ವಿಜೃಂಭಣೆಯಿಂದ ಜರುಗಿದ ಶ್ರೀಮನ್ ಮಹಾದೇವಿಯವರ ರಥೋತ್ಸವ
ತಾಳಿಕೋಟಿ: ಇಡೀ ನಾಡಿನಲ್ಲಿಯೇ ಪ್ರಶಿದ್ಧಿಯನ್ನು ಪಡೆದ ಗೊಟಖಂಡ್ಕಕಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜರುಗಿದ ಶ್ರೀಮನ್ ಮಹಾದೇವಿಯವರ ಭವ್ಯ ರಥವನ್ನು ಮಹಿಳೆಯರೇ ಎಳೆದರು. ಈ ಐತಿಹಾಸಿಕ ಜಾತ್ರೆಯಲ್ಲಿ ಬೇರೆ-ಬೇರೆ ಪ್ರದೇಶಗಳಿಂದ ಆಗಮಿಸಿದ ಸಾವಿರಾರೂ ಭಕ್ತರು ಭಕ್ತಿಯಲ್ಲಿ ಮಿಂದೆದ್ದು ಪುನಿತರಾದರು.
ಈ ರಥೋತ್ಸವ ಸಮಾರಂಭದಲ್ಲಿ ದೇ. ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಮುಖಂಡರಾದ ಸಂಗನಗೌಡ ಹೆಗರಡ್ಡಿ, ಪ್ರಭುಗೌಡ ಬಿರಾದಾರ(ಅಸ್ಕಿ), ಪ್ರಶಾಂತ ಹಾವರಗಿ, ಗುರುಗೌಡ ಗುರಡ್ಡಿ, ಸಾಹೇಬಗೌಡ ರಾರಡ್ಡಿ, ಶಿವನಗೌಡ ಬಿರಾದಾರ, ಸಾಹೇಬಗೌಡ ಬಿರಾದಾರ, ನಿಂಗನಗೌಡ ದೇಸಾಯಿ, ಸಂಗನಗೌಡ ಪಾಟೀಲ, ಬಿ. ಈ. ಬಿರಾದಾರ, ಬಿ. ಎಚ್. ಬಿರಾದಾರ, ರಾಮನಗೌಡ ಭಂಟನೂರ, ಬಸನಗೌಡ ಬಿರಾದಾರ(ಪೀರಾಪೂರ), ಮುತ್ತುಗೌಡ ಮಾಳಿ, ಕಾಶಿರಾಯಗೌಡ ಪೀರಾಪೂರ, ರಾಯಪ್ಪಗೌಡ ನೀರಲಗಿ ಮತ್ತೀತರರು ಉಪಸ್ಥಿತರಿದ್ದರು.