ಕರಾಟೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ತಾಳಿಕೋಟೆ02: ತಾಲೂಕಿನ ಮೈಲೇಶ್ವರದ ಬ್ರಿಲಿಯಂಟ್ ಆಂಗ್ಲ ಮಾಧ್ಯಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿ ಗಳು ರಾಷ್ಟ್ರಮಟ್ಟದ ಮಾಟ್ಸೋಗಿ-ಡು ಚಾಂಪಿಯನ್ ಷಿಪ್-2022(ಕರಾಟೆ) ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದ 2ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಷಿಪ್ನಲ್ಲಿ ಭಾಗವಹಿಸಿದ ಬ್ರಿಲಿಯಂಟ್ ಆಂಗ್ಲ ಮಾಧ್ಯಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿ ಗಳು ಚಿನ್ನದ ಹಾಗೂ ಬೆಳ್ಳಿ ಪದಕಗಳನ್ನು ಗಳಿಸಿಕೊಂಡು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ವಿದ್ಯಾರ್ಥಿ ಗಳಾದ ಪೃಥ್ವಿ ಹೊರಮನಿ, ತೇಜಸ್ ದ್ಯಾಪೂರ, ವಿವೇಕಾನಂದ ಹಿರೇಮಠ, ಬಿ.ಸಂದೀಪ, ಭಾಗೇಶ ಆರ್, ಮಲ್ಲನಗೌಡ ಪಾಟೀಲ, ಮಲ್ಲಿಕಾರ್ಜು ನ, ಅನೀಲ ಕೊಡಮನಹಳ್ಳಿ, ಮಹಾದೇವ ಮುರ್ಕನಾಳ, ಶ್ರೇಯಸ್ ಅವಂಟಿ, ಬಸವಂತ್ರಾಯಗೌಡ, ಸಂತೋಷ ಹುಡೇದ, ಆಕಾಶ ಅಂಗಡಿ, ಆಕಾಶ ಬಿರಾದಾರ, ಪವನಕುಮಾರ ಚವ್ಹಾಣ, ವರುಣ್ ಪವಾಡೆ, ಪ್ರತೀಕ ಚಿಕ್ಕೊಂಡ, ಬನದೇಶ ಸೂಗುರ, ಚರಣ ಪೂಜಾರಿ, ಭೀಮರೆಡ್ಡಿ ಪದ್ದಿ, ಸೋಮನಗೌಡ ಯಾಳವಾರ, ಸುಮಂತ ನಡುವಿನಮನಿ, ಗುರುಬಸವ ಕಂಬಳಿ, ಇಮ್ತಿಯಾಜ್ ಮಕಾನದಾರ, ರಾಹುಲ ಮುರಗಾನೂರ, ಪ್ರಜ್ವಲ ಚಿತ್ತಾಪುರ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಗಳಾಗಿದ್ದಾರೆ.
ಇದೇ ತಿಂಗಳ 28 ರಿಂದ 31 ರವರೆಗೆ ಗೋವಾದ ಮಡಗಾಂವನ ಮನೋಹರ ಪರಿಕ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ 17ನೇ ರಾಷ್ಟ್ರಮಟ್ಟದ ಮಾಟ್ಸೋಗಿ-ಡು ಚಾಂಪಿಯನ್ ಷಿಪ್-2022ಗೆ ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಿದ್ಯಾಥರ್ಿಗಳ ಸಾಧನೆಗೆ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸರ್ವ ಆಡಳಿತ ಮಂಡಳಿ ಹಾಗೂ ಬ್ರಿಲಿಯಂಟ್ ಶಾಲೆಯ ಎಲ್ಲಾ ಗುರು ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.