ನಡಹಳ್ಳಿ ಕುಟುಂಬದಿಂದ ಜಗದ್ಗುರುಗಳಿಗೆ ಬೆಳ್ಳಿ ಸಿಂಹಾಸನ, ಪಾದುಕೆ ಸಮರ್ಪಣೆ
ತಾಳಿಕೋಟೆ01: ಮನುಕುಲದ ಉದ್ಧಾರಕ್ಕಾಗಿ ಧರ್ಮ ಜಾಗೃತಿ ಮೂಡಿಸಲು, ಪಾದಯಾತ್ರೆ ಮುಖೇನ ಶ್ರೀಶೈಲಕ್ಕೆ ಬರುವ ಭಕ್ತಾದಿಗಳ ಸಂಕಷ್ಟ ತಿಳಿದುಕೊಳ್ಳಲು ಬೆಳಗಾವಿ ಜಿಲ್ಲೆ ಸುಕ್ಷೇತ್ರ ಯಡೂರನಿಂದ ಶ್ರೀಶೈಲದ ಮಲ್ಲಿಕಾರ್ಜುನನ ಸನ್ನಿಧಿಯವರೆಗೆ ನಾವು ಭಕ್ತರೊಂದಿಗೆ ನಡೆಸಿದ ಪಾದಯಾತ್ರೆಯ ಸಂಪೂರ್ಣ ಜವಾಬ್ಧಾರಿ ಹೆಗಲಿಗೇರಿಸಿಕೊಂಡು ಕಾರ್ಯಾಧ್ಯಕ್ಷತೆ ವಹಿಸಿ ಯಶಸ್ವಿಗೊಳಿಸಿದ ಸಮಾಜ ಸೇವಕ, ಮುದ್ದೇಬಿಹಾಳದ ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ, ದಾಸೋಹಿ ಎ.ಎಸ್.ಪಾಟೀಲ ನಡಹಳ್ಳಿಯವರಿಗೆ ಶ್ರೀಶೈಲ ಪೀಠದಿಂದ ಮಹಾದಾನಿ ಬಿರುದು ದಯಪಾಲಿಸಿ ಗೌರವಿಸುತ್ತೇವೆ ಎಂದು ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಅವರು 33 ದಿನಗಳ, 650 ಕಿಮಿ ಪಾದಯಾತ್ರೆ ಬುಧವಾರ ಶ್ರೀಶೈಲದಲ್ಲಿ ಸಂಪನ್ನಗೊಂಡ ಹಿನ್ನೆಲೆ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಆಶಿರ್ವಚನ ನೀಡಿದ ಅವರು, ಕಾಯರ್ಾಧ್ಯಕ್ಷತೆ ವಹಿಸಿ ಸಂಪೂರ್ಣ ಜವಾಬ್ಧಾರಿ ಹೊತ್ತುಕೊಂಡು ಪಾದಯಾತ್ರೆ ಯಶಸ್ವಿಗೊಳಿಸಿದ್ದಕ್ಕೆ ನಾವು ಸಂತುಷ್ಟರಾಗಿ ಭಕ್ತ ಸಮೂಹದ ಪರವಾಗಿ ಈ ಗೌರವ ನೀಡುತ್ತಿದ್ದೇವೆ ಎಂದರು.
