ಧಾರವಾಡ - ಹುಬ್ಬಳ್ಳಿ

ಸಾಲಿಮಠ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ “ನಾಟ್ಯಾಂಜಲಿ”

ಸಾಲಿಮಠ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ “ನಾಟ್ಯಾಂಜಲಿ”

 ಧಾರವಾಡ 16: ಬೀಜ ಮೊಳಕೆಯೊಡೆಯಲು ಫಲವತ್ತಾದ ಭೂಮಿ, ನೀರು ಅತಿ ಅವಶ್ಯ, ಅದೇ ರೀತಿ ಒಂದು ಮಗುವಿನ ಸರ್ವಾಂಗೀಣ ಬೆಳವಣಿಗಾಗಿ ತಂದೆ ತಾಯಿ, ಶಾಲೆ, ಶಿಕ್ಷಕರು ಅತಿ ಅವಶ್ಯ. ಮಗುವಿನ ಮೇಲೆ ಕಾಳಜಿ ಪ್ರೀತಿ ಎರಡೂ ಇರಲಿ ಆದರೇ ಅತಿಯಾದ ಪ್ರೀತಿ ಮಗುವಿನ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಮನಸೂರಿನ ಸಾಲಿಮಠ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ “ನಾಟ್ಯಾಂಜಲಿ” ಯನ್ನು ಉದ್ಘಾಟಿಸುತ್ತಾ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು. ಶಾಲೆಯ ಅಭಿವೃದ್ಧಿಯಲ್ಲಿ ಪಾಲಕರ ಪಾತ್ರ ಬಹುಮುಖ್ಯ ಎಂದರು. 

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಬೆಳೆಸುವುದು ಪಾಲಕರಿಗೆ ಒಂದು ಸವಾಲಾಗಿದೆ. ಶೈಕ್ಷಣಿಕ, ಸಾಮಾಜಿಕ, ಕೌಟುಂಬಿಕ ಕಾರಣಗಳಿಂದಾಗಿ ಪಾಲಕರು, ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿಲ್ಲ. ಆದ್ದರಿಂದ ಅಪರಾಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೋಳ್ಳುತ್ತಿರುವುದು ಆಘಾತಕಾರಿ ಸಂಗತಿ. ಈ ಸಮಸ್ಯೆಗೆ ಪಾಲಕರು, ಶಿಕ್ಷಕರು ಸಂಘ ಸಂಸ್ಥೆಗಳು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಹಾವೀರ ಉಪಾದ್ಯೆ ಅಭಿಪ್ರಾಯಪಟ್ಟರು. ಹಲವು ಕಷ್ಟ-ಕಾರ​‍್ಪಣಯಗಳ ನಡುವೆಯೂ ಈ ಸಂಸ್ಥೆ ಉತ್ತಮ ಶಿಕ್ಷಣ ನೀಡುವದರಲ್ಲಿ ಹಿಂದೆ ಬಿದ್ದಿಲ.್ಲ ನಿಸರ್ಗದ ಮಡಿಲಲ್ಲಿ ನೈತಿಕ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆ ಇನ್ನೂ ಕೆಲವೇ ದಿನಗಳಲ್ಲಿ ನೂತನ ಕಟ್ಟಡದ ಕಾಮಾಗಾರಿಯನ್ನು ಪ್ರಾರಂಭಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸಿದ್ಧೇಶ್ವರ ಸಾಲಿಮಠ ತಿಳಿಸಿದರು. 

ಇದೆ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿ ಸೂರಜ್ ಮುದಕವಿ ಎಂ.ಬಿ.ಬಿ.ಎಸ್ ಗೆ ಆಯ್ಕೆ ಆಗಿದ್ದು, ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಉಪಾಧ್ಯಕ್ಷರಾದ ಶ್ರೇಯಸ್ ಸಾಲಿಮಠ ಹಾಗೂ ಕಾರ್ಯದರ್ಶಿಗಳಾದ ಶಶಿರೇಖಾ ಸಾಲಿಮಠ ಉಪಸ್ಥಿತರಿದ್ದರು. ಶಾಲೆಯ ಅಧ್ಯಕ್ಷರಾದ ಎಸ್‌.ವಿ.ಸಾಲಿಮಠ ಅವರು ನೂತನ ಕಟ್ಟಡದ ರೂಪರೇಷೆಗಳನ್ನು ವಿವರಿಸಿದರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಸುಮಿತ್ರ ವಾರ್ಷಿಕ ವರದಿಯನ್ನು  ಓದಿದರು. ಶಾಲೆಯ ವಿದ್ಯಾರ್ಥಿಗಳಾದ ಕು. ಸಂಪ್ರಿತಾ ಹಾಗೂ ಕು. ರಿತೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಅದೇರೀತಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಿಕ್ಷಕರು ಮತ್ತು ಪಾಲಕರು ಉಪಸ್ಥಿತರಿದ್ದು ಯಶಸ್ವಿಯಾಗಿ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಕೊನೆಗೆ ಶಿಕ್ಷಕಿ ರೂಪಾ ವಂದನಾರೆ​‍್ಣಯನ್ನು  ಮಾಡಿದರು. 


ಸುದ್ದಿ ಓದಿ