'ಶ್ಯಾಮ್ ಮೆಟಾಲಿಕ್ಸ್' ಸಲ್ಮಾನ್ ಖಾನ್ ಹೊಸ ಬ್ರಾಂಡ್ ಅಂಬಾಸಿಡರ್
ಕೋಲ್ಕತಾ, ಸೆ. 27 ಶ್ಯಾಮ್ ಮೆಟಾಲಿಕ್ಸ್ ತನ್ನ ಮೌಲ್ಯವರ್ತಿತ ಉತ್ಪನ್ನಗಳಿಗಾಗಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ರನ್ನು ಹೊಸ ಬ್ರಾಂಡ್ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ.
ಶ್ಯಾಮ್ ಮೆಟಾಲಿಕ್ಸ್ ಕಂಪನಿಯು 2025 ರ ವೇಳೆಗೆ 12,600 ಕೋಟಿ ರೂಪಾಯಿ ವಹಿವಾಟು ಮಾಡುವ ಗುರಿಯನ್ನು ಹೊಂದಿರುವುದಾಗಿ ಸೋಮವಾರ ಘೋಷಿಸಲಾಗಿದೆ.
ನಟ ಸಲ್ಮಾನ್ ಖಾನ್ ಕಂಪನಿಯ ಹೊಸ ಬ್ರಾಂಡ್ ಅಂಬಾಸಿಡರ್ ಆಗಿರುವ ಕುರಿತು, ನಿರ್ದೇಶಕ ಸಂಜಯ್ ಅಗರ್ವಾಲ್ ಸುದ್ದಿಗೋಷ್ಠಿಗೆ ತಿಳಿಸಿದ್ದು, "ಈ ಪಾಲುದಾರಿಕೆಯಿಂದ ನಾನು ತುಂಬಾ ಸಂತೋಷಗೊಂಡಿದ್ದೇನೆ, ಸಲ್ಮಾನ್ ಖಾನ್ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ” ಎಂದಿದ್ದಾರೆ.