ಬಳ್ಳಾರಿ

ಶಿಶುನಾಳ ಷರೀಫರ ಸಾಹಿತ್ಯ ವರ್ತಮಾನ ಕಾಲಕ್ಕೂ ಪ್ರಸ್ತುತ: ಡಾ.ನಿಷ್ಠಿ ರುದ್ರಪ್ಪ

ಶಿಶುನಾಳ ಷರೀಫರ ಸಾಹಿತ್ಯ ವರ್ತಮಾನ ಕಾಲಕ್ಕೂ ಪ್ರಸ್ತುತ: ಡಾ.ನಿಷ್ಠಿ ರುದ್ರಪ್ಪ

ಬಳ್ಳಾರಿ: ಅಂತರಂಗದ ಶೋಧ, ಜಾತ್ಯತೀತ ಮನೋಭಾವ, ಸಮಾನತೆ, ಮಾನವೀಯ ಮೌಲ್ಯ, ಬದುಕಿನ ನಿರರ್ಥಕತೆ ಮುಂತಾದ ವಿಷಯಗಳನ್ನು ಶಿಶುನಾಳ ಷರೀಫರ ಸಾಹಿತ್ಯ ಒಳಗೊಂಡಿದ್ದು, ಸುಡುವ ವರ್ತಮಾನ ಕಾಲದಲ್ಲೂ ಪ್ರಸ್ತುತವಾಗುವಂತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ನಿಷ್ಠಿ ರುದ್ರಪ್ಪ ಅವರು ತಿಳಿಸಿದರು.  

ಅವರು ಶುಕ್ರವಾರದಂದು ಬೆಳಿಗ್ಗೆ ಸ್ಥಳೀಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜಿ  ಸ್ವಾಯತ್ತ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ `ಸೋರುತಿಹುದು ಮನೆಯ ಮಾಳಿಗಿ ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. 

ಷರೀಫರು ಪಾಶ್ಚಾತ್ಯ ಸಂಸ್ಕೃತಿ ಮತ್ತು ಯಂತ್ರ ಸಂಸ್ಕೃತಿಯನ್ನು ನೇರವಾಗಿ ವಿರೋಧಿಸುತ್ತಲೇ ದುಡಿಯುವ ಜನರ ಪರವಾಗಿ ಸಾಹಿತ್ಯದ ಮೂಲಕ ಅನುಸಂಧಾನ ನಡೆಸಿದರು. ಅವರ ಅನುಭಾವ ಸಾಹಿತ್ಯವು ಲೋಕದ ಕೇಡಿಗೆ ಸಂಜೀವಿನಿಯಂತಿದ್ದು, ಸಕಲಜೀವಾತ್ಮರಿಗೆ ಲೇಸನ್ನು ಬಯಸುತ್ತಲೇ ಕೋಮುಸೌಹಾರ್ದತೆಯನ್ನು ಮನುಷ್ಯ ಪ್ರೇಮವನ್ನು ಪ್ರತಿಪಾದಿಸುತ್ತದೆ ಎಂದರು. 

ಷರೀಫರ ಸಾಹಿತ್ಯ ಮಾನವೀಯತೆ ಮರೆತು ಮೃಗಗಳಂತೆ ವತರ್ಿಸುವ ಜನರ ಒಳಗಣ್ಣು ತೆರೆಸುವಂತಿದೆ.  ಶಿಶುನಾಳ ಷರೀಫರು ಪ್ಲೇಗ್ ಸಂದರ್ಭದಲ್ಲಿ ತಮ್ಮ ಗುರು ಗೋವಿಂದಭಟ್ಟರ ಆಜ್ಞೆಯ ಮೇರೆಗೆ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಲೇ ಜನಪದೀಯ ಮಟ್ಟುಗಳನ್ನು ಒಳಗೊಂಡ ಅಪರೂಪದ ತತ್ತ್ವಪದಗಳನ್ನು ಬರೆದಿದ್ದಾರೆ ಎಂದು ಬಣ್ಣಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಕೆ.ಮಂಜುನಾಥರೆಡ್ಡಿ ಅವರು, ಇಂತಹ ಕಾರ್ಯಕ್ರಮಗಳು ವಿದ್ಯಾಥರ್ಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ ಎಂದರು. 

ವೇದಿಕೆಯಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ ಎಸ್ ಅವರು ಉಪಸ್ಥಿತರಿದ್ದರು. 

ಆರಂಭದಲ್ಲಿ ಕೀರ್ತಿ  ಐಶಾಲಿ ಪ್ರಾರ್ಥಿ ಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ದಸ್ತಗೀರ್ಸಾಬ್ ದಿನ್ನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಪ್ರಾಧ್ಯಾಪಕರಾದ ಡಾ.ಬಿ.ಜಿ.ಕಲಾವತಿ ಸ್ವಾಗತಿಸಿದರು. ಡಾ.ಕೆ.ಬಸಪ್ಪ ನಿರೂಪಿಸಿದರು. ಕೊನೆಯಲ್ಲಿ ಡಾ.ಮೇಘರಾಜ್ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರವೀಣ್ಕುಮಾರ್ ಎಂ.ಎನ್, ಲಿಂಗಪ್ಪ, ಹುಲಿಕುಂಟೇಶ್ವರ, ಮಹಾಂತೇಶ, ಲೇಖಕಿ ಡಾ.ಸಿದ್ಧೇಶ್ವರಿ, ಪತ್ರಕರ್ತ ಮಂಜುನಾಥ ಸಾಲಿ, ಕಲಾವಿದ ಮಂಜುನಾಥ ಗೋವಿಂದವಾಡ ಹಾಗೂ ವಿದ್ಯಾರ್ಥಿ -ವಿದ್ಯಾರ್ಥಿ ನಿಯರು ಪಾಲ್ಗೊಂಡಿದ್ದರು 

ಸುದ್ದಿ ಓದಿ