ಪಾದಯಾತ್ರೆಯಲ್ಲಿನ ಪಾದಗಳು ನನ್ನವು. ಮಹಾಯಾತ್ರೆ ಮಾಡಿದ್ದು ಭಕ್ತರು. ಇದರ ಕಾರ್ಯಾ ಧ್ಯಕ್ಷತೆ ವಹಿಸಿದ್ದವರು ನಡಹಳ್ಳಿಯವರು. ದಾನಗಳಲ್ಲಿ ಪ್ರಮುಖವಾದ ಪಂಚ ದಾನಗಳನ್ನು (ರಜತದಾನ, ಸ್ವರ್ಣದಾನ, ಅನ್ನದಾನ, ವಸ್ತ್ರದಾನ, ಸಂಚಾರದಾನ) ಮಾಡಿ ಅವರು ಶ್ರೀಶೈಲ ಮಲ್ಲಿಕಾರ್ಜುನನ ಕೃಪೆಗೆ ಪಾತ್ರರಾಗಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದ ನಡಹಳ್ಳಿಯವರು ಯಡೂರದಿಂದ ಶ್ರೀಶೈಲದವರೆಗೂ ಮಾರ್ಗಮಧ್ಯೆ ಅನ್ನದಾಸೋಹಕ್ಕೆ ತಯಾರಿ ಮಾಡಿಕೊಂಡಿದ್ದರು. ಆದರೆ ಭಕ್ತರು ತಾವೇ ಅಲ್ಲಲ್ಲಿ ಅನ್ನದಾಸೋಹ ಏರ್ಪಡಿಸಿ ನಡಹಳ್ಳಿಯವರ ಕ್ರಿಯಾಶಕ್ತಿಗೆ ಕೈ ಜೋಡಿಸಿದರು. ಯಾತ್ರೆಯುದ್ದಕ್ಕೂ ಆಯಾಸವಾಗದಂತೆ ತಾವೇ ಸಿದ್ದಪಡಿಸಿದ್ದ ಭಕ್ತಿ ಹಾಡುಗಳು, ಸುಖಾಸೀನ ಬಸ್, ಎಲ್ಇಡಿ ಸ್ಕ್ರೀನ್, ಸ್ವಾಮೀಜಿಗಳ ವಿಶ್ರಾಂತಿಗೆ ವಾಹನ, ಪಾದಯಾತ್ರೆಯ ಪ್ರಚಾರ ಹೀಗೆ ಹತ್ತು ಹಲವು ರೀತಿಯಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ನಮ್ಮ ಪೀಠಕ್ಕೆ 8 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳ್ಳಿ ಸಿಂಹಾಸನ, 2 ಕೆಜಿ ತೂಕದ ಬೆಳ್ಳಿ ಪಾದುಕೆ ಅರ್ಪಿ ಸಿದ್ದಾರೆ. ಬೆಳ್ಳಿ ಪಾದುಕೆಗಳನ್ನು ನಮ್ಮ ಹಿಂದಿನ ಜಗದ್ಗುರುಗಳ ಗದ್ದುಗೆ ಮೇಲಿಟ್ಟು ನಿತ್ಯ ಪೂಜೆಗೆ ಅನುವು ಮಾಡಿಕೊಡುವ ಮೂಲಕ ಭಕ್ತನ ಭಕ್ತಿ ಶಾಸ್ವತವಾಗಿರಿಸುವ ಸಂಕಲ್ಪ ಮಾಡಿದ್ದೇವೆ. ಮಲ್ಲಿಕಾಜರ್ುನ ಅವರಿಗೆ ಇನ್ನೂ ಹೆಚ್ಚಿನ ಸೇವೆಯ ಶಕ್ತಿ ನೀಡಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುದ್ದೇಬಿಹಾಳ ಶಾಕ ಎ.ಎಸ್.ಪಾಟೀಲ ನಡಹಳ್ಳಿ, ಜಗದ್ಗುರುಗಳ ಪಾದಯಾತ್ರೆಗೆ ನಿರೀಕ್ಷೆಗೂ ಮೀರಿದ ಯಶಸ್ಸು ದೊರಕಿದೆ. 70-80 ವಯೋಮಾನದ ಸ್ವಾಮೀಜಿಗಳು ಜಗದ್ಗುರುಗಳಿಗೆ ಪಾದಯಾತ್ರೆಯುದ್ದಕ್ಕೂ ಜೊತೆಯಾಗಿರುವುದು ಸುದೈವ. ನಾಡಿನ ಎಲ್ಲ ಭಕ್ತರಲ್ಲಿ ಧರ್ಮ ಜಾಗೃತಿಗೋಸ್ಕರ ಜಗದ್ಗುರುಗಳು ಪಾದಯಾತ್ರೆ ನಡೆಸಿದ್ದನ್ನು ಇಡೀ ನಾಡು, ದೇಶ ಸಂತೋಷದಿಂದ ಸ್ವೀಕರಿಸಿದೆ. 