನೀಡುವ ಸಮಾಜವಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಮುರುಗೊಡ ಕಲ್ಯಾಣ ಮಂಟಪದಲ್ಲಿ ತಾಲೂಕ ಹಾಗೂ ನಗರ ಬಣಿಜಿಗ ಸಮಾಜದ ವಿದ್ಯಾಥರ್ಿಗಳ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬನಜಿಗ ಸಮಾಜಕ್ಕೆ ಶಟ್ಟರ ಸಮಾಜ ಎಂದು ಕರೆಯುತ್ತಾರೆ. ಈ ಸಮಾಜದ ಮಕ್ಕಳು ವಿದ್ಯಾವಂತರಾದರೆ ದೇಶ ಅಭಿವೃದ್ಧಿ ಹೊಂದಿದ ಹಾಗೆ, ಏಕೆಂದರೆ ಅವರಿಗೆ ತಿಳುವಳಿಕೆ ಮತ್ತು ವ್ಯವಹಾರ ಜ್ಞಾನ ಹೊಂದಿರುತ್ತಾರೆ. ಭವ್ಯ ಭಾರತಕ್ಕೆ ಮಕ್ಕಳ ಅವಶ್ಯಕತೆ ಬಹಳ ಮುಖ್ಯವಾಗಿದೆ. ಸ್ಪಧರ್ಾತ್ಮಕ ಜೀವನದಲ್ಲಿ ಮಕ್ಕಳು ಮುಂದೆ ಬರಲಿ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಅವಶ್ಯಕವಾಗಿದೆ. ಈ ಬಣಜಿಗ ಸಮಾಜದ ಕಾರ್ಯಕ್ರಮಕ್ಕೆ ಪ್ರತಿವರ್ಷವೂ ನನ್ನ ಕಡೆಯಿಂದ 51 ಸಾವಿರ ರೂ,ಗಳನ್ನು ನೀಡುತ್ತೇನೆ ಎಂದು 51 ಸಾವಿರ ರೂ, ನಗದು ಹಣ ನೀಡಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ವಿದ್ಯಾಥರ್ಿಗಳು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲಿ, ಸಮಾಜ ಚಿಕ್ಕದಾದರೂ ರಾಜ್ಯಕ್ಕೆ 7 ಮುಖ್ಯಮಂತ್ರಿಗಳನ್ನು, ಓರ್ವ ಉಪ ರಾಷ್ಟ್ರಪತಿಯನ್ನು ನೀಡಿದ ಹೆಮ್ಮೆ ಇದೆ. ಅಧಿಕಾರದಲ್ಲಿ ಇಲ್ಲದಿದ್ದರೂ ಸಮಾಜದ ಅಭಿವೃದ್ಧಿಗೆ ನನ್ನ ಕೈ ಸದಾ ಮುಂದಿರುತ್ತದೆ. ಶಾಲೆಯ ಕೀತರ್ಿ ಹಾಗೂ ಪಾಲಕರಿಗೆ, ಸಮಾಜಕ್ಕೆ ಹೆಸರು ತರುವಂತಹ ಕೆಲಸ ಮಕ್ಕಳು ಮಾಡಬೇಕೆಂದರು.
ಬಸವರಾಜ ಕೊಣ್ಣೂರ ವಿಶೇಷ ಉಪನ್ಯಾಸ ನೀಡಿದರು. ಜಿವನಮಾನ ಸಾಧನೆ ಮಾಡಿದವರಿಗೆ ಮತ್ತು ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು,
ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಆಶೀರ್ವಚನ ನೀಡಿದರು, ಯೋಗಪ್ಪ ಸವದಿ, ನಾಗೇಂದ್ರ ಶಿರಗಣ್ಣವರ, ಡಾ. ಟಿ.ಪಿ.ಬಾಂಗಿ, ಕಲ್ಯಾಣಿ, ಬಾಗೇವಾಡಿ, ಮಲ್ಲು ಜೈನಾಪೂರ ಅನೇಕರರು ಇದ್ದರು. ಹಣಮಂತ ಲಿಗಾಡೆ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಸಿ.ಎಸ್.ಬಾಂಗಿ ಮಾತನಾಡಿದರು. ಚಂದು ಜತ್ತಿ ನಿರೂಪಿದರು. ಸಂತೋಷ ಚನಾಳ ವಂದಿಸಿದರು.