ಬಳ್ಳಾರಿ

ಸಾಸಲವಾಡ ಚೆನ್ನಯ್ಯ, ಘಂಟಿ ರಾಘವೇಂದ್ರ ಶೆಟ್ರು ರವರಿಗೆ " ಪ್ರಗತಿ ಪರ ರೈತ " ಪ್ರಶಸ್ತಿ ಪ್ರಧಾನ

ಸಾಸಲವಾಡ ಚೆನ್ನಯ್ಯ, ಘಂಟಿ ರಾಘವೇಂದ್ರ ಶೆಟ್ರು ರವರಿಗೆ " ಪ್ರಗತಿ ಪರ ರೈತ " ಪ್ರಶಸ್ತಿ ಪ್ರಧಾನ

ಕೂಡ್ಲಿಗಿ28: ಪಂಚ ಪೀಠಗಳಲ್ಲಿ ಒಂದಾದ ಉಜ್ಜಿನಿ ಪೀಠದಿಂದ ಕೃಷಿಯಲ್ಲಿ ಸಾಧನೆಗೈದ ರೈತರಿಗೆ "ಪ್ರಗತಿ ಪರ ರೈತ" ಪ್ರಶಸ್ತಿಯನ್ನು ಪಟ್ಟಣದ ನಿವೃತ್ತ ಶಿಕ್ಷಕ ಸಾಸವಾಡ ಚೆನ್ನಯ್ಯ, ವ್ಯಾಪಾರಿ ಘಂಟಿ ರಾಘವೇಂದ್ರ ಶೆಟ್ರು, ರವರಿಗೆ "ಪ್ರಗತಿ ಪರ ರೈತ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇತ್ತೀಚೆಗೆ ತಾಲೂಕಿನ ಉಜ್ಜನಿ ಮಠದ ಆವರಣದಲ್ಲಿ ಜರುಗಿದ ದಾಮರ್ಿಕ ಕಾರ್ಯಕ್ರಮದಲ್ಲಿ ಉಜ್ಜಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿ ಶಿವಾಚಾರ್ಯ ಸ್ವಾಮೀಜಿಗಳು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

   ಈ ಸಂದರ್ಭದಲ್ಲಿ ತಾಲೂಕಿನ ಇತರೆ ಒಟ್ಟು 30ರೈತರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಳ್ಳಾರಿಯ ಕೃಷಿ ಸಹನಿದರ್ೇಶಕ ದ್ವಾರಕೀಶ್,ಕೃಷಿ ಅಧಿಕಾರಿ ಮಂಜುನಾಥ, ವಿರಕ್ಥ ಮಠದ ಭಕ್ತರು, ಹಾಗೂ ವೀರಶೈವ ಸಮಾಜದ ಮುಖಂಡರು, ಜನಪ್ರತಿನಿಧಿಗಳು,ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ದಸರಾಉತ್ಸವ ಸಂದರ್ಭದಲ್ಲಿ ಆಯೋಜಿಸುವ ನವರಾತ್ರೋತ್ಸವದ ಸಂದರ್ಭದಲ್ಲಿ ಪ್ರತಿವರ್ಷವೂ ತಾಲೂಕಿನ ಇತರೆ ಪ್ರಗತಿ ಪರ ರೈತರನ್ನು ಗುರುತಿಸಿ ಪ್ರಶಸ್ಥಿ ಪ್ರಧಾನ ಮಾಡಲಾಗುವುದೆಂದು ಕಾರ್ಯಕ್ರಮ ಆಯೋಜಿಸಿದ್ದ ಮಠದ ಕಮಿಟಿಯ ಮೂಲಗಳು ತಿಳಿಸಿವೆ.

ಸುದ್ದಿ ಓದಿ