33 ದಿನಗಳ ಕಾಲ ಜಗದ್ಗುರುಗಳಿಗೆ ಯಾವುದೇ ಸಣ್ಣ ಪುಟ್ಟ ತೊಂದರೆಯೂ ಆಗದಂತೆ ಸದ್ಭಕ್ತರು ನೋಡಿಕೊಂಡಿದ್ದಾರೆ. ಜಗದ್ಗುರುಗಳ ಈ ನಡಿಗೆ 650 ಕಿಮಿವರೆಗೂ ನಡೆದು ಬಂದದ್ದು ಇತಿಹಾಸದ ಪುಟದಲ್ಲಿ ಸುವಣರ್ಾಕ್ಷರಗಳಿಂದ ಬರೆದಿಡುವಂತಾಗಿದೆ. ಪಾದಯಾತ್ರೆಯಲ್ಲಿ ಬಂದ ಭಕ್ತರೆಲ್ಲರಿಗೂ ಮಲ್ಲಿಕಾಜರ್ುನನ ದರ್ಶನಾಶಿವರ್ಾದ ಲಭಿಸಿರುವುದು ಇನ್ನೊಂದು ಸುದೈವ. ಎಲ್ಲರ ಕಷ್ಟ ಕಾರ್ಪಣ್ಯಗಳು ಮುಕ್ತಾಯಗೊಂಡಂತಾಗಿವೆ. ಶಾಂತಿ, ನೆಮ್ಮದಿಯ ಭಾಗ್ಯ ಮಲ್ಲಿಕಾಜರ್ುನ ಎಲ್ಲರಿಗೂ ಕರುಣಿಸಲಿ. ಶ್ರೀಶೈಲ ಜಗದ್ಗುರುಗಳು ಕರ್ನಾಟಕ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದ ಜಗದ್ಗುರುಗಳು ಎನ್ನಿಸಿಕೊಂಡಿದ್ದಾರೆ. ಪಾದಯಾತ್ರೆ ಶ್ರೀಶೈಲದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂಥದ್ದಾಗಿದೆ. ಜಗದ್ಗುರುಗಳಿಗೆ ಬೆಳ್ಳಿಯ ಪಾದರಾಕ್ಷಿ ತೊಡಿಸಿ ಅವರ ಪಾದ ಧೂಳಿಯಾಗಿರಲು ಅಪೇಕ್ಷೆ ಪಟ್ಟಿದ್ದೆ. ಆದರೆ ಪೂಜ್ಯರು ಸ್ವೀಕರಿಸಿ ನಾವು ಇದನ್ನು ತೊಡೋದಿಲ್ಲ. ಇದನ್ನು ನಮ್ಮ ಹಿರಿಯ ಜಗದ್ಗುರುಗಳಾಗಿದ್ದ ಪಂಡಿತರಾಧ್ಯರ ಗದ್ದುಗೆಯ ಮೇಲಿಟ್ಟು ಸದಾ ಪೂಜಿತಗೊಳ್ಳಲಿ ಎಂದು ಆದೇಶ ಮಾಡಿದ್ದೇವೆ ಎಂದು ಹೇಳಿದ್ದು ಭಕ್ತರ ಮೇಲಿಟ್ಟಿರುವ ಅವರ ಪ್ರೀತಿ, ವಿಶ್ವಾಸ ಅಸದಳ ಎನ್ನುವುದನ್ನು ತೋರಿಸಿಕೊಟ್ಟಿದೆ. ಶ್ರೀಶೈಲದಲ್ಲಿ ಆಸ್ಪತ್ರೆ, ಯಾತ್ರಾಲಯ, ಕಂಬಿ ಮಂಟಪ ಕಟ್ಟುವ ಅವರ ಸಂಕಲ್ಪಕ್ಕೆ, ಜಗದ್ಗುರುಗಳ ಅವಧಿಯಲ್ಲಿ ಅವರ ಜನಪರ, ಬಡವರ ಪರ, ಜನಸಾಮಾನ್ಯರ ಪರ, ಧರ್ಮ ಜಾಗೃತಿಯ ಚಿಂತನೆಗೆ ಲಕ್ಷಾಂತರ ಭಕ್ತರು ಕೈ ಜೋಡಿಸಿದ್ದಾರೆ ಎಂದರು.
ಪಾದಯಾತ್ರೆಯಲ್ಲಿ ಪಾಲ್ಗೋಂಡಿದ್ದ ವಿವಿಧ ಮಠಾಧೀಶರು, ಸಾವಿರಾರು ಭಕ್ತರು ಇದ್ದರು.
