ಕೊರೋನಾ ಲಸಿಕೆ ಪಡೆವ ಮುನ್ನ ರಕ್ತದಾನ ಮಾಡಿ : ಸೋನು ನಿಗಮ್
ಮುಂಬೈ, ಮೇ 06:ಖ್ಯಾತ ಗಾಯಕ ಸೋನು ನಿಗಮ್ ಕೊರೋನಾ ಲಸಿಕೆ ಪಡೆದುಕೊಂಡಿದ್ದು, ಇದಕ್ಕೂ ಮುನ್ನ ರಕ್ತದಾನ ಮಾಡಿದ್ದಾರೆ. ಇದೇ ವೇಳೆ, ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೊದಲು ರಕ್ತದಾನ ಮಾಡಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಮುಂಬೈನಲ್ಲಿ ರಕ್ತದಾನ ಮಾಡಿದ ಸೋನು ನಿಗಂ, ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೊದಲು ರಕ್ತದಾನ ಮಾಡಿ. ಇದರಿಂದ ಎಷ್ಟೋ ಜನರಿಗೆ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದಾರೆ.