ಮನರಂಜನೆ

ಸಿನಿ ತಂತ್ರಜ್ಞರು, ಕಲಾವಿದರಿಗೆ ಕೋವಿಡ್ ಲಸಿಕೆ ವ್ಯವಸ್ಥೆಗೆ ಮನವಿ

ಸಿನಿ ತಂತ್ರಜ್ಞರು, ಕಲಾವಿದರಿಗೆ ಕೋವಿಡ್ ಲಸಿಕೆ ವ್ಯವಸ್ಥೆಗೆ ಮನವಿ

ಬೆಂಗಳೂರು, ಮೇ 24:  ಕೋವಿಡ್ 19 ಲಾಕ್ ಡೌನ್ ನಿಂದ  ತೀವ್ರ ಸಂಕಷ್ಟದಲ್ಲಿರುವ ಚಿತ್ರೋದ್ಯಮದ ಕಲಾವಿದರಿಗೆ, ತಂತ್ರಜ್ಞರಿಗೆ, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಹಾಗೂ ಕೋವಿಡ್ ಲಸಿಕೆ ಹಾಕಲು ವಿಶೇಷ ವ್ಯವಸ್ಥೆಗೆ ಮನವಿ ಮಾಡಲಾಗಿದೆ.ಈ ಕುರಿತು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ತಕ್ಷ ಸುನೀಲ್ ಪುರಾಣಿಕ್ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.  ಈ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕ ಹಾಗೂ ಕಲಾವಿದರ ಸಂಘದ ಉಪಾಧ್ಯಕ್ಷ ರಾಕ್ ಲೈನ್ ವೆಂಕಟೇಶ್ ಉಪಸ್ಥಿತರಿದ್ದರು. 

  


ಸುದ್ದಿ ಓದಿ