ಪಾದಯಾತ್ರೆ ಸಮಾರೋಪಕ್ಕೆ ಭಕ್ತಿಯ ಮೆರುಗು:-
ಮಂಗಳವಾರ ಬೆಳಿಗ್ಗೆ ಶ್ರೀಶೈಲ ಪ್ರವೇಶಿಸಿ ಜಗದ್ಗುರುಗಳಾದಿಯಾಗಿ ಎಲ್ಲ ಪೂಜ್ಯರು, ಪಾದಯಾತ್ರಿಕರನ್ನು ಕೆಂಪು ನೆಲಹಾಸಿನ ಮೇಲೆ ಹೂ ಮಳೆ ಸುರಿಸಿ ಸ್ವಾಗತಿಸಿಕೊಳ್ಳಲಾಯಿತು. ಪಾದಯಾತ್ರೆ ಸಮಿತಿಯ ಕಾರ್ಯಾಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಜದ್ಗುರುಗಳ ಜೊತೆ ಪಾಲ್ಗೊಂಡರು. ಮಹಿಳೆಯರ ಡೊಳ್ಳು ವಾದ್ಯ ಸೇರಿ ಹಲವು ಪ್ರದರ್ಶನಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದವು. ಪಾದಯಾತ್ರೆಯಲ್ಲಿದ್ದ ಎಲ್ಲ ಭಕ್ತಾದಿಗಳಿಗೆ ವಿಶೇಷ ಟ್ಯಾಗ್ ನೀಡಿ ಮಲ್ಲಿಕಾರ್ಜು ನನ ಗರ್ಭಗುಡಿಯಲ್ಲಿನ ಲಿಂಗ ಸ್ಪಶರ್ಿಸಿ ದರ್ಶನಭಾಗ್ಯದ ವ್ಯವಸ್ಥೆ ಕಲ್ಪಿಸಲಾಗಿತ್ತು. 6 ವರ್ಷಗಳ ನಂತರ ಬರಿಗೈಗಳಿಂದ ಲಿಂಗ ಸ್ಪರ್ಶಕ್ಕೆ ಮೊದಲ ಬಾರಿ ಅವಕಾಶ ನೀಡಿದ್ದು ಭಕ್ತರ ಹುಮ್ಮಸ್ಸು ಹೆಚ್ಚಿಸಿತ್ತು. ಜಗದ್ಗುರುಗಳಿಗೆ ನೀಡಿದ ಬೆಳ್ಳಿ ಪಾದುಕೆಗಳನ್ನು ಶಾಸಕ ನಡಹಳ್ಳಿಯವರು ತಲೆ ಮೇಲೆ ಹೊತ್ತುಕೊಂಡು ಜಗದ್ಗುರು ಪಂಡಿತಾರಾಧ್ಯರ ಗದ್ದುಗೆಯವರೆಗೂ ಸಾಗಿ ಬಂದು ಅವುಗಳನ್ನು ಗದ್ದುಗೆಯ ಮೇಲಿರಿಸಿ ಭಕ್ತಿಭಾವ ಮೆರೆದರು. ಜಿಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ, ಬಸಯ್ಯ ನಂದಿಕೇಶ್ವರಮಠ, ಸೋಮನಗೌಡ ಬಿರಾದಾರ, ಬಸವರಾಜ ಗುಳಬಾಳ, ಶಿವಶಂಕರ ಹಿರೇಮಠ, ಲಕ್ಷ್ಮಣ ಬಿಜ್ಜೂರ ಸೇರಿದಂತೆ ಶಾಸಕರ ಹಲವು ಆಪ್ತರು ಪಾಲ್ಗೊಂಡಿದ್ದರು. ಜಗದ್ಗುರುಗಳು ಶಾಸಕ ನಡಹಳ್ಳಿ ಮತ್ತು ಮಾಜಿ ಜಿಪಂ ಸದಸ್ಯ ಬಸನಗೌಡ ವಣಿಕ್ಯಾಳ ಅವರನ್ನು ವೇದಿಕೆಯಲ್ಲೇ ಸನ್ಮಾನಿಸಿ ಗೌರವಿಸಿದರು.