ಲೇಖನಗಳು

ಲಯೋಲದ ಸಂತ ಇಗ್ನಾಸಿಯಸ್

ಲಯೋಲದ ಸಂತ ಇಗ್ನಾಸಿಯಸ್

1491 ರಲ್ಲಿ ಉತ್ತಮ ಸ್ಪೈನ್ ದೇಶದ ಲಯೋಲ ಎಂಬಲ್ಲಿ ಓನಾಜ ಮತ್ತು ಲಿಕೊನಾರವರ 11ನೇ ಮಗನಾಗಿ ಇಗ್ನಾಸಿಯವರ ಜನನ. ಲೊಯೊಲಾದ ಸಂತ ಇಗ್ನಾಸಿ ಸ್ಪೈನ್ ದೇಶದ ಸೈನಿಕನಾಗಿದ್ದರು. 1521 ರಲ್ಲಿ ಫ್ರಾನ್ಸ್ ದೇಶದ ಸೈನಿಕರು ಪ್ಯಾಂಪಲೋನಾ ಗ್ರಾಮದ ಮೇಲೆ ದಾಳಿ ಮಾಡಿದರು. ಸ್ಪೈನ್ ದೇಶದ ಸೈನಿಕರು ಮತ್ತು ಲೊಯೊಲಾದ ಇಗ್ನಾಷಿಯರು ಧೈರ್ಯದಿಂದ ಯುದ್ಧ ಮಾಡಿದರು. ಆ ಯುದ್ಧದಲ್ಲಿ ಕಾಲು ಮುರಿದು ಆಸ್ಪತ್ರೆ ಸೇರಿದ ಇಗ್ನಾಷಿಯವರು ದೀರ್ಘ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಯಿತು. ಆಸ್ಪತ್ರೆಯಲ್ಲಿ ಯೇಸುವಿನ ಮತ್ತು ಸಂತರ ಜೀವನ ಚರಿತ್ರೆಯ ಪುಸ್ತಕಗಳನ್ನು ಓದಿ ತಮ್ಮ ಜೀವನದ ನಶ್ವರತೆಯನ್ನು ಅಥರ್ೈಸಿಕೊಂಡ ಇವರು ಮನಪರಿವರ್ತನೆ ಹೊಂದಿದರು. 1522 ರಲ್ಲಿ ಮೊಂಟೆಸರ್ಪ್ ಪುಣ್ಯ ಕ್ಷೇತ್ರದಲ್ಲಿ ಸೈನಿಕನ ಕವಚ, ಖಡ್ಗ, ತಾಯಿ ಮರಿಯಮ್ಮನವರ ಪುಣ್ಯಕ್ಷೇತ್ರದಲ್ಲಿ ಅಪರ್ಿಸುವದರ ಮೂಲಕ ಹಳೆಯ ಜೀವನವನ್ನು ತ್ಯಜಿಸಿ ಪ್ರಭುವನ್ನು ಅಪ್ಪಿಕೊಂಡು ದೇವರ ಧ್ಯಾನದ ಮತ್ತು ಪ್ರಾರ್ಥನೆಯಲ್ಲಿ ಕಳೆಯಲಾರಂಭಿಸಿದರು. 

ಪ್ಯಾರಿಸನಲ್ಲಿ ಸಂತ್ ಫ್ರಾನ್ಸಿಸ್ ಜೇವಿಯವರನ್ನು ಭೇಟಿಯಾದಾಗ ಅವರು ನುಡಿದ ಮತ್ತು ಪವಿತ್ರ ಗ್ರಂಥದಲ್ಲಿರುವ ಆ ವಾಕ್ಯವನ್ನು ಬೋಧಿಸಿದಾಗ ಅವರ ಮನ ಪರಿವರ್ತನೆಯಾಯಿತು. ಇಗ್ನಾಷಿಯವರಿಗೆ 33 ವರ್ಷ ವಯಸ್ಸಾದಾಗ ಶಾಲಾ ಮಕ್ಕಳೊಂದಿಗೆ ಕುಳಿತು ನಾಚಿಕೆ ಪಡದೆ ಲಾಟೀನ್ ಭಾಷೆಯನ್ನು ಕಲಿತರು. ಹೀಗೆ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಹನ್ನೊಂದು ವರ್ಷ ಅಧ್ಯಯನ ಮಾಡಿದರು. ಕ್ರಿ. ಶ. 1535 ರಲ್ಲಿ ಪ್ಯಾಡಿನ್ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಅವರ ತ್ಯಾಗ ಪ್ರಾಮಾಣಿಕತೆ ಮತ್ತು ಆಧ್ಯಾತ್ಮಿಕತೆಗೆ ಮನಸೋತ ಆರು ಮಂದಿ ಯುವಕರು ಆಕಷರ್ಿತರಾದರು. 

