ಬಳ್ಳಾರಿ

ಹೊಸಪೇಟೆ:ಸಂತ ಸೇವಾಲಾಲ್ ಜಯಂತಿ ಆಚರಣೆ

ಹೊಸಪೇಟೆ:ಸಂತ ಸೇವಾಲಾಲ್ ಜಯಂತಿ ಆಚರಣೆ

ಬಳ್ಳಾರಿ/ಹೊಸಪೇಟೆ 15: ಹೊಸಪೇಟೆ ತಾಲ್ಲೂಕು ಕಚೇರಿಯ ವತಿಯಿಂದ ಶ್ರೀ ಸಂತ ಸೇವಾಲಾಲ್ ಅವರ ಜಯಂತಿಯನ್ನು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸೋಮವಾರ ಸರಳವಾಗಿ ಆಚರಿಸಲಾಯಿತು.

ತಹಶೀಲ್ದಾರ್ ಹೆಚ್.ವಿಶ್ವನಾಥ್ ಅವರು ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಬಂಜಾರ ಸಮಾಜದವರಿಗೆ ಸಂತ ಸೇವಾಲಾಲ್ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಶಿರಸ್ತೇದಾರರಾದ ಶ್ರೀಧರ್, ರಮೇಶ, ತಾಲ್ಲೂಕು ಕಚೇರಿಯ ಪ್ರ.ದ.ಸ.ಪಾಪಣ್ಣ, ಆಹಾರ ಇಲಾಖೆಯ ಪ್ರ.ದ.ಸ.ಮಂಜುನಾಥ, ನಗರಸಭೆ  ಸಮುದಾಯದ ಸಂಘಟನಾ ಅಧಿಕಾರಿ ಎ. ರವಿಕುಮಾರ್ ಹಾಗೂ  ತಾಲ್ಲೂಕು ಕಚೇರಿಯ ಸಿಬ್ಬಂದಿಗಳು ಮತ್ತು  ತಾಲ್ಲೂಕು ಬಂಜಾರು ಸಂಘದ ಅಧ್ಯಕ್ಷರರಾದ ಎಲ್.ರಮೇಶ್ ನಾಯ್ಕ್, ಸಂತ ಸೇವಾಲಾಲ್ ಟ್ರಸ್ಟ್‍ನ  ಅಧ್ಯಕ್ಷರರಾದ ರಾಮಾಂಜಿ ನಾಯ್ಕ್, ಟ್ರಸ್ಟ್‍ನ ಸದಸ್ಯರಾದ ಎಲ್.ಭೀಮಾನಾಯ್ಕ್,  ತಾಲ್ಲೂಕು ನೌಕರ ಸಂಘದ ಅಧ್ಯಕ್ಷರರಾದ ಶಿವರಾಮ ನಾಯ್ಕ್, ವಾಲ್ಯಾ ನಾಯ್ಕ್, ಹಾಗೂ ಇತರÀರು ಇದ್ದರು. 

ಸುದ್ದಿ ಓದಿ