ಮನರಂಜನೆ

ಬಾಲಿವುಡ್‌ ಚಿತ್ರ ಸಾಹಿತಿ ಸಾಗರ್‌ ಸರ್ಹಾದಿ ಇನ್ನಿಲ್ಲ.... ಗಣ್ಯರ ಸಂತಾಪ

ಬಾಲಿವುಡ್‌   ಚಿತ್ರ  ಸಾಹಿತಿ ಸಾಗರ್‌ ಸರ್ಹಾದಿ  ಇನ್ನಿಲ್ಲ.... ಗಣ್ಯರ ಸಂತಾಪ

ಮುಂಬೈ,ಮಾ 22 :  ಬಾಲಿವುಡ್   ಸುಪ್ರಸಿದ್ದ   ಚಿತ್ರ ಸಾಹಿತಿ, ನಿರ್ದೇಶಕ  ಸಾಗರ್‌  ಸರ್ಹಾದಿ  ಸೋಮವಾರ ಮುಂಜಾನೆ    ನಿಧನ ಹೊಂದಿದ್ದಾರೆ.  ಅವರಿಗೆ 87 ವರ್ಷ ವಯಸ್ಸಾಗಿತ್ತು.  ಸಾಗರ್‌ ಸರ್ಹಾದಿ  ನಿಧನಕ್ಕೆ   ಬಾಲಿವುಡ್‌   ಪ್ರಮುಖರು  ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.    ಚಿತ್ರಕತೆ  ಬರವಣಿಗೆಯಲ್ಲಿ  ಸಾಗರ್‌ ಸರ್ಹಾದಿ ವಿಶೇಷ  ಹೆಸರು ಹೊಂದಿದ್ದರು.  ನೂರಿ,  ಕಭಿ ಕಭಿ, ಸಿಲ್‌ ಸಿಲಾ   ಚಾಂದಿನಿ, ದಿವಾನಾ,  ಬಜಾರ್ ನಂತಹ  ಹಲವಾರು ಹಿಂದಿ ಸಿನಿಮಾಗಳಿಗೆ ಕಾರ್ಯನಿರ್ವಹಿಸಿದ್ದರು.  ಸಾಗರ್ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ದಿನಗಳಿಂದ ಅನ್ನ ಆಹಾರಗಳನ್ನು ತ್ಯಜಿಸಿದ್ದ ಅವರು    ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ಬಾಲಿವುಡ್‌  ನಟ  ಜಾಕಿ ಶ್ರಾಫ್‌,   ಸರ್ಹಾದಿ  ನಿಧನಕ್ಕೆ   ಸಂತಾಪ ವ್ಯಕ್ತಪಡಿಸಿದ್ದಾರೆ.  1976ರಲ್ಲಿ ಸೂಪರ್‌ ಹಿಟ್‌  ಕಭಿಕಭಿ  ಚಿತ್ರಕ್ಕೆ  ಸಂಭಾಷಣೆ  ರಚಿಸಿದ್ದರು. ಆ ಸಿನಿಮಾದ ಅತ್ಯುತ್ತಮ ಸಂಭಾಷಣೆಗಾಗಿ  ಅವರಿಗೆ ಫಿಲ್ಮ್‌ ಫೇರ್‌ ಪ್ರಶಸ್ತಿ ಲಭಿಸಿತ್ತು.  ಯಶ್‌ ಛೋಪ್ರಾ ನಿರ್ದೇಶನ  ಆ ಸಿನಿಮಾದಲ್ಲಿ   ಅಮಿತಾಬ್‌  ಶಶಿ ಕಪೂರ್‌, ರಾಖಿ, ವಹಿದಾ ರೆಹಮಾನ್.  ರಿಷಿ ಕಪೂರ್‌, ನಿತೂ ಸಿಂಗ್‌  ನಟಿಸಿದ್ದರು ಕಭಿ ಕಭಿ ನಂತರ ಸರ್ಹಾದಿ   ಸಂಭಾಷಣೆ ಬರೆದಿದ್ದ  ನೂರಿ 1979, ಚಾಂದಿನಿ 1989 ಸೇರಿವೆ. 

 




ಸುದ್ದಿ ಓದಿ