ಮನುಷ್ಯದಿಂದ ಅಥರ್ೈಸಿಕೊಳ್ಳಲಾಗದಂತಹ ಹಲವು ವಿಷಯಗಳು ದೇವರ ನೆರವಿನಿಂದ ಸ್ಪಷ್ಟವಾಗುತ್ತದೆ ಎಂದು ಇಗ್ನಾಷಿಯವರು ನುಡಿದಿದ್ದಾರೆ. 

ಸೈನಿಕರು ಮತ್ತು ಧ್ಯಾನ ಮಾಡುವವರ ಸಂತ ಇಗ್ನಾಷಿಯವರನ್ನು ವಿಶೇಷ ಪಾಲಕರನ್ನಾಗಿ ಪರಿಗಣಿಸುತ್ತಾರೆ ನಮಗೆ ದಾರಿ ತೋಚಿದಷ್ಟು ಹೆಚ್ಚೆಚ್ಚಾಗಿ ನಾವು ದೇವರಲ್ಲಿ ನಂಬಿಕೆ ಇಡುವವರಾಗಬೇಕು ಮಾನವ ನೆರವು ನಮಗೆ ಸಿಗದಾಗ ದೇವರು ನೆರವು ಹತ್ತಿರವೆ ಇರುತ್ತದೆ ಎಂದರು. ಇಗ್ನಾಷಿಯರು ಸ್ನೇಹಿತರೊಬ್ಬರ ಪಾಲಿಗೆ ಸಂತರಾಗಿ ಕಂಡು ಬಂದರು.

ಜನಪರ ಕಾಳಜಿ ರೋಗ ರುಜಿನಗಳನ್ನು ಗುಣಪಡಿಸಿದರು ಅಬಲೆಯವರ ಆಶ್ರಮವೊಂದನ್ನು ತೆರೆದು ಅದಕ್ಕೆ ಸಂತ ಮಾರ್ಥ ಅನಾಥಾಶ್ರಮ ಎಂಬ ಹೆಸರಿಟ್ಟರು. ಬೀದಿಗಳಲ್ಲಿ ಕುಂಟುತ್ತ ಮಂದಗತಿಯಲ್ಲಿ ನಡೆದಾಡುವಾಗ ಅನಾಥರಾಗಿ ಕಂಡ ಸ್ತ್ರೀಯರನ್ನು ಆಶ್ರಮಕ್ಕೆ ಕರೆತರುತ್ತಿದ್ದರು. ಕ್ರಿ.ಶ. 1540 ರಲ್ಲಿ ಇಗ್ನಾಷಿಯವರು ಪ್ರಾರಂಭಿಸಿದ ಯೇಸು ಸಭೆಗೆ ಜಗದ್ಗುರುಗಳಿಂದ ಅನುಮತಿ ದೊರೆಯಿತು. 

ಅವರ ಸಭೆಯ ಮೂಲ ಉದ್ದೇಶ ರೋಗಿಗಳ ಮತ್ತು ಬಡವರ ಆರೈಕೆ ಮಾಡುವುದು 1549 ರಲ್ಲಿ ಯೇಸು ಸಭೆಯ ಎಲ್ಲಾ ನಿವಾಸಿಗಳ ಮೇಲೆ ಆಯ್ಹೆಚ್ಎಸ್ ಎಂಬ ಅಕ್ಷರಗಳನ್ನು ಮುದ್ರಿಸಬೇಕು. ಎಂದು ಆದೇಶಿಸಿದರು. (ಆಯ್ಹೆಚ್ಎಸ್) ಎಂದರೆ ಗ್ರೀಕ್ ಭಾಷೆಯಲ್ಲಿ ಯೇಸು ಎಂಬ ನಾಮಕ್ಕೆ ಬರುವ ಮೂರು ಅಕ್ಷರಗಳಿವು. 

ಎಲ್ಲವನ್ನು ದೇವರ ಉನ್ನತ ಮಹಿಮೆಗಾಗಿ ಮಾಡುವೆಂಬುದೇ ಎಲ್ಲ ಸಂಸ್ಥೆಗಳ ಮೇಲೆ ಬರೆಸಿದರು. ಕ್ರಿ.ಶ. 1556ನೇ ಜುಲೈ 31 ರಂದು ಸಂತ ಇಗ್ನಾಷಿಯವರು ಮೃತರಾದರು. ಸಂತ ಇಗ್ನಾಷಿಯಯವರನ್ನು ಪ್ರಬೋಧಕರು ಮತ್ತು ಸೈನಿಕರ ಪಾಲಕರೆಂದು ಕರೆಯಲಾಗಿದೆ.

- ಸಿ. ಡಿ. ಕರಿಗಾರ

ಬೆಟಗೇರಿ

ಮೊ: 988605069 

ಸುದ್ದಿ ಓದಿ