ವಿಷಪೂರಿತ ಆಹಾರ ಸೇವಿಸಿ ಕುರಿ, ಆಡು ಸಾವು ಶಂಕೆ
ಲೋಕದರ್ಶನ ವರದಿ
ಬಸವನಬಾಗೇವಾಡಿ 18: ವಿಷಮಿಶ್ರಿತ ನೀರು ಕುಡಿದ ಇಲ್ಲವೆ ವಿಷಕಾರಿ ಸಸ್ಯ ಸೇವನೆಯಿಂದ ತಾಲೂಕಿನ ಯರನಾಳ ಗ್ರಾಮದ ಕುರಿಗಾರರ 13ಕುರಿಗಳು, 1ಆಡು ಸೇರಿದಂತೆ ಒಟ್ಟು 14 ಸಾವಿಗೀಡಾದ ಘಟನೆಯು ಬುಧುವಾರ ಬೆಳಗ್ಗೆ ತಾಲೂಕಿನ ಮನಗೂಳಿ ವ್ಯಾಪ್ತಿಯ ಯರನಾಳ-ಮನಗೂಳಿ ರಸ್ತೆಯ ಪಕ್ಕದ (ಮಲ್ಲಮ್ಮನ) ಕೆರೆಯಲ್ಲಿ ನಡೆದಿದೆ.
ತಾಲೂಕಿನ ಯರನಾಳ ಗ್ರಾಮದ ಶಿವಾನಂದ ದಿನ್ನಿ, ರಮೇಶ ಆಸಂಗಿ, ಸಿದ್ದಪ್ಪ ಮುಳವಾಡ ಇವರಿಗೆ ಸೇರಿದಂತೆ ಒಟ್ಟು 14ಕುರಿಗಳು ಸತ್ತಿದ್ದು ಆರು ಜನರಿಗೆ ಸೇರಿದ ಒಟ್ಟಾರೆ 300ಕುರಿಗಳು ಕಳೆದ ಮೂರು ದಿನಗಳಿಂದ ಮನಗೂಳಿ ವ್ಯಾಪ್ತಿಯ ಮಲ್ಲಮ್ಮನ ಕೆರೆಯಲ್ಲಿ ಮೇಯಿಸುತ್ತಿದ್ದರು ಆದರೇ ಬುಧುವಾರ ಬೆಳಗ್ಗೆ 12ಗಂಟೆಗೆ ಕೆರೆಯಲ್ಲಿನ ಸಣ್ಣ ಪ್ರಮಾಣದಲ್ಲಿ ಸಂಗ್ರಹವಾಗಿದ್ದ ನೀರನ್ನು ಕುಡಿಯಲು ಎಂದಿನಂತೆ ತೆರಳಿದಾಗ ಮುಂಚಿತವಾಗಿ ತೆರಳಿದ 30ಕ್ಕೂ ಹೆಚ್ಚು ಕುರಿಗಳು ನೀರು ಕುಡಿದು ಒದ್ದಾಡಲು ಆರಂಭಿಸಿದಾಗ ಕುರಿಗಾರರ ಮುಂದಾಲೋಚನೆಯಿಂದ ಉಳಿದ ನೂರಾರು ಕುರಿಗಳನ್ನು ನೀರಿನ ಸಮೀಪ ಬಾರದಂತೆ ತಡೆದ ಪರಿಣಾಮ ಭಾರಿ ಅನಾಹುತವು ತಪ್ಪಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮನಗೂಳಿ ಪಶು ಆಸ್ಪತ್ರೆಯ ಡಾ: ಸುಭಾಷ ನಾಯಿಕ ನೇತೃತ್ವದ ಸಿಬ್ಬಂದಿ ದಿಢೀರ ಆಗಮಿಸಿ ನೀರು ಕುಡಿದ ಉಳಿದ 25ಕುರಿಗಳಿಗೆ ತುತರ್ು ಚಿಕಿತ್ಸೆ ನೀಡಿದ ಪರಿಣಾಮ ಪ್ರಾಣಾಪಾಯದಿಂದ ಅವುಗಳು ಪಾರಾಗಿದ್ದು ಅಲ್ಲದೆ ನಂತರ ಬಾಕಿ ಉಳಿದ ಎಲ್ಲ ಕುರಿಗಳಿಗೂ ಪೂವರ್ಾಲೋಚನೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ, ನಂತರ ಘಟನಾ ಸ್ಥಳಕ್ಕೆ ಜಿಲ್ಲಾ ಪಶು ವೈದ್ಯಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ನಂತರ ತನಿಖೆಗಾಗಿ ನೀರು, ಕುರಿಗಳ ಕರಳು ಸೇರಿದಂತೆ ಇತರೆ ಅಂಗಗಳ ಮಾದರಿಗಳನ್ನು ಸಂಗ್ರಹಿಸಿ ರವಾನಿಸಿದರು.
ಯರನಾಳ ಗ್ರಾಮದ ಶಿವಾನಂದ ದಿನ್ನಿ, ರಮೇಶ ಆಸಂಗಿ, ಸಿದ್ದಪ್ಪ ಮುಳವಾಡ ಸೇರಿದಂತೆ ಆರು ಜನರ ತಲಾ 50ಕುರಿಗಳನ್ನು ಒಳಗೊಂಡ ತಂಡವೂ ಮೇಯಿಸುತ್ತಿದ್ದಾಗ ಘಟನೆ ನಡೆದಿದ್ದು ನಾವೂ ನಿರಂತರವಾಗಿ ಇದೇ ನೀರನ್ನು ಕುರಿಗಳಿಗೆ ಕುಡಿಸುವ ಜೊತೆಗೆ ನಾವೂ ಕುಡಿದ್ದೇವೆ ಏನು ಆಗಿಲ್ಲ ಇವತ್ತು ಕುರಿಗಳು ಸತ್ತಿದ್ದು ದುಷ್ಕಮರ್ಿಗಳ ಕೈವಾಡ ಇರಬಹುದು ಹಿಂದಿನ ದಿನ ಮಂಗಳವಾರ ಜಗಳವಾಗಿತ್ತು ಕುರಿ ಸಾವಿಗೆ ಜಗಳದ ವೈಷಮ್ಯ ಕಾರಣವಾಗಿದೆ ಎಂದು ಕುರಿಗಾರ ದಯಾನಂದ ಮಳ್ಳಿ, ಪರಸಪ್ಪ ಚಿಗರಿ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ದಾದು ಅಂಕಲಗಿ, ಮಾಳಪ್ಪ ಆಸಂಗಿ, ನಾಗಪ್ಪ ಬಿಜಾಪೂರ, ರಮೇಶ ಬಿಜಾಪೂರ, ಶಂಕ್ರೆಪ್ಪ ಮಳ್ಳಿ, ಬಸನಪ್ಪ ದಿನ್ನಿ, ಈರಪ್ಪ ಮುಳವಾಡ,ಬಸಪ್ಪ ಹೊನ್ನಳ್ಳಿ, ಕಾಂತಪ್ಪ ಮುಳವಾಡ, ಯಲ್ಲಪ್ಪ ಬೀರಲದಿನ್ನಿ, ಅವ್ವಣ್ಣ ರಾಜನಾಳ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು.