ಬಳ್ಳಾರಿ

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ

ಬಳ್ಳಾರಿ15: ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ, ತರಭೇತಿದಾರರು, ಅಧ್ಯಕ್ಷರು ಪಂಚಾಕ್ಷರಿ ಮಹರ್ಷಿಯಲ್ ಆಟ್ಸ್ ಟ್ರಸ್ಟ್ (ರಿ), ಗಾಂಧಿನಗರ, ಬಳ್ಳಾರಿ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, 

ದಕ್ಷಿಣ ಕನ್ನಡ ಜಿಲ್ಲೆ ಶಿರಿಸಿ ನಗರದಲ್ಲಿ ಪ್ರೀಮಿಯರ್ ಸ್ಪೋಟ್ಸ್ ಕರಾಟೆ ಅಕಾಡೆಮಿ ಇವರು 2ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯನ್ನು ನ.13ರಂದು ಅಂಬೇಡ್ಕರ್ ಸಭಾ ಭವನ ಶಿರಸಿಯಲ್ಲಿ ಏರ್ಪಡಿಸಿದ್ದರು.

ಈ ಸ್ಪರ್ಧೆಯ ಮುಖ್ಯಸ್ಥರಾಗಿ ಶಿಹಾನ್, ಎನ್.ಎಸ್.ಸುರೇಂದ್ರ ವಹಿಸಿಕೊಂಡಿದ್ದರು. ಈ ಸ್ಫರ್ಧೆಯಲ್ಲಿ ಕರ್ನಾಟಕ  ರಾಜ್ಯದ ನಾನ ಜಿಲ್ಲೆಗಳಿಂದ ಸುಮಾರು 500ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದರು.  ಸ್ಪರ್ಧೆಯನ್ನು ಶಿಹಾನ್ ಬಿ.ಎಸ್. ಸುರಜ್ ಶಿರಿಸಿ ಇವರು ಏರ್ಪಡಿಸಿದ್ದರು. ಈ ಸ್ಫರ್ಧೆಯಲ್ಲಿ ರಾಜ್ಯದ ಹಲವಾರು ನುರಿತ ಕರಾಟೆ ಶಿಕ್ಷಕರು ಭಾಗವಹಿಸಿದ್ದರು. ಕರಾಟೆ  ಸ್ಪರ್ಧೆಯಲ್ಲಿ ನಮ್ಮ ಪಂಚಾಕ್ಷರಿ ಮಹರ್ಷಿ ಯಲ್ ಆಟ್ಸ್ ಟ್ರಸ್ಟ್ನ 14 ಜನ ವಿದ್ಯಾರ್ಥಿಗಳು ಈ ಕೆಳಗಿನ ವಿಭಾಗಗಳಲ್ಲಿ ಪದಗಳನ್ನು ಪಡೆದಿದ್ದಾರೆ.

15 ವರ್ಷ ಕೆಳಗಿನ ವಿಭಾಗದಲ್ಲಿ ಚೈತನ್ಯ.ಪಿ, ಕಟಾದಲ್ಲಿ ಕಂಚಿನ ಪದಕ, ಭಾರ್ಗವರೆಡ್ಡಿ ಎಂ.ಪಿ ಕಟಾದಲ್ಲಿ ಬೆಳ್ಳಿಯ ಪದಕ, ಸುಪ್ರೀತ್ರಾಜ್ ಕಟಾದಲ್ಲಿ ಬೆಳ್ಳಿ, ಕುಮ್ಮತಿಯಲ್ಲಿ ಬಂಗಾರ, ಮಾನಶ್ ಷರತ್ತು, ಕಟಾದಲ್ಲಿ ಕಂಚು, ಕುಮ್ಮತಿಯಲ್ಲಿ ಕಂಚು, ದೇವಗನ್ ಕಟಾದಲ್ಲಿ ಬೆಳ್ಳಿ, ಕುಮ್ಮತಿಯಲ್ಲಿ ಬೆಳ್ಳಿ, ಶ್ಯಾಮ್ಸುಂದರ್, ಕಟಾದಲ್ಲಿ ಕಂಚು, ವಿಜಯೇಂದ್ರ ಕಟಾದಲ್ಲಿ ಬೆಳ್ಳಿ, ಕುಮ್ಮತಿಯಲ್ಲಿ ಬಂಗಾರ,  ಅಷಿತಾ.ಪಿ ಕಟಾದಲ್ಲಿ ಬಂಗಾರ, ಕುಮ್ಮತಿಯಲ್ಲಿ ಕಂಚು, ಬಿಂದುಶ್ರೀ, ಕಟಾದಲ್ಲಿ ಕಂಚು, ಕುಮ್ಮತಿಯಲ್ಲಿ ಬೆಳ್ಳಿ, ನಿಖಿತಾ.ಬಿ, ಕಟಾದಲ್ಲಿ ಕಂಚು, ಸಂಜನಾ ಕಟಾದಲ್ಲಿ ಬೆಳ್ಳಿ, ಕುಮ್ಮತಿಯಲ್ಲಿ ಬೆಳ್ಳಿ, ನಿಹಾರಿಕ ಸಿಂಗ್, ಕಟಾದಲ್ಲಿ ಬೆಳ್ಳಿ. ಕುಮ್ಮತಿಯಲ್ಲಿ ಕಂಚು.

15 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಸೃಜನಾ ಎನ್.ಎಂ.ಪಿ ಕಟಾದಲ್ಲಿ ಬೆಳ್ಳಿ, ಕುಮ್ಮತಿಯಲ್ಲಿ ಕಂಚು, ಷಡಕ್ಷರಿ.ಪಿ ಕಟಾದಲ್ಲಿ ಬೆಳ್ಳಿ, ಕುಮ್ಮತಿಯಲ್ಲಿ ಬೆಳ್ಳಿ ಒಟ್ಟು 14 ಜನರಲ್ಲಿ 4 ಬಂಗಾರ, 4 ಬೆಳ್ಳಿ, 6 ಕಂಚುಗಳನ್ನು ಪಡೆದಿದ್ದಾರೆ.

 ಸಾಧನೆಗೈದ ವಿದ್ಯಾರ್ಥಿ ಗಳನ್ನು ಟ್ರಸ್ಟ್ನ ಅಧ್ಯಕ್ಷರು ಮತ್ತು ತರಬೇತಿದಾರರಾದ ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ, ಸಂಚಾಲಕ ಶಬರಿ ರವಿ, ಗೌರವಾಧ್ಯಕ್ಷ ವಿಕ್ರಂ ಮಣಿಪಾಲ್, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ 

ಸುದ್ದಿ ಓದಿ