ಮನರಂಜನೆ

ಖ್ಯಾತ ನಟ ‘ಶಂಖನಾದ’ ಅರವಿಂದ್ ಕೊರೋನಾಗೆ ಬಲಿ

ಖ್ಯಾತ ನಟ ‘ಶಂಖನಾದ’ ಅರವಿಂದ್ ಕೊರೋನಾಗೆ ಬಲಿ

ಬೆಂಗಳೂರು, ಮೇ 07: ಕೋವಿಡ್ ಮಹಾಮಾರಿಗೆ ಖ್ಯಾತ ನಟ 'ಶಂಖನಾದ' ಅದವಿಂದ್ ಬಲಿಯಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಇತ್ತೀಚೆಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರಾದರೂ, ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ನಿಧನ ಹೊಂದಿದ್ದಾರೆ. ಕಳೆದ ವರ್ಷ ಕೊರೊನಾ ಸಮಯದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾಗಿ ಹೇಳಿಕೊಂಡಿದ್ದ ಅರವಿಂದ್ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ತೀವ್ರ ಕಡಿಮೆ ಆಗಿತ್ತು. ಅರವಿಂದ್ ಅವರ ಪುತ್ರಿ ಮಾನಸ ಹೊಳ್ಳ ಖ್ಯಾಗ ಸಂಗೀತ ನಿರ್ದೇಶಕಿಯಾಗಿದ್ದಾರೆ.  ಮತ್ತೋರ್ವ ಪುತ್ರಿ ಪ್ರಾರ್ಥನಾ ಹಾಗೂ ಪುತ್ರ ಅಭಿಷೇಕ್ ಕೂಡ ಕಲಾವಿದರಾಗಿದ್ದಾರೆ.  ಅರವಿಂದ್ ಪತ್ನಿ ರಮಾ ಅವರೂ ಸಹ  2 ತಿಂಗಳ ಹಿಂದೆ ಕೊರೋನಾಗೆ ಬಲಿಯಾಗಿದ್ದರು.ಸಾರಾ ಅಬೂಬಕ್ಕರ್ ಅವರ ಕೃತಿ 'ವಜ್ರಗಳು' ಆಧಾರಿತ 'ಸಾರಾ ವಜ್ರ'ದಲ್ಲಿ ಮುಸ್ಲಿಂ ಪಾತ್ರದಲ್ಲಿ ನಟಿಸಿದ್ದರು. ಇದೇ ಅವರು ನಟಿಸಿದ ಕೊನೆಯ ಸಿನಿಮಾ ಆಗಿದ್ದು, ಇನ್ನಷ್ಟೆ ಬಿಡುಗಡೆಯಾಗಬೇಕಿದೆ. ಈ ಚಿತ್ರದಲ್ಲಿ ಅನುಪ್ರಭಾಕರ್ ಹಾಗೂ ರೆಹಮಾನ್ ನಟಿಸಿದ್ದಾರೆ. ಸಿನಿಮಾವನ್ನು ಆರ್ನಾ ಸಾಧ್ಯ ನಿರ್ದೇಶನ ಮಾಡಿದ್ದಾರೆ.ಅಪರಿಚಿತ, ಆಗಂತುಕ, ಬೆಟ್ಟದ ಹೂವು, ಶಂಖನಾದ ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪನ್ನು ಅರವಿಂದ್ ಮೂಡಿಸಿದ್ದರು. ಧಾರಾವಾಹಿ ಹಾಗೂ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಲ್ಲದೆ, ‘ಸಿಕ್ಸ್ ಟು ಸಿಕ್ಸ್’, ‘ಗಪ್ ಚುಪ್’ ಚಿತ್ರಗಳನ್ನು ನಿರ್ಮಿಸಿದ್ದರು.

  


ಸುದ್ದಿ ಓದಿ