ಮಣ್ಣು ಜೀವ ತುಂಬಿದ ಸಚೇತನ ವಸ್ತು : ಸಹದೇವ ಯರಗುಪ್ಪ
ಬಳ್ಳಾರಿ 05: ವೈಜ್ಞಾನಿಕ ದೃಷ್ಟಿಯಲ್ಲಿ ಮಣ್ಣು ಎಂದರೆ ಒಂದು ನೈಸಗರ್ಿಕವಾದ ವಸ್ತು. ಇದು ಭೂಮಿಯ ಮೇಲ್ಭಾಗದಲ್ಲಿ ಒಂದು ತೆಳುವಾದ ರೂಪದಲ್ಲಿದೆ. ಮಣ್ಣು ಜೀವ ತುಂಬಿದ ಸಚೇತನ ವಸ್ತು ಹಾಗೂ ಸಮಸ್ತ ಜೀವಿಗಳಿಗೂ ಆಧಾರವಾಗಿದ್ದು, ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆ ಅವಶ್ಯಕವಿದೆ ಎಂದು ಉಪ ಕೃಷಿ ನಿದರ್ೇಶಕರಾದ ಸಹದೇವ ಯರಗುಪ್ಪ ಅವರು ಹೇಳಿದರು.
ಹೂವಿನಹಡಗಲಿಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಶನಿವಾರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಮತ್ತು ಹೂವಿನಹಡಗಲಿಯ ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರದ ವಿಸ್ತರಣಾ ಮುಂದಾಳುಗಳಾದ ಡಾ.ಸಿ.ಎಮ್.ಕಾಲಿಬಾವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು ಅನಿವರ್ಾಯ ಮತ್ತು ರೈತರು ಏಕಬೆಳೆ ಪದ್ಧತಿಯನ್ನು ಅನುಸರಿಸದೇ, ವಿವಿಧ ಬೆಳೆಗಳ ಜೊತೆಗೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿ, ಸಮಗ್ರ ಪೋಷಕಾಂಶಗಳ ನಿರ್ವಹಣೆಯಿಂದ ಸುಸ್ಥಿರ ಕೃಷಿಗೆ ಆದ್ಯತೆ ನೀಡಬೇಕು ಎಂದು ಹೇಳಿದ ಅವರು ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಸಿ ಮಣ್ಣಿನ ಆರೋಗ್ಯ ಕಾಪಾಡಿ ಎಂದರು.
ರೈತರಾದ ಪಿ.ವಿ.ಬಸವರಾಜ ಅವರು ಮಾತನಾಡಿ, ರೈತರು ಹೆಚ್ಚಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಸಾವಯವ ಕೃಷಿಯತ್ತ ಹಾಗೂ ಆರೋಗ್ಯಯುತ ಬೆಳೆಗಳಾದ ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚಾಗಿ ಬೆಳೆದು ಮುಂದಿನ ಪೀಳಿಗೆಗೆ ಆರೋಗ್ಯಯುತ ಮಣ್ಣನ್ನು ಕೊಡುಗೆಯಾಗಿ ನೀಡಬೇಕು ಎಂದರು.
ಉತ್ತಂಗಿಯ ಪ್ರಗತಿಪರ ರೈತರಾದ ಜಿ.ಸೋಮಶೇಖರ, ಕೇಂದ್ರದ ಮಣ್ಣು ವಿಜ್ಞಾನಿಗಳಾದ ಡಾ.ಮಂಜುನಾಥ ಭಾನುವಳ್ಳಿ ಅವರು ಮಾತನಾಡಿದರು.
ಗೃಹ ವಿಜ್ಞಾನಿಗಳಾದ ಸುನೀತಾ ಎನ್.ಹೆಚ್ ಅವರು ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಮಣ್ಣಿನ ಆರೋಗ್ಯ ಕಾಡರ್್ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರಮಜೀವಿ ಎನ್.ಜಿ.ಓ. ನಿದರ್ೇಶಕರಾದ ಮಲ್ಲಯ್ಯ, ರೈತರಾದ ಕಲ್ಲಪ್ಪ, ಚೇತನ್, ನೂರ್ಯಾ ನಾಯ್ಕ್ ಸೇರಿದಂತೆ ಹಡಗಲಿ, ಹೊಳಗುಂದಿ, ಉತ್ತಂಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ 75 ಕ್ಕೂ ಹೆಚ್ಚಿನ ರೈತರು ಭಾಗವಹಿಸಿದರು.