'ಸಂಚಾರ' ನಿಲ್ಲಿಸಿ ಭೂತಾಯಿ ಮಡಿಲು ಸೇರಿದ ವಿಜಯ್
ಬೆಂಗಳೂರು, ಜೂನ್ 15: ರಸ್ತೆ ಅಪಘಾತದಲ್ಲಿ ಗಾಯಗೊಂಡು ಕೊನೆಯುಸಿರೆಳೆದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್(38) ಅವರ ಅಂತ್ಯಕ್ರಿಯೆ ನೆರವೇರಿದ್ದು, ಭೂತಾಯಿಯ ಮಡಿಲು ಸೇರಿದ್ದಾರೆ.ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಸಮೀಪದಲ್ಲಿರುವ ವಿಜಯ್ ಸ್ನೇಹಿತ ರಘು ಅವರ ತೋಟದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿತು. ಕುಪ್ಪೂರು ಯತೀಶ್ವರ ಶಿವಾಚಾರ್ಯ ನೇತೃತ್ವದಲ್ಲಿ ಈ ಎಲ್ಲ ಕಾರ್ಯಗಳನ್ನೂ ನೆರವೇರಿಸಲಾಯಿತು. ವಿಧಿವಿಧಾನಕ್ಕೆ ಬಿಲ್ವಪತ್ರೆ, ವಿಭೂತಿ ಗಟ್ಟಿಗಳನ್ನು ಬಳಸಲಾಯಿತು.ಇದಕ್ಕೂ ಮುನ್ನ ಪೊಲೀಸರು ಮೂರು ಸುತ್ತು ಕುಶಾಲುತೋಪು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು.