ಬಳ್ಳಾರಿ

ಗ್ರಾಪಂ ನೂತನ ಅಧ್ಯಕ್ಷರಿಗೆ ಶುಭಕೋರಿದ ಗ್ರಾಮೀಣ ಶಾಸಕ ಬಿ. ನಾಗೇಂದ್ರ

ಗ್ರಾಪಂ ನೂತನ ಅಧ್ಯಕ್ಷರಿಗೆ ಶುಭಕೋರಿದ ಗ್ರಾಮೀಣ ಶಾಸಕ ಬಿ. ನಾಗೇಂದ್ರ

ಬಳ್ಳಾರಿ: ಗ್ರಾಮಾಂತರ ಕ್ಷೇತ್ರದ ಶಿಡಿಗಿನಮೊಳ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪೂಜಾರಿ ರುದ್ರಯ್ಯ ಅವರು ಜಯಶೀಲರಾಗಿದ್ದಾರೆ. ಶಿಡಿಗಿನಮೊಳ ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆಯಲ್ಲಿ ಒಟ್ಟು 18 ಗ್ರಾಮ ಪಂಚಾಯಿತಿ ಸದಸ್ಯರಲ್ಲಿ 11 ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ 7 ಜನ ಸದಸ್ಯರು ಕೈ ಎತ್ತುವ ಮೂಲಕ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಜಯಶೀಲ ಪೂಜಾರಿ ರುದ್ರಯ್ಯ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕ ಬಿ.ನಾಗೇಂದ್ರ ಅವರು ಹಾರ ಹಾಕಿ, ಸಿಹಿ ಹಂಚಿ ನೂತನ ಅಧ್ಯಕ್ಷ ಪೂಜಾರಿ ರುದ್ರಯ್ಯ ಅವರಿಗೆ ಶುಭ ಕೋರಿದರು.ನಂತರ ಶಾಸಕ ಬಿ.ನಾಗೇಂದ್ರ ಅವರು ಮಾತನಾಡಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಪೂಜಾರಿ ರುದ್ರಯ್ಯ ಅವರು  ಸಕರ್ಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಜನರಿಗೆ ಒಳ್ಳೆಯ ಪಂಚಾಯತಿ ವತಿಯಿಂದ ಸೌಲಭ್ಯ ಹಾಗೂ ಕಾರ್ಯಕ್ರಮಗಳನ್ನು  ಗ್ರಾಮಗಳ ಅಭಿವೃದ್ಧಿ ಪಡಿಸಲಿ ಈ ಪಂಚಾಯತಿಯ ವ್ಯಾಪ್ತಿಯ  ಜವಾಬ್ದಾರಿಯ ಬಹುದೊಡ್ಡದಾಗಿ ವಹಿಸಿದೆ.ಆದ್ದರಿಂದ ಹೆಚ್ಚಾಗಿ ಜನರ ಕಲ್ಯಾಣಕ್ಕಾಗಿ ಕಾರ್ಯದಲ್ಲಿ ತೊಡಗಿರಿ ಎಂದು ಹೇಳಿ ಶುಭ ಹಾರೈಸಿದರು.  

ಜನಪ್ರಿಯ ನಾಯಕ ವೆಂಕಟೇಶ್ ಪ್ರಸಾದ್ ಅವರು ಕಾಂಗ್ರೆಸ್ ಪಕ್ಷದ ಮುಖಂಡ ವೆಂಕಟೇಶ್, ಹಗರಿ ಹೊನ್ನೂರಪ್ಪ, ಶ್ರೀರಾಮ್, ಗಿರೇಪ್ಪ  ಶಿಡಿಗಿನಮೊಳ ಗ್ರಾಮ ಪಂಚಾಯತಿ ಸದಸ್ಯ ಶಿವಾಜಿ, ಭೀಮಲಿಂಗ, ಎರ್ರಿಸ್ವಾಮಿ, ತಾಯಣ್ಣ, ತಿಮ್ಮಯ್ಯ, ಚಂದ್ರ, ಸೀನಾ, ಗಾದಿಲಿಂಗ, ಇಂದ್ರಸೇನಾರೆಡ್ಡಿ ಮತ್ತು ರಂಗ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಸದಸ್ಯರು ಊರಿನ ಮುಖಂಡರು ಇತರರು ಉಪಸ್ಥಿತರಿದ್ದರು 

ಸುದ್ದಿ ಓದಿ