ಮನರಂಜನೆ

ಕೋವಿಡ್ 19 : ನಟ ಶಮನ್ ಮಿತ್ರು ಸಾವು

ಕೋವಿಡ್ 19 : ನಟ ಶಮನ್ ಮಿತ್ರು ಸಾವು

ಚೆನ್ನೈ, ಜೂನ್ 17: ಕೊರೋನಾ ಸೋಂಕಿಗೆ ತಮಿಳು ಚಿತ್ರರಂಗದ ನಟ, ಛಾಯಾಗ್ರಾಹಕ ಶಮನ್ ಮಿತ್ರು ಮೃತಪಟ್ಟಿದ್ದಾರೆ.  ಅವರಿಗೆ 43 ವರ್ಷ ವಯಸ್ಸಾಗಿತ್ತು.ಇಂದು ಜೂನ್ 17ರ ಬೆಳಗ್ಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶಮನ್ ಕೊನೆಯುಸಿರೆಳೆದಿದ್ದಾಗಿ ತಿಳಿದುಬಂದಿದೆ. ಕೊರೋನಾ ಸೋಂಕು ನಿವಾರಣೆಗಾಗಿ ಶಮನ್ ಸುಮಾರು ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಶಮನ್ ಮಿತ್ರು ಪತ್ನಿ ಮತ್ತು ಐದು ವರ್ಷ ಮಗನನ್ನು ಬಿಟ್ಟು ಅಗಲಿದ್ದಾರೆ. ತಮಿಳು ಚಿತ್ರೋದ್ಯಮದಲ್ಲಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದ ಶಮನ್ 2019ರಲ್ಲಿ ತೆರೆಕಂಡ 'ತೊರಟ್ಟಿ' ಚಿತ್ರದ ಮೂಲಕ ನಾಯನಟನಾಗಿ ಪರಿಚಿತರಾಗಿದ್ದರು. ಸ್ವತಃ ಅವರೇ ನಿರ್ಮಿಸಿದ್ದ ಚಿತ್ರವನ್ನು ಮಾರಿಮುತ್ತು ನಿರ್ದೇಶಿಸಿದ್ದರು. ದೇಶದ ಹಲವು ಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನಗೊಂಡಿತ್ತು.

  


ಸುದ್ದಿ ಓದಿ