ತಾಳಿಕೋಟಿ

ಶಿವಾಜಿಯ ಶೌರ್ಯ ಯುವಕರಿಗೆ ಮಾದರಿ: .ರಾಮಲಿಂಗಯ್ಯ ಶ್ರೀಗಳು

ಶಿವಾಜಿಯ ಶೌರ್ಯ ಯುವಕರಿಗೆ ಮಾದರಿ: .ರಾಮಲಿಂಗಯ್ಯ ಶ್ರೀಗಳು

ತಾಳಿಕೋಟಿ: ಛತ್ರಿಪತಿ ಶಿವಾಜಿ ಮಹಾರಾಜರು ಕೇವಲ ಮರಾಠಾ ಸಮುದಾಯದ ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ ಬದಲಾಗಿ ಇಡೀ ದೇಶದ ಸಂಪತ್ತು. ಧರ್ಮ, ದೇಶದ ರಕ್ಷಣೆಗಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡಿ ಹೋರಾಡಿದ ವೀರ ಅರಸ ಎಂದು ಚಬನೂರು ಹಿರೇಮಠದ ಪೀಠಾಧಿಪತಿ ತಾಲೂಕಾ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಜೋತಿಷ್ಯರತ್ನ ಪರಮ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಚಬನೂರ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾರ್ವಜನಿಕ ಕಾರ್ಯಕ್ರಮಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಧರ್ಮದ ರಕ್ಷಣೆಗಾಗಿ ಶಿವಾಜಿ ಮಹಾರಾಜನನ್ನು ವೀರ, ಶೂರನನ್ನಾಗಿ ರೂಪಿಸಿದ ತಾಯಿ ಜೀಜಾಮಾತೆಯ ಕೌಶಲ್ಯ ಮರೆಯಲಾಗದಂಥದ್ದು, ಅವರು ಎಲ್ಲ ಸಮಾಜಕ್ಕೂ ಅನುಕರಣೀಯರಾಗಿದ್ದಾರೆ.

ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಪುತ್ರರಾದ ಸಂಗನಗೌಡ ಪಾಟೀಲ (ಸಾಸನೂರ) ಮಾತನಾಡಿ ಅಖಂಡ ಭಾರತದಲ್ಲಿ ಹಿಂದೂ ಧರ್ಮವನ್ನು ರಕ್ಷಣೆ ಮಾಡುವಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರ. 16ನೇ ಶತಮಾನದಲ್ಲಿಯೇ ಸ್ವರಾಜ್ಯ ಎಂಬ ಘೋಷಣೆ ಮೊಳಗಿಸಿದ್ದ ಶಿವಾಜಿ ಮಹಾರಾಜರ ಕೆಚ್ಚೆದೆಯ ಹೋರಾಟದ ಮನೋಭಾವ ತೋರಿದ ಧೈರ್ಯ ಶೌರ್ಯ ನಮ್ಮಂಥಹ ಯುವಕರಿಗೆ ಮಾದರಿಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಚಬನೂರ ಗ್ರಾಮದ ಗಣ್ಯರಾದ ಬಸನಗೌಡ ಪಾಟೀಲ (ಚಬನೂರ) ಮಂಜುನಾಥಗೌಡ ಕವಡಿಮಟ್ಟಿ, ಅಮೀತಗೌಡ ಪಾಟೀಲ, ಗ್ರಾಮದ ಗಣ್ಯರು, ಹಿರಿಯರು ಹಾಗೂ ಯುವಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು 

ಸುದ್ದಿ ಓದಿ