ಪ್ರವಾಸಿ ಮಂದಿರದ ಆವರಣದಿಂದ ರಥಯಾತ್ರೆಯ ಪೂಜೆ ಸಲ್ಲಿಸಿ ಶಂಕರ ಗೌಡಿ
ಪ್ರವಾಸಿ ಮಂದಿರದ ಆವರಣದಿಂದ ರಥಯಾತ್ರೆಯ ಪೂಜೆ ಸಲ್ಲಿಸಿ ಶಂಕರ ಗೌಡಿ
ಮುಂಡಗೋಡ 28: ಪಟ್ಟಣದಲ್ಲಿ ಕರ್ನಾಟಕ ಸಂಭ್ರಮ 50ರ ನಿಮಿತ್ತ ಜ್ಯೋತಿ ರಥಯಾತ್ರೆಗೆ ರವಿವಾರ ಸ್ವಾಗತ ಮಾಡಿ ತಾಲೂಕಿನಾದ್ಯಂತ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ರಥಯಾತ್ರೆಯ ಪೂಜೆ ಸಲ್ಲಿಸಿ ತಹಶೀಲ್ದಾರ್ ಶಂಕರ ಗೌಡಿ ಕರ್ನಾಟಕ ಭುವನೇಶ್ವರಿ ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡಿ ರಥಕ್ಕೆ ಪೂಜೆಸಿ ಸಲ್ಲಿಸಿದ್ದರು. ಪಟ್ಟಣಕ್ಕೆ ಆಗಮಿಸಿದ ಕರ್ನಾಟಕ ಸಂಭ್ರಮ50 ರಥಯಾತ್ರೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಡೊಳ್ಳು ಕುಳಿತ ವಾದ್ಯದೊಂದಿಗೆ ರಥವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಾತೂರ ಪಾಳಾ ಕಡೆ ಸಂಚರಿಸಿ ನಂತರ ಮಳಗಿ ಗ್ರಾಮದಲ್ಲಿ ರಥ ಸಂಚರಿಸಿ ರಾತ್ರಿ ಅಲ್ಲಿನ ವಸತಿ ನಿಲಯದಲ್ಲಿ ವಾಸ್ತವ್ಯ ಹೂಡಿ ಸೋಮವಾರ ಬೆಳಗ್ಗೆ ಮಳಗಿಯಿಂದ ಶಿರಸಿ ತಾಲೂಕಿನತ್ತ ಪ್ರಯಾಣಿಸಲಿದೆ. ತಾಪಂ ಇಒ ಟಿ.ವೈ, ದಾಸನಕೊಪ್ಪ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ.ಸಿಪಿಐ ರಂಗನಾಥ ನೀಲಮ್ಮನವರ, ಪಪಂ ಅಧ್ಯಕ್ಷೆ ಜಯಸುಧಾ ಭೋವಿ, ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ವಸಂತ ಕೊಣಸಾಲಿ, ಸಿಡಿಪಿಒ ರಾಮು ಬೈಲ್ಸಿಮೆ, ಪಂಚಾಯತ್ ರಾಜ್ ಎಂಜಿನಿಯರ್ ಪ್ರದೀಪ ಭಟ್ ಇದ್ದರು.