ಹಗರಿಬೊಮ್ಮನಹಳ್ಳಿ

ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆ: ಕರವೇ ಸನ್ಮಾನ

ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆ: ಕರವೇ ಸನ್ಮಾನ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ.21: ತಾಲೂಕಿನ ಬಾಚಿಗೊಂಡನಹಳ್ಳಿ-2 ಗ್ರಾಮದ ಹುಲಿಗೆಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಕ್ಕೆ ಶಿವರಾಮೇ ಗೌಡರ ಕರವೇ ತಾಲೂಕು ಘಟಕವು ಆಯ್ಕೆಯಾದ ವಿದ್ಯಾಥರ್ಿಗಳನ್ನು ಸನ್ಮಾಮ ಮಾಡಿದರು.

ಈ ವೇಳೆ ತಾಲೂಕು ಘಟಕದ ಅಧ್ಯಕ್ಷ ಬುಡ್ಡಿ ಬಸವರಜ ಮಾತನಾಡಿ ನಮ್ಮ ಈ ಭಾಗದ ಸರಕಾರಿ ಶಾಲಾ ಮಕ್ಕಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ನಿಜಕ್ಕೂ ಇಡೀ ಜಿಲ್ಲೆ ಸೇರಿದಂತೆ ತಾಲೂಕು ಸಂತಸ ಹಾಗೂ ಹೆಮ್ಮೆಯ ವಿಷಯವಾಗಿದೆ, ಶಾಲೆಯಲ್ಲಿ ದ್ಯಹಿಕ ಶಿಕ್ಷಕರಿಲ್ಲದೆ ಗ್ರಾಮದ ಯುವಕರು ಸೇರಿದಂತೆ ಹಿರಿಯರು ನೀಡಿದ ಪ್ರೋತ್ಸಹದಿಂದ ಇಂದು ರಾಜ್ಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಅಚ್ಚರಿಯಾಗಿದೆ, ಶಾಲೆಯ ವಿದ್ಯಾರ್ಥಿಗಳು ನೀಡಿದ ಅತ್ಯುತ್ತಮ ಪ್ರದರ್ಶನದಿಂದ ಇಂದು ಶಾಲೆಗಷ್ಟೇ ಅಲ್ಲದೇ ತಾಲೂಕು ಸಏರಿದಂತೆ ವಿಜಯನಗಗರ ಜಿಲ್ಲೆಗೂ ಕೀರ್ತಿ ತಂದಿದ್ದಾರೆ ಇನ್ನು ಹೆಚ್ಚಿನ ಯಶಸ್ಸು ಇವರಿಗೆ ಲಭಿಸಲಿ ಎಂದು ಆಶಿಸಿದರು.

ವಾಲ್ಮೀಕಿ ಸಮಾಜದ ಮುಖಂಡ ಕನ್ನಿಹಳ್ಳಿ ಚಂದ್ರಶೇಖರ್ ಮಾತನಾಡಿ ಬಚಿಗೊಂಡನಹಳ್ಳಿ ಎಂದ ಕೂಡಲೇ ನಮ್ಮ ಕ್ಷೇತ್ರದ ಮಾಲವಿ ಜಲಾಶಯದ ಹರಿಕಾರ ಎಂದೇ ಹೆಸರುವಾಸಿಯಾಗಿದ್ದಾರೆ ಇಂದು ಅದೇ ಗ್ರಾಮದ ಸರಕಾರಿ ಶಾಲೆ ಮಕ್ಕಳು ವಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಮತ್ತೊಂದು ಹರ್ಷದ ಸಂಗತಿಯಾಗಿದೆ, ಈ ವಿದ್ಯಾಥರ್ಿಗಳಿಗೆ ಸರಕಾರ ಸಮರ್ಪಕ ಸೌಲಭ್ಯಗಳನ್ನು ಕೂಡಲೇ ಒದಗಿಸುವುದುರ ಜೊತೆ ಮುಮದಿನ ಅಬ್ಯಾಸಕ್ಕೆ ಸವತ್ತುಗಳನ್ನು ನೀಡುವಂತೆ ಮನವಿ ಮಾಡಿಕೊಂಡರು ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಹಾಯ ಸಹಕಾರಕ್ಕೆ ಸದಾ ಸಿದ್ದನಿದ್ದೆನೆ ಎಂಬ ಭರವಸೆಯನ್ನು ನೀಡಿದರು.

ಶಾಲಾ ಮುಖ್ಯ ಶಿಕ್ಷಕ ಲೋಕಪ್ಪ, ಶಿಕ್ಷಕರಾದ ನಾಗರಾಜ್, ಮಲ್ಲಿಕಾರ್ಜುನ ಹೆಚ್.ಎಂ., ತಿಪ್ಪೇಸ್ವಾಮಿ ಎ.ಎಂ. , ಮಹಾಂತೇಶ್, ತರಬೇತುದಾರ ಬಸವರಾಜ, ಎಸ್ಡಿಎಂಸಿ ಅಧ್ಯಕ್ಷ ಪೀತಾಂಬ್ರಪ್ಪ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ನೀಲಮ್ಮ ಸೇರಿದಂತೆ ಗ್ರಾ.ಪಂ ಸದಸ್ಯರು, ದೌಲಸಾಬ್, ಮಧು, ಸೋಮನಾಥ್ ಭಜಂತ್ರಿ, ಆನಂದ್ ಸೇರಿದಂತೆ ಗ್ರಾಮದ ಗ್ರಾಮಸ್ಥರು ಇದ್ದರು 

ಸುದ್ದಿ ಓದಿ