ಎಸ್ಇಎಸ್ ಆಂಗ್ಲ ಮಾಧ್ಯಮ ಶಾಲಾ ಥ್ರೋ ಬಾಲ್ ತಂಡ ರಾಷ್ಟ್ರಮಟ್ಟ ಶಿಬಿರಕ್ಕೆ ಆಯ್ಕೆ
ಸಿರುಗುಪ್ಪ 22: ಎಸ್ ಇ ಎಸ್ ಆಂಗ್ಲ ಮಾಧ್ಯಮ ಶಾಲೆಯ ಥ್ರೋ ಬಾಲ್ ಆಟಗಾರರ ತಂಡದ ವಿದ್ಯಾರ್ಥಿಗಳಾದ ಎನ್ ಕೆ ಶಾಶಾ ಕೋರಿ ಶಂಕರ್ ಖಾಜಾ ಬಂದ ನವಾಜ್ ಅನುಷಾ ಅವರು ನಾಲ್ಕು ಆಗಸ್ಟ್ 2023 ರಿಂದ 6 ಆಗಸ್ಟ್ 2023ರ ವರೆಗೆ ಪಾಂಡಿಚೆರಿಯಲ್ಲಿ ನಡೆಯಲಿರುವ ಬಾಲಕ ಮತ್ತು ಬಾಲಕಿಯರ ಸಬ್ ಜೂನಿಯರ್ ರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ ಶಿಪ್ಗೆ ಆಯ್ಕೆಯಾಗಿರುತ್ತಾರೆ 31 ಜುಲೈ 2023 ರಿಂದ 3 ಆಗಸ್ಟ್ 2023ರ ಶಿಬಿರದಲ್ಲಿ ಪಾಲ್ಗೊಳ್ಳಲು ತ್ರೋಬಾಲ್ ಆಟದ ತಂಡದ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವಂತೆ ಆಟಗಾರರು ಏಳು ಆಗಸ್ಟ್ 2023 ರಂದು ಬೆಳಿಗ್ಗೆ ತಮ್ಮ ಸ್ಥಳಕ್ಕೆ ಹಿಂತಿರುಗಿವರು. ಕರ್ನಾಟಕ ರಾಜ್ಯ ಥ್ರೋ ಬಾಲ್ ಅಸೋಸಿಯೇಷನ್ ರಿಜಿಸ್ಟರ್ ಥ್ರೋ ಬಾಲ್ ಪೆಡರಷನ್ ಆಫ್ ಇಂಡಿಯಾ ಸಂಯೋಜಿತ ಚಿಕ್ಕಬಳ್ಳಾಪುರ ಕಾರ್ಯದರ್ಶಿ ಪ್ರಸನ್ನ ಕುಮಾರ್ ಅವರು ಮತ್ತು ಕೋಶಾಧಿಕಾರಿ ಡಾ.ಎನ್. ಚಂದ್ರಪ್ಪ ಅವರು ಸಂಸ್ಥೆಯ ಪರವಾಗಿ ಅಭಿನಂದಿಸಿದ್ದಾರೆ.
ಎಸ್ಇಎಸ್ ಶಾಲೆಯ ದೈಹಿಕ ಶಿಕ್ಷಕ ರಾದ ವೈಡಿ ವೆಂಕಟೇಶ್ ಸಾಮಾಜಿಕ ಕಾರ್ಯಕರ್ತ ಎ ಮೊಹಮ್ಮದ್ ನೌಶಾದ್ ಅಲಿ ಮತ್ತಿತರರು ಉಪಸ್ಥಿತರಿದ್ದರು.