ವಿದ್ಯಾರ್ಥಿಗಳ ಸಾಧನೆ
ಲೋಕದರ್ಶನ ವರದಿ
ಮುಂಡರಗಿ 09: 2023ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವು ಸೋಮವಾರ ಪ್ರಟಕವಾದ ಹಿನ್ನೆಲೆಯಲ್ಲಿ ಮುಂಡರಗಿ ತಾಲೂಕಿನ ಸ್ಥಳೀಯ ಎಸ್.ಎಫ್ಎಸ್ ಶಾಲೆ ಹಾಗೂ ಅಲ್ಪಸಂಖ್ಯಾತ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ದಾಖಲಿಸುವ ಮೂಲಕ ಮುಂಡರಗಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಬಿಇಓ ಎಂ.ಎಫ್.ಬಾರ್ಕಿ ಸಂತಸ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಪರೀಕ್ಷೆ ಬರೆದ 1966 ವಿದ್ಯಾರ್ಥಿಗಳಲ್ಲಿ 1648 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆಯಾಗಿ ಮುಂಡರಗಿ ತಾಲೂಕು 83.82ರಷ್ಟು ಫಲಿತಾಂಶವನ್ನು ಪಡೆದಿದೆ. ಈ ಪೈಕಿ ಸ್ಥಳಿಯ ಎಸ್.ಎಫ್.ಎಸ್ ಶಾಲೆಯ ವಿದ್ಯಾರ್ಥಿನಿ ನಮ್ರತಾ ಜೋಗಿ 625 ಕ್ಕೆ 616 (98.56%) ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ಮುಂಡರಗಿ ಅಲ್ಪಸಂಖ್ಯಾತ ಮೋರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿ 625 ಕ್ಕೆ 614(98.24%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಎಸ್.ಎಫ್.ಎಸ್ ಶಾಲೆಯ ವಿದ್ಯಾರ್ಥಿ ಕಿರಣ ಅಗಸಿಯವರ 625 ಕ್ಕೆ 613(98.08%) ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅವರು ಶಾಲೆಯ ಕೀರ್ತಿಯನ್ನು ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಬಿಇಓ ಎಂ.ಎಫ್.ಬಾರ್ಕಿ ಹಾಗೂ ಆಯಾ ಶಾಲೆಯ ಆಡಳಿತದ ಮಂಡಳಿಯ ಪರವಾಗಿ ಶಾಲೆಯೆ ಮುಖ್ಯೋಫಾಧ್ಯಾಯರು ಮತ್ತು ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿ, ಈ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸವು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು